ಶ್ರೀರಂಗಪಟ್ಟಣದಲ್ಲಿ “ಮಾಯಾಮೃಗ”

 

ಸಿನಿಮಾ ಪತ್ರಕರ್ತನಾಗಿ ಗುರುತಿಸಿಕೊಂಡಿರುವ ಯತಿರಾಜ್, ಈಗ ನಿರ್ದೇಶಕ ಹಾಗೂ ಕಲಾವಿದನಾಗೂ ಚಿರಪರಿಚಿತ.

 

ಪ್ರಸ್ತುತ ಯತಿರಾಜ್ ನಿರ್ದೇಶಿಸಿ , ನಾಯಕನಾಗೂ ನಟಿಸುತ್ತಿರುವ

” ಮಾಯಾಮೃಗ” ಚಿತ್ರದ ಚಿತ್ರೀಕರಣ ಶ್ರೀರಂಗಪಟ್ಟಣದ ಬಳಿಯ ಹಳ್ಳಿಯೊಂದರಲ್ಲಿ ಆರಂಭವಾಯಿತು. ಸ್ಥಳೀಯ ಮುಖಂಡರಾದ ರಾಜಣ್ಣ, ಜಯಣ್ಣ ಮುಂತಾದವರು ಚಿತ್ರೀಕರಣ ಆರಂಭದ ವೇಳೆ ಉಪಸ್ಥಿತರಿದ್ದು, ಶುಭ ಕೋರಿದರು. ಶ್ರೀರಂಗಪಟ್ಟಣದ ಸುತ್ತಮುತ್ತ ಇಪ್ಪತ್ತೈದು ದಿನಗಳ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.

 

ಎಸ್ ಜಿ ಆರ್ ಫಿಲಂಸ್ ಲಾಂಛನದಲ್ಲಿ ಜಯಲಕ್ಷ್ಮಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ವಿನು ಮನಸು ಸಂಗೀತ ನಿರ್ದೇಶನ, ವಿದ್ಯಾ ನಾಗೇಶ್ ಛಾಯಾಗ್ರಹಣ ಹಾಗೂ ಶಶಿ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.

 

ಯತಿರಾಜ್ ಅವರಿಗೆ ನಾಯಕಿಯಾಗಿ ಸೋನು ಸಾಗರ ಅಭಿನಯಿಸುತ್ತಿದ್ದಾರೆ. “ರಂಗಿತರಂಗ” ಅರವಿಂದರಾವ್, ಕುರಿ ರಂಗ, ವಿ ಸಿ ಎನ್ ಮಂಜು,

ಶ್ರೀರಂಗಪಟ್ಟಣ ಮಂಜು, ಸಿಂಚನ, ಮಿಥಾಲಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Leave a Reply

Your email address will not be published. Required fields are marked *

Next Post

ಗಾನ ಗಂಧರ್ವನಿಗೆ  ಗಾನ ನಮನ.

Tue Apr 19 , 2022
  ಏಪ್ರಿಲ್ 24 ವರನಟ  ಡಾ||ರಾಜಕುಮಾರ್ ಹುಟ್ಟುಹಬ್ಬ.‌ ಈ ಸಂದರ್ಭದಲ್ಲಿ ಏಪ್ರಿಲ್ 28 ಗರುವಾರ ಸಂಜೆ 6.30ಕ್ಕೆ ಗಾನಗಂಧರ್ವ ಡಾ||ರಾಜಕುಮಾರ್ ನೆನಪಿನಲ್ಲಿ “ಮೈ ನೇಮ್ ಇಸ್ ರಾಜ್” ಎಂಬ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಕೆಲವು ವರ್ಷಗಳ ಹಿಂದೆ “ಸರಿಗಮಪ” ಮೂಲಕ ಮರಿ ಅಣ್ಣವ್ರು ಅಂತಲೇ ಹೆಸರಾಗಿದ್ದ ಮನೋಜವಂ‌ ಅತ್ರೇಯ ಸಾರಥ್ಯದಲ್ಲಿ ಈ ಸಂಗೀತ ಕಾರ್ಯಕ್ರಮ ನಡೆಯಲಿದೆ. .   ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮನೋಜವಂ ಆತ್ರೇಯ ಮಾತನಾಡಿದರು. ನಾನು […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: