ಪಠ್ಯದಲ್ಲಿ ಭಗವದ್ಗೀತೆ ಸೇರಿಸುವುದು ನಮ್ಮ ಧ್ಯೇಯ ಎಂದ ಸಿಎಂ….!

ರಾಜ್ಯದಲ್ಲಿ ಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಮಕ್ಕಳಿಗೆ ನೈತಿಕ ಶಿಕ್ಷಣ ಕೊಡಬೇಕು ಎಂಬುದು ನಮ್ಮ ಉದ್ದೇಶ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಯಾದಗಿರಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ನಮ್ಮ ಧ್ಯೇಯ. ನೈತಿಕ ಶಿಕ್ಷಣ ಕೊಡಬೇಕು ಎಂಬ ನಿಟ್ಟಿನಲ್ಲಿ ಭಗವದ್ಗೀತೆ ಅಳವಡಿಸುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದರು.

ಗುಜರಾತ್ ನಲ್ಲಿ ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸಲಾಗಿದೆ. ಈ ಕುರಿತು ನಮ್ಮ ಸಚಿವರು ಚರ್ಚೆ ನಡೆಸಿದ್ದಾರೆ. ಶಿಕ್ಷಣ ಇಲಾಖೆಯಿಂದ ವಿವರ ಪಡೆದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

Leave a Reply

Your email address will not be published. Required fields are marked *

Next Post

ಶುಭ ಸುದ್ದಿ ಹಂಚಿಕೊಂಡ ಬಾಲಿವುಡ್ ನಟಿ ಸೋನಂ ಕಪೂರ್​​...!

Tue Mar 22 , 2022
ಬಾಲಿವುಡ್​ ನಟಿ ಸೋನಂ ಕಪೂರ್​​ ತಾವು ತಾಯಿಯಾಗುತ್ತಿರುವ ಶುಭ ಸುದ್ದಿಯನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಇನ್​​ಸ್ಟಾಗ್ರಾಂನಲ್ಲಿ ತಮ್ಮ ಪತಿ ಆನಂದ್​ ಅಹುಜಾ ಜೊತೆಯಲ್ಲಿ ನಟಿ ಸೋನಂ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಸೋನಂ ಕಪೂರ್​​ರ ಬೇಬಿ ಬಂಪ್​ ಮುದ್ದಾಗಿ ಕಾಣುತ್ತಿದೆ.ಈ ಫೋಟೋಗಳನ್ನು ಶೇರ್​ ಮಾಡಿರುವ ಸೋನಂ ಕಪೂರ್​, ನಿನ್ನನ್ನು ಅತ್ಯಂತ ಉತ್ತಮವಾಗಿ ಬೆಳೆಸಲು ನಾಲ್ಕು ಕೈಗಳಿವೆ. ಪ್ರತಿ ಹೆಜ್ಜೆಗೂ ನಿನಗಾಗಿ ಮಿಡಿಯುವ ಎರಡು ಹೃದಯಗಳು, ನಿನಗೆ ಪ್ರೀತಿ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: