ನಟ ಸಿಂಬು ಕಾರು ಅಪಘಾತ; 70 ವರ್ಷದ ವ್ಯಕ್ತಿ ಸಾವು

 
ಸಿಂಬು ಒಡೆತನದ ಕಾರು ಅಪಘಾತಕ್ಕೆ ಒಳಗಾಗಿ 70 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಸಿಂಬು ತಂದೆ ಟಿ. ರಾಜೇಂದರ್​ ಅವರ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಸೆಲೆಬ್ರಿಟಿಗಳ ಕಾರು ಅಪಘಾತಕ್ಕೆ ಜನಸಾಮಾನ್ಯರು ಬಲಿ ಆದ ಘಟನೆಗಳು ಪದೇಪದೇ ಮರುಕಳಿಸುತ್ತಲೇ ಇವೆ. ಈಗ ಖ್ಯಾತ ಕಾಲಿವುಡ್​ ನಟ ಸಿಂಬು (Actor Simbu) ಅವರ ಕಾರು ಅಪಘಾತಕ್ಕೆ ಒಳಗಾಗಿದೆ. ಮಾ.18ರಂದು ಈ ಘಟನೆ ನೆಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಮಿಳು ಚಿತ್ರರಂಗದಲ್ಲಿ ಸಿಂಬು ಅವರು ತುಂಬ ಫೇಮಸ್​ ಆಗಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ಕಳೆದ ವರ್ಷ ‘ಮಾನಾಡು’ ಸಿನಿಮಾದ ಯಶಸ್ಸಿನಿಂದ ಖುಷಿ ಆಗಿದ್ದರು. ಈಗ ಅವರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಸಿಂಬು ಹೆಸರಿನಲ್ಲಿ ನೋಂದಣಿ ಆಗಿರುವ ಕಾರು ಅಪಘಾತಕ್ಕೆ ಈಡಾಗಿದ್ದು, ಈ ಆಯಕ್ಸಿಡೆಂಟ್​ನಲ್ಲಿ 70 ವರ್ಷದ ವ್ಯಕ್ತಿ ಮೃತರಾಗಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಘಟನೆಯ ವಿವರಗಳು ಹೊರಬರಲಾರಂಭಿಸಿವೆ. ಅಪಘಾತಕ್ಕೆ  ಸಂಬಂಧಿಸಿದಂತೆ ಕಾರು ಚಾಲಕನನ್ನು ಬಂಧಿಸಲಾಗಿದೆ. ಇನ್ನಷ್ಟು ವಿವರಗಳು ಬಹಿರಂಗ ಆಗಬೇಕಿದೆ. ನಿಧನರಾದ ವ್ಯಕ್ತಿಯನ್ನು ಮುನುಸ್ವಾಮಿ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮುನುಸ್ವಾಮಿ ಅವರು ಬೀದಿ ಬದಿಯಲ್ಲಿ ವಾಸಿಸುತ್ತಿದ್ದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ತೇನಂಪೇಟ್​ ಪ್ರದೇಶದ ಸುತ್ತಮುತ್ತ ಸಣ್ಣ-ಪುಟ್ಟ ಕೆಲಸಗಳನ್ನು ಮಾಡಿಕೊಂಡು ಅವರು ಜೀವನ ಸಾಗಿಸುತ್ತಿದ್ದರು. ಒಂದು ವಾರದ ಹಿಂದೆ ಚರಂಡಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದ ವೇಳೆ ಅವರ ಕಾಲಿಗೆ ಪೆಟ್ಟಾಗಿತ್ತು. ಆದ್ದರಿಂದ ಅವರಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ತೆವಳುತ್ತ ರಸ್ತೆ ದಾಟುತ್ತಿದ್ದ ಮುನುಸ್ವಾಮಿ ಮೇಲೆ ಸಿಂಬು ಒಡೆತನದ ಕಾರು ಹರಿದಿದೆ.

ಅಪಘಾತ ನಡೆದ ಕೂಡಲೇ ಕಾರಿನಲ್ಲಿ ಇದ್ದವರು ಪರಾರಿ ಆಗಿದ್ದಾರೆ. ಸ್ಥಳೀಯರು ಮುನುಸ್ವಾಮಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿ ಆಗದೇ ಅವರು ಮೃತಪಟ್ಟರು ಎಂಬುದು ತಿಳಿದುಬಂದಿದೆ. ಸಿಂಬು ತಂದೆ ಟಿ. ರಾಜೇಂದ್ರ ಅವರ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಚಾಲಕನ ಹೆಸರು ಸೆಲ್ವಂ ಎಂದು ತಿಳಿದುಬಂದಿದೆ. ಆ ಕಾರು ಎಲ್ಲಿಂದ ಬರುತ್ತಿತ್ತು? ಕಾರಿನಲ್ಲಿ ಯಾರೆಲ್ಲ ಇದ್ದರು? ಸಿಂಬು ಹೆಸರಿನಲ್ಲಿ ರಿಜಿಸ್ಟರ್​ ಆಗಿರುವ ಈ ಕಾರಿನಲ್ಲಿ ಸಿಂಬು ಪ್ರಯಾಣ ಮಾಡುತ್ತಿರಲಿಲ್ಲವಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

Leave a Reply

Your email address will not be published. Required fields are marked *

Next Post

ಕಾಶ್ಮೀರ ಬಗ್ಗೆ ಪ್ರತಿಕ್ರಿಯಿಸಿದ ಚೀನಾಕ್ಕೆ ಎಚ್ಚರಿಸಿದ ಭಾರತ

Thu Mar 24 , 2022
ಜಮ್ಮು ಕಾಶ್ಮೀರ ಕುರಿತ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಅವರ ಹೇಳಿಕೆಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನಮ್ಮ ಆಂತರಿಕ ವಿಚಾರಗಳ ಬಗ್ಗೆ ಇತರೆ ದೇಶಗಳು ಪ್ರತಿಕ್ರಿಯಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಚೀನಾಕ್ಕೆ ಸ್ಪಷ್ಟಮಾತುಗಳಲ್ಲಿ ತಿರುಗೇಟು ನೀಡಿದೆ. ಪಾಕಿಸ್ತಾನದಲ್ಲಿ ಆಯೋಜಿಸಲಾದ ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋಆಪರೇಷನ್ (ಒಐಸಿ) ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ್ದ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ಕಾಶ್ಮೀರ ಸಮಸ್ಯೆಯ ಬಗ್ಗೆ ನಮ್ಮ ಇಸ್ಲಾಮಿಕ್ ಸ್ನೇಹಿತರ ಮಾತುಗಳನ್ನು […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: