ರಂಗುರಂಗಾಗಿರುವ ನಮ್ಮ ಬೆಂಗಳೂರಿನ ಅಂದ ನೋಡಲು ಎರಡು ಕಣ್ಣು ಸಾಲದು!

ಉದ್ಯಾನ ನಗರಿಯ ಮರಗಿಡಗಳಿಗೆ ಈಗ ವಸಂತದ ಸಂಭ್ರಮ. ಹೂವನ್ನು ಹೊದ್ದು ನಿಂತಿರುವ ಮರಗಳು ಬೆಂಗಳೂರಿನ ಬೀದಿಗಳನ್ನು ರಂಗುರಂಗಾಗಿಸಿವೆ. ಇಂತಹ ಹೂವಿನ ಮರಗಳಿರುವ ಬೀದಿಗಳನ್ನು ಜನರು ಹೆಚ್ಚಾಗಿ ದಕ್ಷಿಣ ಕೊರಿಯಾ, ಜಪಾನ್​ನಂತಹ ದೇಶಗಳಲ್ಲಿ ನೋಡಿರುತ್ತಾರೆ.
ಬೆಂಗಳೂರು ಅವ್ಯಾವುದಕ್ಕೂ ಕಡಿಮೆಯಿಲ್ಲ.ಜನರು ಪ್ರಕೃತಿ ಸೌಂದರ್ಯವನ್ನು ಅರಸಿ ವಿವಿಧ ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ಅದರಲ್ಲೂ ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿರುವವರು ವಾರಾಂತ್ಯದಲ್ಲಿ ಹಲವು ಪ್ರದೇಶಗಳಿಗೆ ತೆರಳುತ್ತಾರೆ. ಆದರೆ ಈ ವಸಂತಕಾಲದಲ್ಲಿ ಬೆಂಗಳೂರು ನಗರ ಅಕ್ಷರಶಃ ಸ್ವರ್ಗವೇ ಆಗಿದೆ. ಹೌದು. ಉದ್ಯಾನ ನಗರಿಯ ಮರಗಿಡಗಳಿಗೆ ಈಗ ವಸಂತದ ಸಂಭ್ರಮ. ಹೂವನ್ನು ಹೊದ್ದು ನಿಂತಿರುವ ಮರಗಳು ಬೆಂಗಳೂರಿನ ಬೀದಿಗಳನ್ನು ರಂಗುರಂಗಾಗಿಸಿವೆ. ಇಂತಹ ಹೂವಿನ ಮರಗಳಿರುವ ಬೀದಿಗಳನ್ನು ಜನರು ಹೆಚ್ಚಾಗಿ ದಕ್ಷಿಣ ಕೊರಿಯಾ, ಜಪಾನ್​ನಂತಹ ದೇಶಗಳಲ್ಲಿ ನೋಡಿರುತ್ತಾರೆ. ಬೆಂಗಳೂರು ಅವ್ಯಾವುದಕ್ಕೂ ಕಡಿಮೆಯಿಲ್ಲ. ಬೀಸುವ ಗಾಳಿಗೆ ಉದುರುವ ಹೂವಿನ ಪಕಳೆಗಳು ಜನರಿಗೆ ಹಿಮವನ್ನು ನೆನಪಿಸಲೂ ಸಾಕು. ಕಾರಣ, ಅಂತಹ ವಾತಾವರಣವನ್ನು ಜನರಿಗೆ ನೀಡುತ್ತಿದೆ ‘ನಮ್ಮ ಬೆಂಗಳೂರು’.

ಹೂವುಗಳು ಸಾಮಾನ್ಯವಾಗಿ ಗುಲಾಬಿ ಬಣ್ಣದ ವಿವಿಧ ಛಾಯೆಗಳಲ್ಲಿ ಕಂಡುಬರುತ್ತವೆ. ನೇರಳೆ ಬಣ್ಣದ ಹೂವಿನ- ಟಬೆಬುಯಾ ರೋಸಿಯಾ (Tabebuia Rosea) ಎಂಬ ನಿಯೋಟ್ರೋಪಿಕಲ್ ಮರ ಅರಳಿದೆ. ಇದನ್ನು ‘ಪಿಂಕ್ ಪೌಯಿ’ ಮತ್ತು ‘ರೋಸಿ ಟ್ರಂಪೆಟ್ ಟ್ರೀ’ ಎಂದೂ ಕರೆಯಲಾಗುತ್ತದೆ. ಈ ಮರಗಳು 30 ಮೀ (98 ಅಡಿ) ವರೆಗೆ ಬೆಳೆಯುತ್ತವೆ. ಈ ಮರಗಳು ವಸಂತ ಕಾಲವಾದ್ದರಿಂದ ಈಗ ಭಾರತದಲ್ಲಿ ಅರಳುತ್ತಿವೆ.

ಮರದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ:

ಹಿಂದಿಯಲ್ಲಿ ಇದನ್ನು ಹೆಚ್ಚಾಗಿ ‘ಬಸಂತ್ ರಾಣಿ’ ಎಂದು ಕರೆಯಲಾಗುತ್ತದೆ. ಟಬೆಬುಯಾ ರೋಸಿಯಾ ಸಸ್ಯಗಳು ಶೀಘ್ರವಾಗಿ ಬೆಳೆಯುತ್ತವೆ. ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್​ನಲ್ಲಿ ಸಾಮಾನ್ಯವಾಗಿ ಹೂಬಿಡುತ್ತವೆ. ಈ ಮರಗಳು ಬೆಚ್ಚಗಿನ ಮತ್ತು ಶುಷ್ಕ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತವೆ. ಸಸ್ಯಗಳು 2 ರಿಂದ 3 ವರ್ಷಗಳಲ್ಲಿ ಹೂವುಗಳನ್ನು ಬಿಡಲು ಪ್ರಾರಂಭಿಸುತ್ತವೆ. ವಸಂತ ಕಾಲದಲ್ಲಿ ಹೂ ಬಿಡುವ ಇವುಗಳ ಎಲೆಗಳು ಚಳಿಗಾಲದಲ್ಲಿ ಉದುರುತ್ತವೆ.

ಬೆಂಗಳೂರಿಗರಿಗೆ ಈ ಮರಗಳ ಪ್ರಾಮುಖ್ಯತೆ ಅರಿವಾಗಿರುತ್ತದೆ. ಕಾರಣ, ಇವುಗಳು ರಸ್ತೆಬದಿಗೆ ಉತ್ತಮ ಮರಗಳಾಗಿದ್ದು, ನೆರಳನ್ನು ನೀಡುತ್ತವೆ. ಜತೆಗೆ ನಗರಕ್ಕೆ ಅಂದವನ್ನೂ ನೀಡುತ್ತವೆ. ಪರಿಸರದ ದೃಷ್ಟಿಯಿಂದ ಮಾಲಿನ್ಯ ಭರಿತ ನಗರಗಳಿಗೆ ಇದರ ಪ್ರಾಮುಖ್ಯತೆಯನ್ನು ವಿಶೇಷವಾಗಿ ಹೇಳಬೇಕಿಲ್ಲವಲ್ಲ.. ಉದ್ಯಾನಗಳಲ್ಲಿ ಇವು ಮತ್ತಷ್ಟು ವಿಶಾಲವಾಗಿ ಬೆಳೆಯುತ್ತವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

Leave a Reply

Your email address will not be published. Required fields are marked *

Next Post

ಸಹೋದರಿಯ ಮದುವೆ ಯಲ್ಲಿ ಫುಲ್ ಖುಷ್ ಆದ ಸಹೋದರ..

Sat Apr 9 , 2022
  ಸಹೋದರಿಯ ಮದುವೆ ಯಲ್ಲಿ ಫುಲ್ ಖುಷ್ ಆದ ಸಹೋದರ ಈ ವಿಡಿಯೋವನ್ನು ಗುನ್ವೀತ್ ಸಿಂಗ್ ಡಾಂಗ್ ಎಂಬ ಸಹೋದರ ತನ್ನ ಸಹೋದರಿ ತಾನ್ಯಾ ಕೌರ್ ಅವರೊಂದಿಗೆ ಜಂಟಿಯಾಗಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ತಾನ್ಯಾ ತನ್ನ ಮದುವೆಯ ಉಡುಪಿನಲ್ಲಿ ಕೋಣೆಯಲ್ಲಿ ಕುಳಿತಿದ್ದಾಗ ಅವಳ ಸಹೋದರ ಕೋಣೆಗೆ ಪ್ರವೇಶಿಸುವುದರೊಂದಿಗೆ ಈ ವಿಡಿಯೋ ಶುರುವಾಗುತ್ತದೆ. ನಂತರ ಅವನ ಸಹೋದರಿಯನ್ನು ವಧುವಿನ ಅಲಂಕಾರದಲ್ಲಿ ನೋಡಿ ಸಾಕಷ್ಟು ಆಶ್ಚರ್ಯಚಕಿತನಾಗುತ್ತಾನೆ.   ಅವರ ಪ್ರತಿಕ್ರಿಯೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: