ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಸೋಮಗುದ್ದು ಗ್ರಾಮದಲ್ಲಿ. ಇಲ್ಲಿ ಪಾಪಿ ಗಂಡನಿಂದಲೇ ಬರ್ಬರ ಕೊಲೆಯಾಗಿರೋದು ನೇತ್ರಾವತಿ. ಈಕೆ ಕಳೆದ 12 ವರ್ಷಗಳ ಹಿಂದೆ ಗ್ರಾಮದ ದ್ಯಾಮಣ್ಣನ ಜೊತೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಗೆ ಈಗಾಗಲೇ ಎರಡು ಗಂಡು ಮಕ್ಕಳೂ ಕೂಡಾ ಇವೆ. ಇವರಿಬ್ಬರ ಜೀವನ ಪ್ರಾರಂಭದಲ್ಲಿ ಚೆನ್ನಾಗಿಯೇ ಇತ್ತು, ಆದರೇ ವರ್ಷಗಳು ಕಳೆದಂತೆ ಇಬ್ಬರ ನಡುವೆ ವೈಮನಸ್ಸು ಮೂಡಿ ಪತ್ನಿ ನೇತ್ರಾವತಿ ಶೀಲ ಶಂಕಿಸಿ ಪತಿ ದ್ಯಾಮಣ್ಣ ಆಗಾಗ ಗಾಲಾಟೆ ಮಾಡುತ್ತಿದ್ದನಂತೆ. ಹೀಗೆ ಗಲಾಟೆ ನಾಡೆದಾಗ ಸಂಬಂಧಿಕರು ಕೊಲೆಯಾಗಿರೋ ನೇತ್ರಾವತಿ ಬುದ್ದಿ ಹೇಳಿದ್ದರು. ಅಲ್ಲದೇ ಪತಿ ದ್ಯಾಮಣ್ಣಗೆ ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸಿ ಅಂತ ಹೇಳಿದ್ರಂತೆ.
ಪತ್ನಿ ಆರು ವರ್ಷಗಳ ಹಿಂದೆ ಯಾವುದೋ ಪರ ಪರುಷನ ಸಹವಾಸ ಮಾಡಿದ್ದಳು ಅನ್ನೋ ಅನುಮಾನ ಪಟ್ಟ ಪತಿ ಪತ್ನಿಯ ಕತ್ತು ಕೊಯ್ದು ಆರು ವರ್ಷದ ಸೇಡು ತೀರಿಸಿಕೊಂಡು ತಾನೇ ಪೋಲೀಸರಿಗೆ ಶರಣಾಗಿದ್ದು ದಾಂಪತ್ಯ ಜೀವನದ ಮೇಲಿನ ನಂಬಿಕೆಯನ್ನೇ ಪ್ರಶ್ನಿಸುತ್ತಿದೆ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada