ಆಂಧ್ರಪ್ರದೇಶದಲ್ಲಿ ಹೊಸದಾಗಿ ರಚನೆಗೊಂಡ 13 ಜಿಲ್ಲೆಗಳು..
ಉತ್ತಮ ಆಡಳಿತ ನಿರ್ವಹಣೆಗೆ ಅನುಕೂಲವಾಗಲು ರಾಜ್ಯವು ಹೆಚ್ಚು, ಚಿಕ್ಕ ಜಿಲ್ಲೆಗಳನ್ನು ಹೊಂದಿರಬೇಕು ಎಂದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಈ ಹಿಂದಿನಿಂದಲೂ ಹೇಳುತ್ತಿದ್ದರು.
ಈಗ ಆಂಧ್ರಪ್ರದೇಶವು ಅಧಿಕೃತವಾಗಿ 26 ಜಿಲ್ಲೆಗಳನ್ನು ಹೊಂದಿದೆ. ಈ ಹಿಂದೆ ರಾಜ್ಯದಲ್ಲಿ ಜಿಲ್ಲೆಗಳ ಸಂಖ್ಯೆ 13 ಆಗಿತ್ತು. ಸೋಮವಾರ ಅಂದರೆ ಏಪ್ರಿಲ್ 4 ರಂದು ನಡೆದ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಆಂಧ್ರದ ಮುಖ್ಯಮಂತ್ರಿಯಾದ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ವರ್ಚ್ಯೂವಲ್ ಆಗಿ ನೂತನವಾಗಿ ರಚಿಸಲಾದ 13 ಜಿಲ್ಲೆಗಳಿಗೆ ಚಾಲನೆ ನೀಡಿದರು. ಸದ್ಯ ಹೊಸದಾಗಿ ರಚನೆಗೊಂಡಿದೆ
ಈಗ ಯಾವ ಜಿಲ್ಲೆಯ ಗಡಿಗಳನ್ನು ಬದಲಾಯಿಸಲಾಗಿದೆ?
ಈಗಾಗಲೇ ಅಸ್ತಿತ್ವದಲ್ಲಿರುವ ಹಲವು ಜಿಲ್ಲೆಗಳನ್ನು ವಿಭಜಿಸಿ ಹೆಚ್ಚಿನ ಜಿಲ್ಲೆಗಳ ಸೃಷ್ಟಿ ಮಾಡಲಾಗಿದೆ. ಈ ವಿಷಯದಲ್ಲಿ ಶ್ರೀಕಾಕುಲಂ, ಪ್ರಕಾಶಂ ಮತ್ತು ನೆಲ್ಲೂರು ಈ ಮೂರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ 10 ಅಸ್ತಿತ್ವದಲ್ಲಿರುವ ಜಿಲ್ಲೆಗಳನ್ನು ತಲಾ ಎರಡು ಅಥವಾ ಹೆಚ್ಚಿನ ಜಿಲ್ಲೆಗಳಾಗಿ ವಿಂಗಡಿಸಲಾಗಿದೆ.
ಪಾರ್ವತಿಪುರಂ ಮಾನ್ಯಂನ ಹೊಸ, ಸಂಪೂರ್ಣ ಬುಡಕಟ್ಟು ಜಿಲ್ಲೆಯನ್ನು ರಚಿಸಲು ವಿಜಯನಗರಂ ಜಿಲ್ಲೆಯನ್ನು ವಿಭಜಿಸಲಾಗಿದೆ. ವಿಶಾಖಪಟ್ಟಣದಿಂದ ಅನಕಾಪಲ್ಲಿ ಮತ್ತು ಅಲ್ಲೂರಿ ಸೀತಾರಾಮ ರಾಜು ಎಂಬ ಎರಡು ಹೊಸ ಜಿಲ್ಲೆಗಳನ್ನು ನಿರ್ಮಿಸಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada