ಚಿತ್ರಮಂದಿರದಲ್ಲಿ ‘RRR’ ದ್ವಿತೀಯಾರ್ಧವನ್ನು ತೋರಿಸಲಿಲ್ಲ:
ಕ್ಯಾಲಿಫೋರ್ನಿಯಾದ ಥಿಯೇಟರ್ನಲ್ಲಿ ಎಸ್ಎಸ್ ರಾಜಮೌಳಿ ಅವರ ‘ಆರ್ಆರ್ಆರ್’ ಮೊದಲಾರ್ಧವನ್ನು ತೋರಿಸಲಾಗಿದೆ ಆದರೆ ದ್ವಿತೀಯಾರ್ಧವನ್ನು ತೋರಿಸಲಿಲ್ಲ ಎಂದು ಚಲನಚಿತ್ರ ವಿಮರ್ಶಕಿ ಅನುಪಮಾ ಚೋಪ್ರಾ ಶುಕ್ರವಾರ ಟ್ವೀಟ್ ಮಾಡಿದ್ದಾರೆ.
“ಮೊದಲ ಬಾರಿ ಈ ರೀತಿ ಆಗಿದೆ, ನಾನು ನಾರ್ತ್ ಹಾಲಿವುಡ್ ನ ಸಿನಿ ಮಾರ್ಕ್ ಗೆ RRR ನೋಡಲು ಮೊದಲ ದಿನದ ಮೊದಲ ಶೋಗೆ ಹೋಗಿದ್ದೆ, ಆದರೆ ಥೀಯೇಟರ್ ನವರು ಚಿತ್ರದ ಮೊದಲಾರ್ಧ ಮಾತ್ರ ತೋರಿಸಿ ಮಿಕ್ಕ ಭಾಗವನ್ನ ಇಂಜಸ್ಟ್ ಮಾಡದೆ ನಮಗೆ ಯಾವ ಸೂಚನೆಯೂ ಬಂದಿಲ್ಲ ಎಂಬ ಬೇಜವಾಬ್ದಾರಿ ಹೇಳಿಕೆಯನ್ನ ಕೊಟ್ಟಿದ್ದು ಮನಸಿಗೆ ಬಹಳ ನೋವುಂಟು ಮಾಡಿದೆ” ಎಂದು ತಮ್ಮ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada