ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಯಾವುದೇ ಅನುಮಾನಾಸ್ಪದ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ ಅಥವಾ ಅಂತಹ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಬೇಡಿ.
ಹಣ ಪಾವತಿ ಮತ್ತು ವರ್ಗಾವಣೆಯಲ್ಲಿ ಡಿಜಿಟಲ್ (Online Payment) ಹೆಚ್ಚುತ್ತಿದ್ದಂತೆ ಆನ್ಲೈನ್ ವಂಚನೆ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಖಾತೆದಾರರ ಪಿನ್ ಕೋಡ್ಗಳನ್ನು ಕೆಲವೊಮ್ಮೆ SMS ಮೂಲಕ ಮತ್ತು ಕೆಲವೊಮ್ಮೆ ಬ್ಯಾಂಕ್ನ ಹೆಸರನ್ನು ಬಳಸಿಕೊಂಡು ಮೋಸ ಮಾಡುವ ಹಲವು ಪ್ರಕರಣಗಳು ಈಗಾಗಲೇ ವರದಿಯಾಗಿದೆ. ಕಳೆದ ಕೆಲವು ದಿನಗಳಿಂದ ಅಪರಾಧಿಗಳು ಕ್ಯೂಆರ್ ಕೋಡ್ ಬಳಸಿಯೂ ವಂಚನೆ ಎಸಗುತ್ತಿದ್ದಾರೆ ಎಂದು ವರದಿಯಾಗಿದೆ.
ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ನಂತರ ಲಾಟರಿ ಅಥವಾ ಬಹುಮಾನ ಪಡೆಯುವ ಆಮಿಷ ತೋರಿಸಿ ವಂಚನೆ ಮಾಡಲಾಗುತ್ತಿದೆ. QR ಕೋಡ್ ವಂಚನೆಯ ಹಿನ್ನೆಲೆಯಲ್ಲಿ ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಚ್ಚರಿಕೆ ನೀಡಿದೆ.
ಈ ಮೂಲಕ ದೇಶದ ಎಲ್ಲಾ ಬ್ಯಾಂಕ್ ಖಾತೆದಾರರನ್ನು ಎಚ್ಚರಿಸಿದೆ. ಗುರುವಾರ ಮಾರ್ಚ್ 24, 2022 ಎಸ್ಬಿಐ ಈ ನಿಟ್ಟಿನಲ್ಲಿ ಟ್ವೀಟ್ ಮಾಡಿದೆ. ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ನಾಗರಿಕರಿಗೆ ಶಿಕ್ಷಣ ನೀಡಲು ಎಸ್ಬಿಐ ಆಜಾದಿ ಕಾ ಅಮೃತ್ ಮಹೋತ್ಸವ ಅಡಿಯಲ್ಲಿ ಅಭಿಯಾನವನ್ನು ಪ್ರಾರಂಭಿಸಿದೆ. ಅಭಿಯಾನದ ಭಾಗವಾಗಿ ಎಸ್ಬಿಐ ಗುರುವಾರ ಟ್ವೀಟ್ ಮಾಡಿದೆ.
ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಡೆಯುತ್ತೀರಾ? QR ಕೋಡ್ ಹಗರಣಗಳ ಬಗ್ಗೆ ಎಚ್ಚರದಿಂದಿರಿ. ನೀವು ಸ್ಕ್ಯಾನ್ ಮಾಡುವ ಮೊದಲು ಯೋಚಿಸಿ, ಅಪರಿಚಿತ ಮತ್ತು ಪರಿಶೀಲಿಸದ QR ಕೋಡ್ಗಳನ್ನು ಸ್ಕ್ಯಾನ್ ಮಾಡಬೇಡಿ. ಅಲರ್ಟ್ ಆಗಿರಿ ಮತ್ತು #SafeWithSBI ನಲ್ಲಿ ಇರಿ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಟ್ವೀಟ್ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada