ಈಗಿನ ಕಾಲದಲ್ಲಿ ಪ್ರತಿಯೊಬ್ಬರು ತಮ್ಮ ಸೌಂದರ್ಯದ ಬಗ್ಗೆ ತುಂಬಾನೆ ಕಾಳಜಿ ವಯಿಸುತಾರೆ, ಆದರಲ್ಲೂ ಕರೆಯದೆ ಬರುವ ಅತಿಥಿ ಅಂದ್ರೆ ಅದುವೆ ಪಿಂಪಲ್ಸ್, ಮೊಡವೆ, ಹುಡುಗಿಯರಾಗಲಿ ಹುಡುಗರಾಗಲಿ ಮುಖದಲ್ಲಿ ಮೊಡವೆ ಇತ್ತು ಅಂದ್ರೆ ಯಾವುದೇ ಕೆಲಸದಲ್ಲಿ ಆತ್ಮವಿಶ್ವಸ ಇರುವುದಿಲ್ಲ. ಅಂತವರಿಗೆ ಮನೆಯಲ್ಲೇ ಸಿಗುತ್ತೆ ಪರಿಹಾರ;
ಟೊಮಾಟೊ, ಸಕ್ಕರೆ, ಅರಿಶಿನ, ಇದ್ರೆ ಸಾಕು.
ಒಂದು ಬಟ್ಟಲು ತೆಗೆದುಕೊಳ್ಳಿ ಅದಕ್ಕೆ ಟೊಮಾಟೊ ಹಣ್ಣನ್ನು ಹಿಂಡಿ ರಸ ತೆಗೆರಿ, ಅರಿಶಿನ ಒಂದು ಚಮಚ, ಸಕ್ಕರೆ ಎರಡು ಚಮಚ, ಈ ಮೂರನ ಕಲಸಿ ಕ್ರಿಮ್ ರೀತಿ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ, ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ. ರಾತ್ರಿ ಮಲಗುವ ಮುನ್ನ ತಣ್ಣೀರಿನಲ್ಲಿ ಮುಖತೊಳೆದ ನಂತರ ಈ ಪೆಸ್ಟ್ ಹಚ್ಚಿದರೆ ಮೊಡವೆ ಮತ್ತು ಕಲೆಗಳು ಒಂದು ತಿಂಗಳಲ್ಲಿ ಕಡಿಮೆ ಆಗಿರುತ್ತದೆ.
ಟೊಮಾಟೊ ಹಣ್ಣಿನ ಉಪಯೋಗಗಳು;
ಟೊಮಾಟೊ ಆರೋಗ್ಯಕ್ಕೆ ಹಾಗೂ ಚರ್ಮಕ್ಕೆ ತುಂಬಾ ಒಳ್ಳೆಯದು ಟೊಮೆಟೋ ರಸವನ್ನು ಚರ್ಮದ ಮೇಲೆ ಹಚ್ಚಿದರೆ, ಚರ್ಮದ ಹೊಳಪು ಹೆಚ್ಚಾಗುತ್ತದೆ ಮತ್ತು ಚರ್ಮ ಮೃದುವಾಗುತ್ತದೆ. ಟೊಮೆಟೋ ಹಣ್ಣಿನಲ್ಲಿ ನೈಸರ್ಗಿಕ ವಿಟಮಿನ್ ಗಳು ಮತ್ತು ಖನಿಜಗಳು ಇರುವುದರಿಂದ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು.
ತ್ವಚೆಗೆ ಸಕ್ಕರೆಯ ಉಪಯೋಗ ಏನು?
ಸಕ್ಕರೆ ಒಂದು ಸ್ಕ್ರಬ್ ರೀತಿ ಕೆಲಸ ಮಾಡುತ್ತದೆ, ಸಕ್ಕರೆ , ಅರಿಶಿನ ನಿಂಬೆ ಅಥವ ಟೊಮಾಟೊ ಹಣ್ಣಿನ ರಸದಿಂದ ಮುಖ ಸ್ಕ್ರಬ್ ಮಾಡಿದರೆ ಮುಖದಲ್ಲಿ ಇರುವ ಕಲೆಗಳು ಮತ್ತು ಮೊಡವೆ ಕಡಿಮೆ ಆಗುತ್ತದೆ ಮತ್ತು ಮುಖದಲ್ಲಿ ಇರುವ ಕೂದಲು ಸಹ ರೀಮೂ ಹಾಗುತ್ತದೆ,
ಅರಿಶಿನ:
ಶತಮಾನದಿಂದ ಬಳಸುತಿದ್ದಾರೆ ನಮ್ಮ ಹಿರಿಯರು, ಇದರಲ್ಲಿ ಆರೋಗ್ಯಕರ ಲಕ್ಷಣಗಳಿವೆ, ಕಡಲೆಹಿಟ್ಟು ಹಾಗು ಅರಿಶಿನವನ್ನು ಮೊಸರು ಅಥವಾ ಹಸಿ ಹಾಲು ಅಥವಾ ನೀರಿನಲ್ಲಿ ಬೆರಸಿ ಹಚ್ಚಿರಿ ಇದರಿಂದ ಗಡ್ಡ ಮತ್ತು ಮುಖದ ಮೇಲೆ ಬೆಳೆಯುವ ಕೂದಲಿನ ಬೆಳವಣಿಗೆಯನ್ನು ತಡೆಯಬಹುದು, ಒಳ್ಳೆಯ ಪರಿಣಾಮ ಬರಲು ಸತತ ಒಂದು ತಿಂಗಳು ಹಚ್ಚಬೇಕು.
ಟಿಪ್ಸ್ ;- ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ತಣೀರಿನಲ್ಲಿ ಮುಖ ತೊಳೆಯ ಬೇಕು ಈ ರೀತಿ
ಮಾಡಿದರೆ ಮೊಡವೆಗಳು ಬರುವುದಿಲ್ಲ.
ವಾರದಲ್ಲಿ ಮೂರು ಬಾರಿ ಬಿಸಿ ನೀರಿನ ಸ್ಟೀಮ್ ತಗೆದರೆ ಬ್ಲ್ಯಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ಬರುವುದಿಲ್ಲ.
–ಪ್ರಿಯಾಂಕ ಟಿ.