ಮೋಹಕತಾರೆ ರಮ್ಯಾ ಇತ್ತಿಚಿಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು, ಸಿನಿಮಾ ತಾರೆಯರಿಗೆ ಮೆಚ್ಚುಗೆಯ ಮಾತುಗಳಾನ್ನಾಡಿ ಪ್ರೋತ್ಸಾಹವನ್ನು ನೀಡುತ್ತಿದ್ದರೆ. ಕನ್ನಡದ ಎಲ್ಲ ಸಿನಿಮಾಗಳ ಪೋಸ್ಟರ್ ತಮ್ಮ ಪ್ರೋಫಲ್ನಲ್ಲಿ ಹಾಕಿಕೊಂಡು ಅಭಿಮಾನಿಗಳಿಗೆ ಸಿನಿಮಾ ನೋಡಲು ಪ್ರೋತ್ಸಾಹಿಸುವ ನಟಿ ರಮ್ಯಾ ಇಂದು ಚಂದನವನದ ಡಿಂಪಲ್ ಕ್ವೀನ್ ಫೋಟೋಗೆ ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ. ರಚಿತಾ ರಾಮ್ ಸ್ಯಾಂಡಲ್ವುಡ್ ಸಖತ್ ಬ್ಯುಸಿ ನಟಿಯರಲ್ಲಿ ಒಬ್ಬರು. ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿ ಕನ್ನಡಿಗರ ಮನೆ ಮಗಳಾಗಿರುವ ಈ ನಟಿಗೆ ಮೋಹಕತಾರೆ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಬಹಳ ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ರಚಿತಾ ರಾಮ್, ಇದು ಮಿಂಚುವ ಕಾಲ ಎಂದು ಬರೆದು ಸಾಂಪ್ರದಾಯಿಕ ಸೀರೆಯುಟ್ಟು ವೀಡಿಯೋ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ಅಭಿಮಾನಿಗಳು ಸಖತ್ ಖುಷ್ ಆಗಿದ್ದು, ಇದರಲ್ಲಿ ಮತ್ತೊಂದು ವಿಶೇಷತೆಗೆ ಈ ಪೋಸ್ಟ್ ಸುದ್ದಿಯಾಗಿದೆ. ರಚ್ಚು ಫೋಟೋ ನೋಡಿದ ಸ್ಯಾಂಡಲ್ವುಡ್ ಕ್ವಿನ್ ಮೋಹಕತಾರೆ ರಮ್ಯಾ, ಸುಂದರಿ ಎಂದು ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್ ನೋಡಿದ ಅಭಿಮಾನಿಗಳು, ಸ್ಯಾಂಡಲ್ವುಡ್ ಕ್ವಿನ್ ನೀವು. ಸಾವಿರಾರು ಜನರು ಬರಬಹುದು ಮತ್ತು ಹೋಗಬಹುದು ಆದರೆ ನೀವು ನಮಗೆ ಕ್ವಿನ್. ಕಿಚ್ಚ ಬಾಸ್ ಜೊತೆ ಮತ್ತೆ ಯಾವಾಗ ನಟಿಸುತ್ತೀರಿ ಎಂದು ಅಭಿಮಾನಿಗಳು ರಮ್ಯಾ ಅವರನ್ನು ಪ್ರಶ್ನಿಸಿದ್ದರೆ. ಕನ್ನಡಿಗರ ಎವರ್ಗ್ರೀನ್ ಹೀರೋಹಿನ್ ಆಗಿರುವ ರಮ್ಯಾ ಮತ್ತೆ ಅಭಿಮಾನಿಗಳಿಗೆ ಕಾಣಿಸಿಕೊಳ್ಳುತ್ತಿದ್ದು, ಅವರು ಯಾವ ಸಿನಿಮಾ ಮಾಡುತ್ತಾರೆ ಎಂದು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ರಮ್ಯಾ ಮಾತ್ರ ಇಲ್ಲಿವರೆಗೂ ಯಾವುದೇ ಸಿನಿಮಾ ಘೋಷಣೆ ಮಾಡಿಲ್ಲ. ಇದು ಅಭಿಮಾನಿಗಳಿಗೆ ಬಹಳ ಬೆಸರದ ವಿಷಯವಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada