ಜೂಲಿ 2′ ಚಿತ್ರದಲ್ಲಿ ಬೋಲ್ಡ್ ದೃಶ್ಯದಲ್ಲಿ ನಟಿಸಿದ್ದ ನಟಿ ರಾಯ್ ಲಕ್ಷ್ಮಿ ಅವರು ತಮ್ಮ ಇತ್ತೀಚಿನ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋಗಳಲ್ಲಿ ಅವರು ಸ್ಟೈಲಿಶ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದು, ಡೀಪ್ ನೆಕ್ ಬ್ಲೋಔಟ್ನಲ್ಲಿ ಪೋಸ್ ಕೊಟ್ಟಿದ್ದು, ಅಭಿಮಾನಿಗಳ ಹೃದಯ ಬಡಿತವನ್ನು ಹೆಚ್ಚಿಸುತ್ತಿದ್ದಾರೆ.
ಜೊತೆಗೆ ನಟಿ ರಾಯ್ ಲಕ್ಷ್ಮಿ ಅವರು ಡಾರ್ಕ್ ಮೆರೂನ್ ಬಣ್ಣದ ಲಿಪ್ಸ್ಟಿಕ್ ಮತ್ತು ತಮ್ಮ ತಲೆ ಕೂದಲನ್ನು ಫ್ರೀಯಾಗಿ ಬಿಟ್ಟಿರುವುದು ಫೋಟೋದಲ್ಲಿ ನೋಡಬಹುದು. ಇನ್ನೂ ದೊಡ್ಡ ಕಿವಿಯೋಲೆ ಧರಿಸಿ ಹಾಟ್ ಪೋಸ್ ನೀಡಿದ್ದಾರೆ.ನಟಿ ಲಕ್ಷ್ಮೀ ರೈ ಈಗ ರಾಯ್ ಲಕ್ಷ್ಮೀ ಆಗಿದ್ದಾರೆ. ಮೂಲತಃ ಬೆಳಗಾವಿಯವರಾದ ಲಕ್ಷ್ಮೀ, ಮೊದಲು ಬಣ್ಣ ಹಚ್ಚಿದ್ದು ತಮಿಳಿನಲ್ಲಿ. 2005ರಲ್ಲಿ ತೆರೆಕಂಡ ‘ಕಾರ್ಕ ಕಸದಾರ’ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು.
ಆ ಬಳಿಕ, ತೆಲುಗು, ಕನ್ನಡ, ಹಿಂದಿ, ಮಲಯಾಳಂ ಭಾಷೆಗೂ ಎಂಟ್ರಿ ಕೊಟ್ಟು ಪಂಚಭಾಷಾ ತಾರೆ ಎನಿಸಿಕೊಂಡಿದ್ದಾರೆ. ತಮ್ಮ 16 ವರ್ಷಗಳ ವೃತ್ತಿ ಜೀವನದಲ್ಲಿ ಸುಮಾರು 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸದ್ಯ ಲಕ್ಷ್ಮೀ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ನಲ್ಲಿ ಏನಾದ್ರೂ ಹೊಸ ಸಿನಿಮಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಗುಸುಗುಸು ಕೇಳಿಬಂದಿದೆ. ಆದರೆ, ತಮ್ಮ ಹೊಸ ಲುಕ್ನಲ್ಲಿ ಎಲ್ಲರನ್ನು ಮೋಡಿ ಮಾಡಿದ್ದಾರೆ. .(ಕೃಪೆ- ರಾಯ್ ಲಕ್ಷ್ಮಿ ಇನ್ಸ್ಟಾಗ್ರಾಂ)
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada