ಮುಂಬೈ ವಿರುದ್ದ ಆರ್ ಸಿಬಿ ಗೆ ಭರ್ಜರಿ ಜಯ

ಮುಂಬೈ ವಿರುದ್ದ ಆರ್ ಸಿಬಿ ಗೆ ಭರ್ಜರಿ ಜಯ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಮೂರನೇ ಜಯ ದಾಖಲಿಸಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯಗಳಿಸಿದೆ.

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಸತತ ನಾಲ್ಕನೇ ಸೋಲು ಕಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ನಿಗದಿತ 20 ಓವರುಗಳಲ್ಲಿ 6 ವಿಕೆಟ್ ಕಳೆದುಕೊಂಡು 151 ರನ್ . ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಗುರಿ ಬೆನ್ನತ್ತಿ ಇನ್ನೂ 9 ಎಸೆತಗಳು ಬಾಕಿ ಇರುವಂತೆಯೇ ಮೂರು ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು.

ಮುಂಬೈ ಇಂಡಿಯನ್ಸ್ ಪರವಾಗಿ ಇಶಾನ್ ಕಿಶನ್ 26, ರೋಹಿತ್ ಶರ್ಮಾ 26, ಸೂರ್ಯ ಕುಮಾರ್ ಯಾದವ್ ಅಜೇಯ 68 ರನ್ ಗಳಿಸಿದರು. ಆರ್ ಸಿಬಿ ಪರವಾಗಿ ವನಿಂದು ಹಸರಂಗ 2, ಆಕಾಶ್ ದೀಪ್ 1, ಹರ್ಷಲ್ ಪಟೇಲ್ 2 ವಿಕೆಟ್ ಪಡೆದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು 18.3 ಓವರುಗಳಲ್ಲಿ 3 ವಿಕೆಟ್ 152 ರನ್ ಗಳಿಸಿ ಗೆಲುವಿನ ನಗೆ ಬೀರಿದೆ. ಫಾಫ್ ಡು ಪ್ಲೆಸಿಸ್ 16, ಅನುಜ್ ರಾವತ್ 66, ವಿರಾಟ್ ಕೊಹ್ಲಿ 48, ದಿನೇಶ್ ಕಾರ್ತಿಕ್ ಅಜೇಯ 7 ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಅಜೇಯ 8 ರನ್ ಗಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

Leave a Reply

Your email address will not be published. Required fields are marked *

Next Post

ಮೀನಿನ ರೀತಿ ಕಾಣುತ್ತೆಆದ್ರೆ ಮೀನಲ್ಲ ! ಏನಿದು ವಿಚಿತ್ರ ಪ್ರಾಣಿ ?

Sun Apr 10 , 2022
  ಮೀನಿನ ರೀತಿ ಕಾಣುತ್ತೆಆದ್ರೆ ಮೀನಲ್ಲ ! ಏನಿದು ವಿಚಿತ್ರ ಪ್ರಾಣಿ ? 39  ವರ್ಷದ ರೋಮನ್ ಫೆಡೋಟ್ಸೋವ್ ರಷ್ಯಾದ ಮರ್ಮನ್ಸ್ಕ್ ಮೂಲದವರು. ಅವರು ನಾರ್ವೇಜಿಯನ್ ಸಮುದ್ರದ ಆಳದಿಂದ ‘ಡ್ರಾಗನ್ಸ್ ಮಗುವಿನಂತೆ ಕಾಣುವ’ ಮೀನನ್ನು ಕಂಡುಹಿಡಿದಿದ್ದಾರೆ. ರಷ್ಯಾದ ಮೀನುಗಾರರೊಬ್ಬರು ಸಮುದ್ರದಲ್ಲಿ ವಿಚಿತ್ರ ಪ್ರಾಣಿಯನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ರಷ್ಯಾದ ಮೀನುಗಾರರೊಬ್ಬರು ಸಮುದ್ರದಲ್ಲಿ ನೊಡಿರುವ ಪ್ರಾಣಿ ತುಂಬಾ ವಿಚಿತ್ರವಾಗಿದೆ. ಅದು ಮೀನಿನಂತೆ ಕಾಣುತ್ತದೆ ಆದರೆ ಅದು ಡ್ರ್ಯಾಗನ್ ಬೇಬಿಯ ಮುಖದಂತೆ ಕಾಣುತ್ತದೆ. […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: