RRR ಕಾಲ್ಪನಿಕವಲ್ಲ ರಿಯಲ್ ಸ್ಟೋರಿ ಏನ್ ಸ್ಟೋರಿ ಇದು..
ಈ ರಾಜಮೌಳಿ ಎಂಬ ಸಿನಿಮಾ ಮಾಂತ್ರಿಕನ ಬಗ್ಗೆ ನಿಮಗೆ ಗೊತ್ತೇ ಇದೆ. ಒಂದು ನೊಣವನ್ನಾದರೂ ಇಟ್ಟುಕೊಂಡು ಅದ್ಭುತ ಸಿನಿಮಾ ಮಾಡಬಹುದು ಅಂತ ಈಗಾಗಲೇ ಅವರು ನಿರೂಪಿಸಿದ್ದಾರೆ. ಬಾಹುಬಲಿ ಹಾಗೂ ಬಾಹುಬಲಿ 2ನಂತಹ ವೈಭವಯುತ ಸಿನಿಮಾದಲ್ಲಿ ಅದ್ಭುತ ಕಥೆ ಹೇಳಿದ್ದ ರಾಜಮೌಳಿ, ಈ ಬಾರಿ ಸ್ವಾತಂತ್ರ್ಯ ಪೂರ್ವದ ಕಾಲ್ಪನಿಕ ಕಥೆ ಹೇಳಿದ್ದರು.
ಇಲ್ಲಿ ರಾಮ್ ಚರಣ್ ಅಲ್ಲೂರಿ ಸೀತಾರಾಮ ರಾಜುವಾಗಿ ನಟಿಸಿದ್ದರೆ, ಜ್ಯೂ. ಎನ್ಟಿಆರ್ ಕೊಮರಮ್ ಭೀಮನಾಗಿ ಅಭಿನಯಿಸಿದ್ದಾರೆ. ಬ್ರಿಟೀಷ್ ಆಡಳಿತದಲ್ಲಿ ಪೊಲೀಸ್ ಆಗಿದ್ದ ಸೀತಾರಾಮ ರಾಜುಗೆ ದೊಡ್ಡ ಹುದ್ದೆಗೆ ಏರುವ ಆಸೆ. ಆತ್ತ ಕಾಡಿನಲ್ಲಿ ಬೆಳೆಯುವ ಕೊಮರಮ್ ಭೀಮನಿಗೆ ತನ್ನ ಕಾಡು, ತನ್ನ ಜನರೇ ಪ್ರಪಂಚ. ಹೀಗೆ ಭೀಮನ ಗುಂಪಿನ ಹುಡುಗಿಯೊಬ್ಬಳನ್ನು ಬ್ರಿಟಿಷರು ಕರೆದೊಯ್ಯುತ್ತಾರೆ. ಆಕೆಯನ್ನು ಹುಡುಕಿಕೊಂಡು ಭೀಮ್ ಕಾಡಿನಿಂದ ಆಚೆಗೆ ಬರುತ್ತಾನೆ. ಅಲ್ಲೂರಿ ಸೀತಾರಾಮ ರಾಜುಗೆ ಎದುರಾಗುತ್ತಾನೆ. ಅಲ್ಲಿಂದ ಮುಂದೆ ಕಥೆ ಮತ್ತೊಂದು ಹಂತ ತಲುಪುತ್ತದೆ.
1920 ರ ದಶಕದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೋಮರಂ ಭೀಮ್ ಅವರ ಜೀವನದ ಕತೆಯನ್ನು ಕಾಲ್ಪನಿಕವಾಗಿ RRR ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಈ ಬಗ್ಗೆ ನಿರ್ದೇಶಕ ರಾಜಮೌಳಿ ಪದೇ ಪದೇ ಒತ್ತಿ ಹೇಳಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada