ವೈವಾಹಿಕ ಜೀವನಕ್ಕೆ ಕಾಲಿಡುತ್ತಾರ ರಣಬೀರ್ ಆಲಿಯಾ?

 

 

ಬಾಲಿವುಡ್ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರು ಇದೇ ಏಪ್ರಿಲ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಬಾಲಿವುಡ್ ಜೋಡಿಗಳಾದ ವಿಕ್ಕಿ ಕೌಶಲ್ಕತ್ರಿನಾ ಕೈಫ್, ಫರ್ಹಾನ್ ಅಖ್ತರ್ಶಿಬಾನಿ ದಾಂಡೇಕರ್ ಅವರ ವಿವಾಹದ ನಂತರ ಬಾಲಿವುಡ್ ಎದುರು ನೋಡುತ್ತಿರುವ ದೊಡ್ಡ ಮದುವೆ ಇದಾಗಿದೆ.

29 ಹರೆಯದ ಆಲಿಯಾ ಮತ್ತು 39 ಹರೆಯದ ರಣಬೀರ್ ತಮ್ಮ ಸಂಬಂಧದ ಬಗ್ಗೆ ಹೇಳಿಕೊಂಡಿದ್ದರೂ ಮದುವೆಯ ಬಗ್ಗೆ ಮಾತನಾಡುವುದರಿಂದ ದೂರವಿರುತ್ತಾರೆ. ಚಿತ್ರ ಪ್ರೇಮಿಗಳು ಮತ್ತು ಸುದ್ದಿಗಾರರು ಅವರ ಮದುವೆಯ ಸುದ್ದಿ ಕೇಳಲು ಕಾತುರರಾಗಿದ್ದಾರೆ.

ರಣಬೀರ್ ಅವರ ತಾಯಿ ನೀತು ಕಪೂರ್ ಅವರು ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಮಳಿಗೆಯಲ್ಲಿ ಕಾಣಿಸಿಕೊಂಡಿರುವುದು ಬಳಿಕ ಮನೀಶ್ ಅವರ ಮನೆಗೆ ತೆರಳಿರುವುದು ಮದುವೆಗೆ ಸಿದ್ಧತೆ ನಡೆಯುತ್ತಿರುವ ಸೂಚನೆ ಎಂದು ಊಹಿಸಲಾಗಿದೆ.

ತಾರಾ ಜೋಡಿ ಮದುವೆ ಗಾಗಿ ಚಲನಚಿತ್ರಗಳ ಚಿತ್ರೀಕರಣದಿಂದ ದಿನಾಂಕಗಳ ಬಿಡುವನ್ನು ಕೇಳಿದ್ದಾರೆ ಎಂದು ಮೂಲವೊಂದು ತಿಳಿಸಿದೆ.

ಆಲಿಯಾ ಮತ್ತು ರಣಬೀರ್ ಇತ್ತೀಚೆಗೆ ವಾರಣಾಸಿಯಲ್ಲಿಬ್ರಹ್ಮಾಸ್ತ್ರಚಿತ್ರದ ಕೊನೆಯ ದೃಶ್ಯಗಳನ್ನು ಚಿತ್ರೀಕರಿಸಿ ಮುಂಬೈಗೆ ಮರಳಿದ್ದಾರೆ. ಅವರು ಒಟ್ಟಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅಯನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ ಚಿತ್ರವು ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗಲಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

Leave a Reply

Your email address will not be published. Required fields are marked *

Next Post

ಸಾಮಾಜಿಕ ಸಮಸ್ಯೆಗಳ ವಿರುದ್ಧ ನಡೆಸುವ ಹೋರಾಟದ ಕಥಾಹಂದರವೇ "ಕೈಲಾಸ ಕಾಸಿದ್ರೆ"

Sat Mar 26 , 2022
ಅನಂತಪುರದ ವಾಸಿಕ್ ಅನ್ಸಾದ್ ಅವರು ನಿರ್ಮಿಸಿರುವ, ನಾಗ್ ವೆಂಕಟ್ ನಿರ್ದೇಶನದಲ್ಲಿ “ತಾರಕಾಸುರ” ಖ್ಯಾತಿಯ ವೈಭವ್ ನಾಯಕನಾಗಿ ನಟಿಸಿರುವ “ಕೈಲಾಸ ಕಾಸಿದ್ರೆ” ಚಿತ್ರ ಟೀಸರ್ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ಮಾಧ್ಯಮದ ಮುಂದೆ ಚಿತ್ರತಂಡ ಚಿತ್ರದ ಕುರಿತು ಮಾಹಿತಿ ನೀಡಿತು‌. ನಮ್ಮ ಈ ಸಮಾಜದಲ್ಲಿ ಯುವಜನತೆ ಡ್ರಗ್ ಮಾಫಿಯಾ ಸೇರಿದಂತೆ ಅನೇಕ ದುಷ್ಟ ಚಟುವಟಿಕೆಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದನ್ನೇ ಕೇಂದ್ರವಾಗಿಟ್ಟುಕೊಂಡು ಈ ಚಿತ್ರವನ್ನು ನಿರ್ದೇಶಿಸಿದ್ದೇನೆ. ಬರೀ ಇಷ್ಟೇ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: