ಕೂದಲಿಗೆ ಕತ್ತರಿ ಹಾಕಿದ ಅನುಪಮಾ!
ಅನುಪಮಾ ಗೌಡ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿಯರಲ್ಲಿ ಇವರು ಕೂಡಾ ಒಬ್ಬರು. ‘ಅಕ್ಕ’ ಧಾರಾವಾಹಿಯಿಂದ ಖ್ಯಾತಿ ಗಳಿಸಿದ ಅನುಪಮಾ ಗೌಡ, ನಂತರ ಕಿರುತೆರೆ ನಿರೂಪಕಿಯಾಗಿ ಬದಲಾದರು. ಬಿಗ್ ಬಾಸ್ಗೂಹೋಗಿ ಸೈ ಎನಿಸಿಕೊಂಡಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಿ, ಜನಮನ ಗೆದ್ದಿದ್ದ ‘ನಮ್ಮಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋಗೆ ಇವರೇ ನಿರೂಪಕಿ. ಅನುಪಮಾ ಗೌಡ ತಮ್ಮ ಉದ್ದನೆಯ ಕೂದಲಿನಿಂದಲೂ ಅಭಿಮಾನಿಗಳನ್ನು ಆಕರ್ಷಿಸಿದ್ದರು. ಇದೀಗ ಅನುಪಮಾ ತಮ್ಮ ಉದ್ದ ಕೂದಲಿಗೆ ಕತ್ತರಿ ಹಾಕಿದ್ದಾರೆ. ಅರೇ ಅದ್ಯಾಕಪ್ಪ ಅನುಪಮಾ ಗೌಡ ಹಿಂಗ್ ಮಾಡಿದ್ರು? ‘ಅಕ್ಕ’ನಿಗೆ ಅದೇನಾಯ್ತು ಅಂತ ಯೋಚಿಸಬೇಡಿ, ಬದಲಾಗಿ ಈ ಸುದ್ದಿ ಓದಿ…
ಬೇರೆಯವರಿಗೆ ಏನಾದರೂ ನಮ್ಮ ಕೈಯಲ್ಲಿ ಆದ ಸಹಾಯ ಮಾಡಬೇಕು ಯೋಚನೆ ಮಾಡುತ್ತಿರುವ ಕನ್ನಡದ ನಟಿ ಮತ್ತು ನಿರೂಪಕಿಯಾದ ಅನುಪಮಾ ಗೌಡ ಅವರು ಸಹ ಒಂದೊಳ್ಳೆ ಕೆಲಸಕ್ಕೆ ಮುಂದಾಗಿದ್ದಾರೆ. ಬಿಗ್ಬಾಸ್ ಕನ್ನಡ ಸೀಸನ್ 5ರ ಸೆಲೆಬ್ರಿಟಿ ಸ್ಪರ್ಧಿ ಅನುಪಮಾ ಗೌಡ ಅವರು ತಮ್ಮ ಸಿಗ್ನೇಚರ್ ಲಾಂಗ್ ಹೇರ್ ಅನ್ನು ಒಂದು ಉದ್ದೇಶಕ್ಕಾಗಿ ದಾನ ಮಾಡಿದ್ದಾರೆ. ತನ್ನ ಕೂದಲಿನ ಬಗ್ಗೆ ಸಾಕಷ್ಟು ಗೀಳನ್ನು ಹೊಂದಿರುವ ನಟಿ, ಇತ್ತೀಚೆಗೆ ಕ್ಯಾನ್ಸರ್ ರೋಗಿಗಳಿಗೆ ವಿಗ್ಗಳನ್ನು ತಯಾರಿಸಲು ತನ್ನ ಕೂದಲನ್ನು ದಾನ ಮಾಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada