ರಣ್ ವೀರ್ ಸಿಂಗ್ ಜೊತೆಗೆ ಹೆಜ್ಜೆ ಹಾಕಿದ ಅನುರಾಗ್ ಠಾಕೂರ್..!

ಬಾಲಿವುಡ್ ನಟ ರಣ್‍ವೀರ್ ಸಿಂಗ್ ತಮ್ಮ ಕ್ರೇಜಿನೆಸ್ ಮೂಲಕ ತಮ್ಮ ಜೊತೆಯಲ್ಲಿರುವವರನ್ನು ಸದಾ ಸಂತೋಷದಿಂದ ಇರಿಸುವ ರಣ್‍ವೀರ್ ಸಿಂಗ್ ಅವರು ಸೋಮವಾರ ದುಬೈ ಎಕ್ಸ್’ಪೋ 2020ರಲ್ಲಿ ಇಂಡಿಯನ್ ಪೆವಿಲಿಯನ್‍ನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ರಣವೀರ್ ಅವರೊಂದಿಗೆ ಮಲ್ಹಾರಿ ಸಾಂಗ್‍ಗೆ ಹೆಜ್ಜೆ ಹಾಕಿದ್ದಾರೆ. 2016ರಲ್ಲಿ ತೆರೆಕಂಡ ನಟಿ ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರಾ ಹಾಗೂ ರಣ್‍ವೀರ್ ಸಿಂಗ್ ಅಭಿನಯ ಬಾಜಿರಾವ್ ಮಸ್ತಾನಿ ಸಿನಿಮಾ ಬಾಲಿವುಡ್ ಗೆ ಭಾರೀ ಸದ್ದು ಮಾಡಿತ್ತು. ಅಲ್ಲದೇ ಈ ಸಿನಿಮಾದ ಮಲ್ಹಾರಿ ಸಾಂಗ್‍ಗೆ ಸಿನಿ ಪ್ರಿಯರು ಫಿದಾ ಆಗಿದ್ದರು. ಸದ್ಯ ಈ ಸಾಂಗ್‍ಗೆ ರಣ್‍ವೀರ್ ಸಿಂಗ್ ಹಾಗೂ ಅನುರಾಗ್ ಠಾಕೂರ್ ಒಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅನುರಾಗ್ ಠಾಕೂರ್ ಅವರು ರಣವೀರ್ ಅವರೊಂದಿಗೆ ದಿ ಗ್ಲೋಬಲ್ ರೀಚ್ ಆಫ್ ಇಂಡಿಯನ್ ಮೀಡಿಯಾ ಮತ್ತು ಎಂಟರ್‍ಟೈನ್‍ಮೆಂಟ್ ಇಂಡಸ್ಟ್ರಿ ಕುರಿತಂತೆ ಚರ್ಚಿಸಲು ಇಂಡಿಯಾ ಪೆವಿಲಿಯನ್‍ಗೆ ತೆರಳಿದ್ದರು. ಈ ವೇಳೆ ರಣ್‍ವೀರ್ ಸಿಂಗ್ ಅವರು ಅನುರಾಗ್ ಠಾಕೂರ್ ಅವರ ಕೈ ಹಿಡಿದು ಮಲ್ಹಾರಿ ಹಾಡಿಗೆ ಸ್ಟೆಪ್ ಹಾಕುವಂತೆ ಒತ್ತಾಯಿಸಿದರು. ಆಗ ಅನುರಾಗ್ ಠಾಕೂರ್ ಅವರು ರಣ್‍ವೀರ್ ಜೊತೆಗೆ ಮಲ್ಹಾರಿ ಸಾಂಗ್‍ನ ಸಿಗ್ನೇಚರ್ ಸ್ಟೆಪ್ ಹಾಕಿದ್ದಾರೆ. ಇದೇ ವೇಳೆ ಮಾತನಾಡಿದ ಅನುರಾಗ್ ಠಾಕೂರ್ ಅವರು, ಮುಂದಿನ ವರ್ಷದ ವೇಳೆಗೆ ಭಾರತವು ಪ್ರಪಂಚದ ಉಪಖಂಡವಾಗಬೇಕು ಎಂದು ನಾನು ಭಾವಿಸುತ್ತೇನೆ. ಇಂದು ಭಾಷೆಯು ಯಾವುದಕ್ಕೂ ಅಡ್ಡಿಯಲ್ಲ. ಹಾಡಿನ ಮೂಲಕ ಸಮಾಜದ ಎಲ್ಲಾ ವರ್ಗದ ಜನರು ಭಾರತದ ಧ್ವನಿಯನ್ನು ಪ್ರತಿಬಿಂಬಿಸುತ್ತಿದ್ದರೆ. ಹಾಡು ಭಾರತೀಯ ಚಲನಚಿತ್ರೋದ್ಯಮದ ದೊಡ್ಡ ಕೊಡುಗೆಯಾಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.nationaltv.kannada

 

 

Leave a Reply

Your email address will not be published. Required fields are marked *

Next Post

"ಗಂಧರ್ವ"ನ ಫಸ್ಟ್‌ ಲುಕ್‌ ಬಿಡುಗಡೆ ಮಾಡಿರುವ ರಾಘವೇಂದ್ರ ರಾಜಕುಮಾರ್

Tue Mar 29 , 2022
  ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರ ಬಳಿ ಕಾರ್ಯ ನಿರ್ವಹಿಸಿರುವ ಉಮೇಶ್ ಕುಮಾರ್ ಜಿ ಪ್ರಥಮ ನಿರ್ದೇಶನದ “ಗಂಧರ್ವ” ಚಿತ್ರದ ಫಸ್ಟ್ ಲುಕನ್ನು ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಈ ಚಿತ್ರದ ವಿಶೇಷ ಪಾತ್ರದಲ್ಲಿ ಕೂಡ ರಾಘಣ್ಣ ಅಭಿನಯಿಸುತ್ತಿದ್ದಾರೆ. ಆದರೆ ನಮ್ಮ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರನ್ನು ಈಗಿರುವ ರೀತಿ ತೋರಿಸಲ್ಲ. ಹಿಂದೆ ರಾಘಣ್ಣ ಹೇಗಿದ್ದರೊ ಹಾಗೆ ನೋಡಬಹುದು ಎಂದು ನಿರ್ದೇಶಕರು ತಿಳಿಸಿದ್ದಾರೆ. ಗೋವಿಂದ್ ರಾಜ್  ಈ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: