ಬಾಲಿವುಡ್ನ ಮತ್ತೊಂದು ತಾರಾ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ಕೆಲವೇ ಆಪ್ತರ ಸಮ್ಮುಖದಲ್ಲಿ ನಡೆದ ಮದುವೆ. ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದ ರಣಬೀರ್ ಆಲಿಯಾ ಇಂದು ಮದುವೆ ಆಗಿದ್ದಾರೆ.ಇನ್ನು ತಮ್ಮ ಮದುವೆಯ ಕೆಲವು ಫೋಟೋಗಳನ್ನು ನಟಿ ಆಲಿಯಾ ಭಟ್ ಸಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿ ಕಾಯುವಿಕೆಗೆ ಅಂತ್ಯ ಹಾಡಿದ್ದಾರೆ. ಬಂಗಾರದ ಬಿಳಿ ವಸ್ತ್ರದಲ್ಲಿ ಇಬ್ಬರು ಕಂಗೊಳಿಸಿದ್ದಾರೆ. ಇವರಿಬ್ಬರ ಮದುವೆಯ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಇಬ್ಬರಿಗೂ ಶುಭಾಶಯ ಕೋರುತ್ತಿದ್ದಾರೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಮದುವೆಯನ್ನು ತುಂಬಾ ಖಾಸಗಿತನ ಕಾಯ್ದುಕೊಳ್ಳಲಾಗಿತ್ತು. ಆದರೂ ಮದುವೆ ಶಾಸ್ತ್ರಗಳ ಕುರಿತ ಕೆಲ ವಿವರಗಳು ಲೀಕ್ ಆಗಿದ್ದವು. ಮದುವೆಯಲ್ಲಿ ಬಾಲಿವುಡ್ ತಾರೆಯರು ರಣಬೀರ್-ಆಲಿಯಾ ಅವರ ಮದುವೆಗೆ ಹಾಜರಾಗಿದ್ದು, ಅದರಲ್ಲಿ ಸೈಫ್ ಅಲಿ ಖಾನ್, ಕರೀನಾ ಕಪೂರ್, ಕರಿಷ್ಮಾ ಕಪೂರ್, ಕರಣ್ ಜೋಹರ್ ಭಾಗಿಯಾಗಿದ್ದರು. ಮುಂಬೈನ ತಾಜ್ ಹೋಟೆಲ್ನಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಯ ನಂತರ ಅದ್ಧೂರಿ ಆರತಕ್ಷತೆ ನಡೆಯಲಿದೆ ಎಂಬ ಸುದ್ದಿ ಕೇಳಿ ಬಂದಿತು. ಆದರೆ ಅದು ನಡೆಯುತ್ತಿಲ್ಲ ಎಂಬ ಸುದ್ದಿ ಈಗ ಹೊರ ಬಿದ್ದಿದೆ. ಅಭಿಮಾನಿಗಳು ಸೇರಿದಂತೆ ಬಾಲಿವುಡ್ ನಟ ನಟಿಯರು ಇಬ್ಬರಿಗೂ ಮದುವೆ ಶುಭಾಶಯ ಕೋರಿದ್ದಾರೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada