ಪಾಕಿಸ್ತಾನದಲ್ಲಿ ಹಿಂದೂ ಯುವತಿ ಅಪಹರಣದ ವೇಳೆ ಗುಂಡಿಟ್ಟು…

18 ವರ್ಷದ ಹಿಂದೂ ಯುವತಿಯನ್ನು ಅಪಹರಣ ಮಾಡಲು ಯತ್ನಿಸಿದ ವೇಳೆ ವಿರೋಧ ವ್ಯಕ್ತಪಡಿಸಿದಾಗ ಗುಂಡು ಹೊಡೆದು ಹತ್ಯೆಗೈದಿರುವ ಘಟನೆ ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಯುವತಿ ರಸ್ತೆಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಆಕೆಯನ್ನು ಅಪಹರಿಸಲು ಯತ್ನಿಸಿದಾಗ, ಆಕೆ ಪ್ರತಿರೋಧ ಒಡ್ಡಿದಾಗ ಗುಂಡು ಹಾರಿಸಿರುವುದಾಗಿ ಪ್ರೈಡೆ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಸಿಂಧ್ ಪ್ರಾಂತ್ಯದಲ್ಲಿ ಪ್ರತಿವರ್ಷ ಮುಖ್ಯವಾಗಿ ಅಲ್ಪಸಂಖ್ಯಾತ ಸಮುದಾಯವಾಗಿರುವ ಹಿಂದೂ, ಸಿಖ್ ಮಹಿಳೆಯರನ್ನು ಉಗ್ರಗಾಮಿಗಳು ಅಪಹರಿಸಿ, ಬಲವಂತವಾಗಿ ಮತಾಂತರಗೊಳಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಸಮುದಾಯ ಬಲವಂತದ ವಿವಾಹ ಮತ್ತು ಮತಾಂತರದ ಸಮಸ್ಯೆಯನ್ನು ದೀರ್ಘಕಾಲದಿಂದ ಎದುರಿಸುತ್ತಿದೆ. 2013ರಿಂದ 2019 ನಡುವೆ 156 ಬಲವಂತದ ಮತಾಂತರ ಪ್ರಕರಣ ನಡೆದಿದೆ ಎಂದು ಸೆಂಟರ್ ಫಾರ್ ಸೋಶಿಯಲ್ ಜಸ್ಟೀಸ್ ತಿಳಿಸಿದೆ.

 

Leave a Reply

Your email address will not be published. Required fields are marked *

Next Post

ಹ್ಯಾಂಡ್‌ಬಾಲ್‌ನ ಆಲ್‌ರೌಂಡರ್‌ ಸಾನಿಯಾ

Tue Mar 22 , 2022
  ಚಿತ್ರದುರ್ಗ: ಕ್ರೀಡಾ ಲೋಕದಲ್ಲಿ ಡೈನಾಮಿಕ್‌ ಆಟ ಎಂದು ಕರೆಯುವ ಹ್ಯಾಂಡ್‌ಬಾಲ್‌ನಲ್ಲಿ ಚಿತ್ರದುರ್ಗದ ಸಾನಿಯಾ ಅವರದು ಅಭೂತಪೂರ್ವ ಸಾಧನೆ. ಪ್ರಾಥಮಿಕ ತರಗತಿ ಹಂತದಲ್ಲೇ ಹ್ಯಾಂಡ್‌ಬಾಲ್‌ ಸ್ಪರ್ಶಿಸಿದ ಕೈಗಳು ಪದವಿಯಲ್ಲೂ ಜತೆಯಾಗಿದೆ. ಹಿಮ್ಮತ್‌ ನಗರದ ನಿವಾಸಿಯಾದ ದಾದಾಪೀರ್‌, ಸಾಹಿರಾ ಬಾನು ದಂಪತಿಯ ಪುತ್ರಿ ಸಾನಿಯಾ ಪ್ರಾಥಮಿಕ ಶಿಕ್ಷಣಕ್ಕೆಂದು ನಗರದ ವಿಪಿ ಬಡಾವಣೆಯ ಸರ್ಕಾರಿ ಶಾಲೆಗೆ ಪ್ರವೇಶ ಪಡೆದಿದ್ದರು. ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ಹ್ಯಾಂಡ್‌ಬಾಲ್‌ ಬಗ್ಗೆ ಕುತೂಹಲ ಮೂಡಿ ದೈಹಿಕ ಶಿಕ್ಷಣ ಶಿಕ್ಷಕ, […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: