ಜೆಡಿಎಸ್ನ ಜನತಾ ಜಲಧಾರೆ ರಥ ಇಂದು ಕೋಲಾರಕ್ಕೆ ಆಗಮಿಸಿದೆ. ಈ ಹಿನ್ನಲೆ ಚಿಕ್ಕತಿರುಪತಿ ದೇಗುದಿಂದ ಮಾಲೂರು ಪಟ್ಟಣದ ವರೆಗೂ ಬೃಹತ್ ಬೈಕ್ ರ್ಯಾಲಿ ನಡೆಸಲು ನಿರ್ಧರಿಸಲಾಗಿದೆ ಇನ್ನು ಇಂದು ಕೋಲಾರದ ಮಾಲೂರು ಪಟ್ಟಣಕ್ಕೆ ಜೆಡಿಎಸ್ ಜನತಾ ಜಲಧಾರೆ ರಥ ಆಗಮಿಸುವ ಹಿನ್ನಲೆ ಪಟ್ಟಣದ ಜನರಿಗೆ ಜೆಡಿಎಸ್ ನಾಯಕ ಬಂಪರ್ ಉಡುಗೊರೆ ನೀಡಿದ್ದಾರೆ ಪೆಟ್ರೋಲ್ ಗಗನಮುಖಿಯಾಗಿರುವ ಸಮಯದಲ್ಲಿ ಜನತಾ ಜಲಧಾರೆ ಅಂಗವಾಗಿ ಇಂದು ನಗರದ ಜನರಿಗೆ ಉಚಿತವಾಗಿ ಪೆಟ್ರೋಲ್ ಹಂಚಲಾಗಿದೆ. ಜೆಡಿಎಸ್ನ ಜನತಾ ಜಲಧಾರೆಯ ಬೃಹತ್ ಬೈಲ್ ರ್ಯಾಲಿಯಲ್ಲಿ ಭಾಗಿಯಾದರೆ ಈ ಪೆಟ್ರೋಲ್ ಹಂಚುವುದಾಗಿ ಮಾಲೂರು ಜೆಡಿಎಸ್ ಅಭ್ಯರ್ಥಿ ರಾಮೇಗೌಡ ಘೋಷಿಸಿದ್ದಾರೆ ಮಾಲೂರು ಜೆಡಿಎಸ್ ಅಭ್ಯರ್ಥಿ ರಾಮೇಗೌಡ ಒಡೆತನದ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಬಂಕ್ನಲ್ಲಿ ಈ ವಿಶೇಷ ಆಫರ್ ನೀಡಲಾಗಿದೆ. ಜೆಡಿಎಸ್ ಟೀ ಶರ್ಟ್ ಹಾಕಿಕೊಂಡು ಬೈಕ್ ರ್ಯಾಲಿಯಲ್ಲಿ ಬಂಧವರಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ಘೋಷಣೆ ಮಾಡಲಾಗಿದೆ ಇದೇ ವೇಳೆ ಮಹಿಳೆಯರು ಜನತಾ ಜಲಧಾರೆಯಲ್ಲಿ ಭಾಗಿಯಾದರೆ ಕಾರ್ಯಕ್ರಮದ ಬಳಿಕ ಅಕ್ಕಿ ಮೂಡೆ ನೀಡುವುದಾಗಿ ಕೂಡ ಟೋಕನ್ ನೀಡಲಾಗಿದೆ. ಇನ್ನು ಮಾಲೂರು ಪಟ್ಟಣದ ವೈಟ್ ಗಾರ್ಡನ್ ನಲ್ಲಿ ಜೆಡಿಎಸ್ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ಆಯೋಜಿಸಲಾಗಿದೆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವು ಮುಖಂಡರು ಭಾಗಿ ಆಗಲಿದ್ದಾರೆ