ಬೆಂಗಳೂರು ಮಾತ್ರವಲ್ಲದೇ ಮಂಡ್ಯ, ಚಾಮರಾಜನಗರ, ಮಂಗಳೂರು, ಉಡುಪಿ ಸೇರಿದಂತೆ ರಾಜ್ಯದ ಹಲವೆಡೆ ವರುಣ ಆರ್ಭಟಿಸಿದ್ದಾನೆ. ಮಂಡ್ಯದಲ್ಲಿ ಒಂದುಗಂಟೆಗಳ ಕಾಲ ಸಿಡಿಲು ಗುಡುಗಿನ ಮಳೆ ಸುರಿದಿದೆ.
ಬಿಸಿಲಿನಿಂದ ಕಂಗೆಟ್ಟಿದ್ದ ಸಿಲಿಕಾನ್ ಸಿಟಿ ಜನರಿಗೆ ಇಂದು ವರುಣ ದೇವ ತಂಪೆರೆದಿದ್ದಾನೆ. ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಬಿಸಿಲಿನ ಝಳಕ್ಕೆ ಜನರು ತತ್ತರಿಸಿದ್ದರು. ಇಂದು ಸಂಜೆ ವೇಳೆ ಸುರಿದ ಮಳೆ ಸಿಂಚನ ಮುದ ನೀಡಿದೆ.
ಬೆಂಗಳೂರು ಮಾತ್ರವಲ್ಲದೇ ಮಂಡ್ಯ, ಚಾಮರಾಜನಗರ, ಮಂಗಳೂರು, ಉಡುಪಿ ಸೇರಿದಂತೆ ರಾಜ್ಯದ ಹಲವೆಡೆ ವರುಣ ಆರ್ಭಟಿಸಿದ್ದಾನೆ. ಮಂಡ್ಯ, ಹಾಸನದಲ್ಲಿ ಒಂದುಗಂಟೆಗಳ ಕಾಲ ಸಿಡಿಲು ಗುಡುಗಿನ ಮಳೆ ಸುರಿದಿದೆ. ಬೆಂಗಳೂರಿನ ಶಾಂತಿನಗರ, ಮೆಜೆಸ್ಟಿಕ್, ವಿಲ್ಸನ್ ಗಾರ್ಡನ್ ಸೇರಿದಂತೆ ಹಲವೆಡೆ ಮಳೆ ಬಂದಿದೆ. ಅಚಾನಕ್ ಆಗಿ ಸಂಜೆ ಸುರಿದ ಮಳೆಯಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸಿದರು.
ಆನೇಕಲ್ನಲ್ಲಿ ಸಂಜೆ ಸುರಿದ ಮಳೆಯಿಂದಾಗಿ ಜನರು ಟ್ರಾಫಿಕ್ ಕಿರಿಕಿರಿ ಅನುಭವಿಸುವಂತೆ ಆಯಿತು. ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನರಿಗೆ ಮಳೆ ಮುದ ನೀಡಿತು
ಮಳೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿ ಪೇಟೆ ಬೀದಿ ಸೇರಿದಂತೆ ಹಲವು ರಸ್ತೆಗಳು ಜಲಾವೃತ ಆದವರು. ಬಿರುಗಾಳಿಗೆ ಹಲವೆಡೆ ಮನೆಯ ಹೆಂಚುಗಳು ನೆಲಕ್ಕೆ ಬಿದ್ದು ಚೂರಾಗಿವೆ ಎಂಬ ವರದಿ ಆಗಿದೆಚಾಮರಾಜನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಿಡಿಲು ಬಡುದಿ ಹಸು ಸಾವನ್ನಪ್ಪಿದೆ. ಚಾಮರಾಜನಗರ ತಾಲೋಕು ಗೂಳಿಪುರದಲ್ಲಿ ರೈತ ಪರ್ವತಪ್ಪ ಎಂಬುವರಿಗೆ ಸೇರಿದ ಹಸು ಹೊಲದಲ್ಲಿ ಮೇಯಲು ಬಿಟ್ಟಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದೆ.