ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಿವಾಸಕ್ಕೆ ಬಹುಭಾಷಾ ನಟ ಪ್ರಕಾಶ್ರಾಜ್ ಭೇಟಿ ನೀಡಿದ್ದಾರೆ. ನಿರ್ಮಾಪಕ ಮಧು ಬಂಗಾರಪ್ಪ ಈ ವೇಳೆ ಹಾಜರಿದ್ದರು. ಈ ಫೋಟೋಗಳನ್ನು ಮಧು ಅವರು ಸೋಷಿ ಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ‘ಖ್ಯಾತ ನಟ, ಆತ್ಮೀಯ ಸ್ನೇಹಿತರಾಗಿರುವ ಪ್ರಕಾಶ್ ರಾಜ್ ನನ್ನ ಬಾವ ಶಿವಣ್ಣ ಅವರ ಮನೆಗೆ ಭೇಟಿ ನೀಡಿದರು.
ಈ ವೇಳೆ ಅವರೊಂದಿಗೆ ಉಭಯ ಕುಶಲೋಪರಿ ನಡೆಸಿದೆವು‘ ಎಂದಿದ್ದಾರೆ. ಪುನೀತ್ ರಾಜ್ಕುಮಾರ್ ಅಗಲಿದ ನಂತರ ಭಾರತೀಯ ಸಿನಿ ರಂಗವೇ ಡಾ.ರಾಜ್ಕುಮಾರ್ ಕುಟುಂಬವನ್ನು ಭೇಟಿ ಮಾಡುತ್ತಿದೆ. ಅದರಂತೆ ಪ್ರಕಾಶ್ ಎರಡನೇ ಸಲ ಶಿವಣ್ಣರನ್ನು ಭೇಟಿ ಮಾಡಿ ಕೆಲವು ಸಮಯ ಮಾತುಕತೆ ನಡೆಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada