“ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಎಂದ ದಿಗಂತ್

ಚಿತ್ರ ಬಿಡುಗಡೆಗೂ ಮುನ್ನ ಹೊರಬರುವ ಟ್ರೇಲರ್ ನೋಡಿದ ಕೂಡಲೆ, ಅಭಿಮಾನಿಗಳಲ್ಲಿ ಸಿನಿಮಾ ನೋಡುವ ಕಾತುರ ಇನ್ನಷ್ಟು ಹೆಚ್ಚುತ್ತದೆ.

ತಾರಾ ಜೋಡಿ ದಿಗಂತ್ – ಐಂದ್ರತ ರೆ ನಾಯಕ- ನಾಯಕಿಯಾಗಿ ನಟಿಸಿರುವ  “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರದ ಟ್ರೇಲರ್ ಸಹ  ಇತ್ತೀಚೆಗೆ  ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಟ್ರೇಲರ್ ಗೆ ಪ್ರಶಂಸೆ ಸಿಕ್ಕಿದೆ. ಇದೇ ಏಪ್ರಿಲ್ ಕೊನೆಯಲ್ಲಿ ಚಿತ್ರ ತೆರೆಗೆ ಬರುತ್ತಿದ್ದು, ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಸಿಲ್ಕ್ ಮಂಜು ನಿರ್ಮಿಸಿರುವ ಈ ಚಿತ್ರವನ್ನು ವಿನಾಯಕ ಕೋಡ್ಸರ ನಿರ್ದೇಶಿಸಿದ್ದಾರೆ.  ರವೀಂದ್ರ ಜೋಶಿ  ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಪ್ರಜ್ವಲ್ ಪೈ ಸಂಗೀತ ನಿರ್ದೇಶನ ಹಾಗೂ ನಂದಕಿಶೋರ್ ಛಾಯಾಗ್ರಹಣವಿರುವ ಈ ಚಿತ್ರದ  ಮುಖ್ಯಪಾತ್ರದಲ್ಲಿ ದಿಗಂತ್, ಐಂದ್ರಿತ ರೆ, ರಜನಿ ರಾಘವನ್  ನಟಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.nationaltv.kannada

Leave a Reply

Your email address will not be published. Required fields are marked *

Next Post

ಚಿರಂಜೀವಿ ಸೊಸೆ, ಬಿಗ್ ಬಾಸ್ ವಿನ್ನರ್ ಸೇರಿ 142 ಜನರ ಬಂಧನ.

Mon Apr 4 , 2022
ಪೊಲೀಸ್‌ ಟಾಸ್ಕ್ ಫೋರ್ಸ್ ತಂಡವು ಭಾನುವಾರ ಮುಂಜಾನೆ ಬಂಜಾರಾ ಹಿಲ್ಸ್‌ ನ ಪಂಚತಾರಾ ಹೋಟೆಲ್‌ ನ ಪಬ್‌ನಲ್ಲಿ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ವಿಐಪಿಗಳು, ನಟರು ಮತ್ತು ರಾಜಕಾರಣಿಗಳ ಮಕ್ಕಳು ಸೇರಿದಂತೆ ಸುಮಾರು 142 ಜನರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕೊಕೇನ್ ನಂತಹ ನಿಷೇಧಿತ ಪದಾರ್ಥಗಳನ್ನು ದಾಳಿಯ ವೇಳೆ ಪತ್ತೆ ಮಾಡಲಾಗಿದೆ ಎಂದು ವರದಿಯಾಗಿದೆ. ಬಂಧಿತರಲ್ಲಿ ನಟ ನಾಗಬಾಬು ಅವರ ಪುತ್ರಿ, ಮೆಗಾಸ್ಟಾರ್ ಚಿರಂಜೀವಿ ಅವರ ಸೊಸೆಯೂ ಆಗಿರುವ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: