ಮೇ ತಿಂಗಳಲ್ಲಿ ಅಪ್ಪು ಮತ್ತೆ ತೆರೆಯ ಮೇಲೆ!

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಅಭಿಮಾನಿಗಳ ಪಾಲಿನ ಅಪ್ಪು ಮತ್ತು ದೇವರು . ಅಪ್ಪು ನಿಧನರಾಗಿರುವ ಸತ್ಯವನ್ನು ಇನ್ನು ಯಾರೂ ನಂಬುತ್ತಿಲ್ಲ . ಅದರಲ್ಲಿಯೂ , ಅಪ್ಪು ಅವರ ನಟನೆಯನ್ನು ಇನ್ನು ಮುಂದೆ ನಾವು ಬೆಳ್ಳಿ ತೆರೆಯ ಮೇಲೆ ನೋಡಲು ಸಾಧ್ಯವಿಲ್ಲ ಎಂಬುದನ್ನು ನೆನಪಿಸಿಕೊಂಡರೆ ಅಭಿಮಾನಿಗಳಿಗೆ ದುಃಖ ಹೆಚ್ಚಾಗುತ್ತಲೆ ಇದೆ . ಹಾಗಾಗಿಯೇ , ಮಾರ್ಚ್ 17 ರಂದು ಅಪ್ಪು ಅವರ ಹುಟ್ಟುಹಬ್ಬದ ಅಂಗವಾಗಿ ಅವರು ಕೊನೆಯ ಬಾರಿ ಹೀರೋ ಆಗಿ ಅಭಿನಯಿಸಿದ ‘ ಜೇಮ್ಸ್ ‘ ಚಿತ್ರ ರಿಲೀಸ್ ಆದಾಗಿನಿಂದ ಇಂದಿಗೂ ಹಲವು ಥಿಯೇಟರ್​ಗಳಲ್ಲಿ ಹೌಸ್​ಫುಲ್ ಆಗಿ ಪ್ರದರ್ಶನ ಕಾಣುತ್ತಿದೆ .

ಅಪ್ಪು ಅವರನ್ನು ಕೊನೆಯ ಬಾರಿ ಹೀರೋ ಆಗಿ ತೆರೆ ಮೇಲೆ ಕಂಡ ಅಭಿಮಾನಿಗಳು ದಿಲ್ ಖುಷ್ ಆಗಿ ಜತೆಗೆ ಸಿಕ್ಕಾಪಟ್ಟೆ ನೋವು ಕೂಡಾ ಅನುಭವಿಸಿದ್ದಾರೆ ಎಂದರೆ ತಪ್ಪಾಗುವುದಿಲ್ಲ . ಹೀಗಿರುವಾಗ , ಅಪ್ಪು ಅವರ ಮತ್ತೊಂದು ಸಿನಿಮಾ ಬೆಳ್ಳಿ ತೆರೆಯ ಮೇಲೆ ಮಿಂಚಲಿದೆ ಎಂದರೇ ಅಭಿಮಾನಿಗಳಿಗೆ ಎಷ್ಟು ಖುಷಿಯಾಗಬಹುದು ಅಲ್ವಾ . ಹೌದು , ‘ ಜೇಮ್ಸ್ ‘ ಚಿತ್ರದ ಬಳಿಕ ಮುಂದೇನು ಅಂತ ಚಿಂತಿಸುತ್ತಿದ್ದ ಅಪ್ಪು ಅಭಿಮಾನಿಗಳಿಗೆ ಇರುವ ಉತ್ತರವೇ ಪುನೀತ್ ಅವರ ಕನಸಿನ ಕೂಸು ‘ ಗಂಧದ ಗುಡಿ ‘.

‘ ಗಂಧದ ಗುಡಿ ‘, ಕರ್ನಾಟಕದ ಹಲವು ಸುಂದರ ಪರಿಸರಗಳು , ಕಾಡುಗಳು , ಗುಡ್ಡ , ಬೆಟ್ಟಗಳನ್ನು ಸುತ್ತಿ ಅಲ್ಲಿನ ಸುಂದರ ದೃಶ್ಯಗಳು ಮತ್ತು ಕರ್ನಾಟಕದ ಪ್ರಾಕೃತಿಕ ಸಂಪತ್ತನ್ನು ಸೆರೆಹಿಡಿದು ತಯಾರಿಸಿರುವ ಒಂದು ದೀರ್ಘ ಅವಧಿಯ ಚಿತ್ರವಾಗಿದೆ . ಈ ಚಿತ್ರದ ಬಗ್ಗೆ ಅಪ್ಪು ಅಭಿಮಾನಿಗಳು ಮಾತ್ರವಲ್ಲದೇ ಇಡೀ ಕರುನಾಡ ಜನತೆ ಕಾತುರರಾಗಿದ್ದು , ಈ ಸಿನಿಮಾದ ಮೂಲಕ ಕೂಡಾ ಅಪ್ಪು ಅವರನ್ನು ಮತ್ತೊಂದು ಬಾರಿ ಬೆಳ್ಳಿ ತೆರೆಯ ಮೇಲೆ ಕಣ್ತುಂಬಿಕೊಳ್ಳಲು ರೆಡಿಯಾಗಿದ್ದಾರೆ . ಅಂತಹ ಅಭಿಮಾನಿಗಳಿಗೆ ಈ ಸಿನಿಮಾದ ರಿಲೀಸ್ ಡೇಟ್ ತಿಳಿದುಕೊಳ್ಳುವ ಉತ್ಸಾಹ ಇರುವುದು ಸಹಜ.

ಅಂದಹಾಗೆ , ಹಲವು ಮೂಲಗಳ ಪ್ರಕಾರ ‘ ಗಂಧದ ಗುಡಿ ‘ ಸಿನಿಮಾ ಮುಂಬರುವ ಮೇ ತಿಂಗಳ ಕೊನೆಯ ವಾರದಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿದೆ . ಹೌದು , ಅಪ್ಪು ಅವರು ಬಹಳ ಆಸೆಯಿಂದ , ಇಷ್ಟ ಪಟ್ಟು ನಿಷ್ಠೆಯಿಂದ ಈ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು . ಆದರೆ , ಅವರ ಕನಸಿನ ಕೂಸನ್ನು ಬೆಳ್ಳಿ ಪರದೆಯ ಮೇಲೆ ನೋಡುವ ಮುನ್ನವೇ ಅವರು ಎಲ್ಲರನ್ನೂ ಬಿಟ್ಟು ಅಗಲಿದ್ದಾರೆ . ಅಪ್ಪು ಅವರ ಈ ಕನಸಿಗೆ ಸಾಥ್ ನೀಡಿದವರೇ ನಿರ್ದೇಶಕ ಅಮೋಘ ವರ್ಷ . ಇನ್ನು , ಪುನೀತ್ ನಿಧನದ ಬಳಿಕ ನಿರ್ದೇಶಕ ಅಮೋಘ ವರ್ಷ ಅವರು ‘ ಗಂಧದ ಗುಡಿ ‘ ಯ ಕೆಲಸವನ್ನು ನಿಲ್ಲಿಸಲಿಲ್ಲ . ಹಾಗೂ , ಪುನೀತ್ ಅವರ ಪತ್ನಿ ಅಶ್ವಿನಿ ತಮ್ಮ ಪಿಆರ್​ಕೆ ಪ್ರೊಡಕ್ಷನ್ ಮೂಲಕ ಅಪ್ಪು ಕನಸು ಸಾಕಾರಗೊಳಿಸಲು ನಿರ್ದೇಶಕ ಅಮೋಘ ವರ್ಷ ಅವರಿಗೆ ಸಹಾಯ ಮಾಡಿದ್ದಾರೆ .

ಈ ಸಿನಿಮಾದ ಟೀಸರ್ ಈಗಾಗಲೇ ಡಿಸೆಂಬರ್ 6 ರಂದು ರಿಲೀಸ್ ಆಗಿದ್ದು ಎಲ್ಲರಿಂದ ಒಳ್ಳೆಯ ಮೆಚ್ಚುಗೆ ಗಳಿಸಿತ್ತು . ಇದೀಗ , ಸಿನಿಮಾನೇ ರಿಲೀಸ್‌ಗೆ ಸಜ್ಜಾಗುತ್ತಿದ್ದು , ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ರಿಲೀಸ್ ಡೇಟ್ ಅನ್ನು ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸಲಿದ್ದಾರೆ ಎಂಬ ಮಾಹಿತಿ ಇದೆ . ಅಪ್ಪು ಅವರು ಹೀರೋ ಆಗಿ ಕಾಣಿಸಿಕೊಂಡ ‘ ಜೇಮ್ಸ್ ‘ ಚಿತ್ರವನ್ನು ಅಭಿಮಾನಿಗಳು ಹೇಗೆ ಸ್ವಾಗತಿಸಿದ್ದಾರೆ ಎಂದು ಎಲ್ಲರೂ ನೋಡಿದ್ದಾರೆ . ಹಾಗಾದರೆ , ಅಪ್ಪು ಅವರ ಈ ಕನಸಿನ ಕೂಸಾದ ‘ ಗಂಧದ ಗುಡಿ ‘ ಯನ್ನು ಹೇಗೆಲ್ಲಾ ಸ್ವಾಗತಿಸಲಿದ್ದಾರೆ ಎಂದು ಕಾದು ನೋಡಬೇಕಿದೆ .

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

Leave a Reply

Your email address will not be published. Required fields are marked *

Next Post

ಕ್ಯಾಲಿಫೋರ್ನಿಯಾದಲ್ಲಿ ಗುಂಡಿನ ದಾಳಿ..

Mon Apr 4 , 2022
ಅಮೆರಿಕಾ ಸಂಯುಕ್ತ ಒಕ್ಕೂಟದ  ಕ್ಯಾಲಿಫೋರ್ನಿಯಾದಲ್ಲಿ ಭಯಾನಕ ಗುಂಡಿನ ದಾಳಿ ನಡೆದಿದೆ. ಇಲ್ಲಿನ ಸ್ಯಾಕ್ರಮೆಂಟೊದಲ್ಲಿ ಮಧ್ಯರಾತ್ರಿ ಈ ಗುಂಡಿನ ದಾಳಿ ನಡೆದಿದೆ.  ಸ್ಯಾಕ್ರಮೆಂಟೊ ಕಿಂಗ್ಸ್ ಬಾಸ್ಕೆಟ್‌ಬಾಲ್ ತಂಡವು ಆಡುವ ಮತ್ತು ಪ್ರಮುಖ ಸಂಗೀತ ಕಚೇರಿಗಳು ನಡೆಯುವ ಗೋಲ್ಡನ್ 1 ಸೆಂಟರ್‌ನ ಸಮೀಪವಿರುವ ಡೌನ್‌ ಟೌನ್‌ನಲ್ಲಿ ತಡರಾತ್ರಿ ಸುಮಾರು 2 ಗಂಟೆಗೆ ಗುಂಡಿನ ದಾಳಿ ನಡೆದಿದೆ. ಈ ಭೀಕರ ಗುಂಡಿನ ದಾಳಿಯಲ್ಲಿ 6 ಮಂದಿ ಮೃತಪಟ್ಟು 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: