60 ವರ್ಷಗಳನ್ನು ಕಳೆದಿರೋ ಶಿವಣ್ಣ, ಇನ್ನೂ 16ರ ಹುಮ್ಮಸ್ಸಲ್ಲೇ ಇದ್ದಾರೆ ಅಂದ್ರೆ ಅತಿಶಯೋಕ್ತಿಯೇನಲ್ಲ. ಡಾನ್ಸ್ ಅಂದ್ರೆ ಶಿವಣ್ಣ.. ಶಿವಣ್ಣ ಅಂದ್ರೆ ಡಾನ್ಸ್ ಅಂದರೂ ತಪ್ಪೇನೂ ಆಗೋದಿಲ್ಲ. ಇದೀಗ ಶಿವಣ್ಣ ನಿಮ್ಮನ್ನೆಲ್ಲ ಕುಣಿಸೋದಕ್ಕೆ ಬರುತ್ತಿದ್ದಾರೆ!
ಕನ್ನಡ ಚಿತ್ರರಂಗದ ‘ಚಿರಯುವಕ’ ಯಾರು ಅಂದ್ರೆ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅಂತ ಒಂದೇ ಮಾತಲ್ಲಿ ಹೇಳಬಹುದು. 60 ವರ್ಷಗಳನ್ನು ಕಳೆದಿರೋ ಶಿವಣ್ಣ, ಇನ್ನೂ 16ರ ಹುಮ್ಮಸ್ಸಲ್ಲೇ ಇದ್ದಾರೆ ಅಂದ್ರೆ ಅತಿಶಯೋಕ್ತಿಯೇನಲ್ಲ. ಡಾನ್ಸ್ ಅಂದ್ರೆ ಶಿವಣ್ಣ.. ಶಿವಣ್ಣ ಅಂದ್ರೆ ಡಾನ್ಸ್ ಅಂದರೂ ತಪ್ಪೇನೂ ಆಗೋದಿಲ್ಲ. ಶಿವಣ್ಣ ಅವ್ರಿಗೆ ಡಾನ್ಸ್ ಅಂದ್ರೆ ಪ್ರಾಣ, ಅವರು ಸಖತ್ ಆಗಿ ಡಾನ್ಸ್ ಮಾಡುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಇದೀಗ ತಮ್ಮ ಡಾನ್ಸ್ ಮೂಲಕ ಇಡೀ ಕರ್ನಾಟಕವನ್ನೇ ಕುಣಿಸೋದಕ್ಕೆ ಶಿವಣ್ಣ ನಿಮ್ಮ ಮನೆಗೆ ಬರ್ತಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ‘ಡಾನ್ಸ್ ಕರ್ನಾಟಕ ಡಾನ್ಸ್’ನ ಮುಂದಿನ ಸೀಸನ್ಗೆ ಶಿವರಾಜ್ಕುಮಾರ್ ಅವರೇ ಜಡ್ಜ್ ಆಗಲಿದ್ದಾರೆ.
ಕಿರುತೆರೆಗೆ ಬರುತ್ತಿದ್ದಾರೆ ಶಿವಣ್ಣ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada