ಬಾಲಿವುಡ್ ಮತ್ತು ಹಾಲಿವುಡ್ನ ಫೇಮಸ್ ಕಪಲ್ ಪ್ರಿಯಾಂಕ ಚೋಪ್ರಾ ಮತ್ತು ನಿಖ್ ಜೋನಾಸ್. ಜನವರಿ 15 ರಂದು ರಾತ್ರಿ 8 ಗಂಟೆಯ ಸಯಮದಲ್ಲಿ ಮಗು ಜನಿಸಿದ್ದು ಜನವರಿ 21 ರಂದು ಪ್ರಿಯಾಂಕಾ ಮತ್ತು ನಿಕ್ ದಂಪತಿಗಳು ತಮ್ಮ ಮಗುವನ್ನು ಸ್ವಾಗತಿಸುವ ಸಂತೋಷದ ಸುದ್ದಿಯನ್ನು ತಿಳಿಸಿದ್ದರು.ಇವರು ತಮ್ಮ ಮೊದಲ ಮಗುವನ್ನು ಬಾಡಿಗೆ ತಾಯಿಯ ಮೂಲಕ ಪಡೆದಿರುತ್ತಾರೆ. ಮೂರು ತಿಂಗಳ ನಂತರ ತಮ್ಮ ಮಗುವಿಗೆ ಹೆಸರಿಟ್ಟಿದ್ದಾರೆ. ಪ್ರಿಯಾಂಕಾ ಮತ್ತು ನಿಕ್ ಮಗುವಿನ ಜನನ ಪ್ರಮಾಣಪತ್ರವನ್ನು ಪಡೆದಿರುವ TMZ ಮ್ಯಾಗಜೀನ್ ಪ್ರಕಾರ, ದಂಪತಿಗಳು ತಮ್ಮ ಪ್ರೀತಿಯ” ಪುತ್ರಿಗೆ ಮಾಲ್ತಿ ಮೇರಿ ಚೋಪ್ರಾ ಜೋನಾಸ್” ಎಂದು ಹೆಸರಿಟ್ಟಿದ್ದಾರೆ. ಕೇವಲ ಒಂದು ಪೋಸ್ಟ್ ಮಾಡುವ ಮೂಲಕ ಈ ವಿಷಯವನ್ನು ದಂಪತಿಗಳು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada