ಶ್ರೀನಿವಾಸ್ ಅವರು ನಿರ್ದೇಶಿಸಿದ ಶ್ರೀನಿವಾಸ ಕಲ್ಯಾಣ ಸಿನಿಮಾದಂತೆ ಇದು ಕೂಡ ಒಂದು ಪ್ರಣಯ ಪ್ರಧಾನ ಸಿನಿಮಾ. ಮದುವೆ ಈ ಸಿನಿಮಾದ ಕಥೆಯ ಪ್ರಮುಖ ವಿಷಯ ವಸ್ತು.
ಆದರೆ ಇದು 80 ಮತ್ತು 90 ರ ದಶಕದ ಕೆಲವು ಹಾಸ್ಯ ಪ್ರಧಾನ ಸಿನಿಮಾಗಳ ನೆನಪು ತರಿಸುತ್ತದೆ ಎಂದರೆ ತಪ್ಪಾಗಲಾರದು ಹಾಸ್ಯ ಮತ್ತು ಪ್ರಣಯ ಎರಡನ್ನೂ ಸುಂದರವಾಗಿ ಕಟ್ಟಿಕೊಟ್ಟಿರುವ ಸಿನಿಮಾ ‘ಓಲ್ಡ್ ಮಾಂಕ್’.
ಈ ಸಿನಿಮಾ ಅನೇಕ ಹಿರಿಯ ಮತ್ತು ಕಿರಿಯ ಕಲಾವಿದರ ಸಂಗಮವಾಗಿದ್ದು, ಪ್ರೇಕ್ಷಕರ ಮನಸ್ಸನನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಎಂ ಜಿ ಶ್ರೀನಿವಾಸ್ ಅವರ ನಿರ್ದೇಶನದ ಸಿನಿಮಾವೆಂದರೆ, ವಿಭಿನ್ನವಾದ ಏನನ್ನಾದರೂ ನಿರೀಕ್ಷಿಸಬಹುದು ಎಂಬುದರಲ್ಲಿ ಸಂಶಯವಿಲ್ಲ.
ಏಕೆಂದರೆ ಗುಣಮಟ್ಟದ ಸಿನಿಮಾಗಳನ್ನು ನೀಡಿದ ಹೆಗ್ಗಳಿಕೆ ಅವರದ್ದು.ಓಲ್ಡ್ ಮಾಂಕ್ವಿಷಯದಲ್ಲೂ, ವೀಕ್ಷಕರು ಅವರ ಮೇಲಿಟ್ಟ ನಂಬಿಕೆಯನ್ನು ಹುಸಿ ಮಾಡಿಲ್ಲ. ನಟನೆ ಮತ್ತು ನಿರ್ದೇಶನದಲ್ಲಿ ಶ್ರೀನಿ ಪಳಗಿದ್ದಾರೆ. ಈ ಸಿನಿಮಾ ಚೆನ್ನಾಗಿದೆ ಅನ್ನೋದಕ್ಕಿಂತ ಹೆಚ್ಚಾಗಿ ಥಿಯೇಟರ್ ಸಮಸ್ಯೆಯಿಂದಲೇ ಸುದ್ದಿ ಮಾಡಿತ್ತು.
ಇದೀಗ ಮತ್ತೆ ಈ ಸಿನಿಮಾ ಸಖತ್ ಸೌಂಡ್ ಮಾಡುತ್ತಿದೆ. ಈ ಸಲ ಮತ್ತೆ ಯಾವ ಸಮಸ್ಯೆ ಅಂತ ಶಾಕ್ ಆಗಬೇಡಿ. ಮುಂದೆ ನೋಡಿ ಗೊತ್ತಾಗುತ್ತೆ.
ಸುವರ್ಣ ಚಾನೆಲ್ನಲ್ಲಿ ಓಲ್ಡ್ ಮಾಂಕ್!
ಮೊದಲಿನಿಂದಲೂ ಅತ್ತುತ್ಯಮ ಸಿನಿಮಾಗಳನ್ನು ಪ್ರಸಾರ ಮಾಡಿಕೊಂಡೇ ಬಂದಿರುವ ಸುವರ್ಣ ಚಾನೆಲ್ನ್ಲಲೇ ಓಲ್ಡ್ ಮಾಂಕ್ ಟೆಲಿಕಾಸ್ಟ್ ಆಗಲಿದೆ. ಕಳೆದ ವಾರ ಸ್ಟಾರ್ ಸುವರ್ಣ ದಲ್ಲಿ ‘ಪುಷ್ಪ’ ಕನ್ನಡ ಸಿನಿಮಾ ವರ್ಲ್ಡ್ ಟೆಲಿವಿಶನ್ ಪ್ರೀಮಿಯರ್ ಆಗಿತ್ತು. ಇದೀಗ ಕನ್ನಡದ ಸಿನಿಮಾ ಓಲ್ಡ್ ಮಾಂಕ್ ಕೂಡ ಏಪ್ರಿಲ್ 3ರಂದು ಮಧ್ಯಾಹ್ನ 12 ಗಂಟೆಗೆ ಪ್ರಸಾರವಾಗಲಿದೆ. ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada