ಬಾಲಿವುಡ್ನಿಂದ ಹೊರಟು, ಹಾಲಿವುಡ್ನಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ, ನ್ಯೂಯಾರ್ಕ್ನಲ್ಲಿ ‘ಸೋನಾ’ ಎಂಬ ರೆಸ್ಟೋರೆಂಟ್ನ್ನು ಆರಂಭಿಸಿದ್ದರು ಆ ಭಾರತೀಯ ವಿಶೇಷ ಖಾದ್ಯಗಳ ರೆಸ್ಟೋರೆಂಟ್ಗೆ ಈಗ ಒಂದು ವರ್ಷ ತುಂಬಿದೆ. ತಮ್ಮ ‘ಸೋನಾ’ ರೆಸ್ಟೋರೆಂಟ್ಗೆ ವರ್ಷ ತುಂಬಿರುವ ಸಂಭ್ರಮದಲ್ಲಿ ಅವರು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋವನ್ನ ಪೋಸ್ಟ್ ಮಾಡಿ ತಮ್ಮನ್ನು ಪ್ರೋತ್ಸಾಹಿಸಿದ ಎಲ್ಲರಿಗೂ, ರೆಸ್ಟೋರೆಂಟ್ ಪಾಲುದಾರರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ನಟ ಸೋನು ಸೂದ್ ಸೇರಿ ಸಾಕಷ್ಟು ಸ್ಟಾರ್ ಗಳು ಹೋಟೆಲ್ ಉದ್ಯಮ ಹೊಂದಿದ್ದಾರೆ. ಈ ಸಾಲಿಗೆ ಈಗ ಪ್ರಿಯಾಂಕಾ ಕೂಡ ಸೇರ್ಪಡೆಯಾಗಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada