ನಾಗಚೈತನ್ಯ ಹಾಗೂ ಟಿ ಸಮಂತಾ ತಮ್ಮ4 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಆದರೆ ಈಗ ಡಿವೋರ್ಸ್ ಆಗಿ ಒಂದು ವರ್ಷದಲ್ಲೇ ಮತ್ತೊಂದು ಮದುವೆಗೆ ರೆಡಿಯಾಗುತ್ತಿದ್ದಾರಂತೆ ನಾಗಚೈತನ್ಯ. ಈ ರೀತಿಯ ಸುದ್ದಿಯೊಂದು ಸದ್ಯ ಟಾಲಿವುಡ್ನಲ್ಲಿ ಹರಿದಾಡುತ್ತಿದೆ. ನಾಗ ಚೈತನ್ಯ ಹಾಗೂ ಸಮಂತಾ ಒಟ್ಟಿಗೆ ನಟಿಸಿದ್ದ ‘ಮಜಿಲಿ’ ಸಿನಿಮಾದಲ್ಲಿ ನಟಿಸಿದ್ದ ದಿವ್ಯಾಂಶಾ ಕೌಶಿಕ್ ಜೊತೆ ನಾಗ ಚೈತನ್ಯ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ. ‘ಮಜಿಲಿ’ ಸಿನಿಮಾದಲ್ಲಿ ದಿವ್ಯಾಂಶಾ ಕೌಶಿಕ್, ನಾಗ ಚೈತನ್ಯರ ಪ್ರೇಮಿಯ ಪಾತ್ರದಲ್ಲಿ ನಟಿಸಿದ್ದರು. ಸಮಂತಾ ಪತ್ನಿಯ ಪಾತ್ರದಲ್ಲಿ ನಟಿಸಿದ್ದರು. ನಾಗ ಚೈತನ್ಯ ಹಾಗೂ ದಿವ್ಯಾಂಶಾ ಕೌಶಿಕ್ ಒಟ್ಟಿಗಿರುವ ಚಿತ್ರವೊಂದು ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಾಗ ಚೈತನ್ಯ ನಟಿಸುತ್ತಿರುವ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಾಗ ಚೈತನ್ಯ ಹಾಗೂ ದಿವ್ಯಾಂಶ ಒಟ್ಟಿಗೆ ನಟಿಸಲಿದ್ದಾರೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada