ಒಂದು ಕಡೆ ಜನರು ಯುಗಾದಿ ಹಬ್ಬ ಸಂಭ್ರಮದಲ್ಲಿ ಜನ ಮುಳುಗಿದರೆ.. ಮತ್ತೊಂದು ಕಡೆ ಪ್ರಕೃತಿ ತನ್ನ ಸೊಬಗನ್ನು ತನ್ನತ್ತ ಸೆಳೆಯುವಂತೆ ಮಾಡುತ್ತಿದೆ.. ವಸಂತಕಾಲ ಆದರಿಂದ ಚಿಗುರಿದ ಮಾವಿನ ಮರ, ಅರಳಿಮರ, ನೇರಳೆ ಮರ, ಹೊಂಗೆ ಇನ್ನಿತರ ಮರಗಳನ್ನ ನೋಡಿದಾಗ ಮನಸ್ಸಿಗೆ ನೆಮ್ಮದಿಯನ್ನು ಹಾಗೂ ನೋಡುಗರ ಕಣ್ಣಿಗೆ ಆಕರ್ಷಣೆಯನ್ನು ಮಾಡ್ತಿದೆ.. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸೂರ್ಯನಗರ ಒಂದನೇ ಹಂತದಲ್ಲಿ ಹೂವಿನ ಮರಗಳಿದ್ದು ನೋಡುಗರ ಮನಸೆಳೆಯುವಂತಿದೆ.. ಈ ಹೂವಿನ ಗಿಡಗಳನ್ನು ಕಣ್ತುಂಬಿಕೊಳ್ಳಲು ಜನರು ಮುಖ ಮಾಡುತ್ತಿದ್ದಾರೆ ಜೊತೆಗೆ ಹೂವಿನ ಗಿಡಗಳ ಮುಂದೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada