ಕೇಸರಿ ಬಟ್ಟೆ ತೊಟ್ಟಿರುವ ಹಿಂದೂ ಧರ್ಮದರ್ಶಿಯೊಬ್ಬರು ಸಾರ್ವಜನಿಕವಾಗಿ ಮುಸ್ಲಿಂ ಮಹಿಳೆಯರನ್ನು ಅಪಹರಿಸಿ ಅತ್ಯಾಚಾರ ಮಾಡುವಂತೆ ಕರೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. . ವೈರಲ್ ಆದ ದೃಶ್ಯಗಳನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕರ್ನಾಟಕದಲ್ಲಿ ಹಿಜಾಬ್ ಕಿಡಿ ಹತ್ತಿಕೊಂಡಿದ್ದೇ ತಡ ಧರ್ಮಗಳ ನಡುವೆ ಬೆಂಕಿ ಹಚ್ಚಿ ತುಪ್ಪ ಸುರಿಯುವ ಕೆಲಸ ಭರದಿಂದ ಸಾಗಿದೆ. ಆರಂಭದಲ್ಲಿ ಹಿಜಾಬದ, ನಂತರ ಹಲಾಲ್ ಮಾಂಸ, ಮಾವಿನ ವ್ಯಾಪಾರದಲ್ಲಿ ಮುಸ್ಲಿಂ ವ್ಯಾಪಾರಿಗಳ ಬೇಧ, ಜಾತ್ರೆ, ಮಹೋತ್ಸವಗಳಲ್ಲಿ ವ್ಯಾಪಾರ ನಿಷೇಧ ಹೀಗೆ ಒಂದರ ಹಿಂದೆ ಒಂದು ಪ್ರೀ ಪ್ಲಾನ್ಡ್ ಯೋಜನೆಯಂತೆ ವಿವಾದಗಳು ಸೃಷ್ಟಿಯಾಗುತ್ತಲೇ ಇದೆ. ಇದಕ್ಕೆ ಸರಿಯಾಗಿ ಪ್ರಮುಖ ಸ್ಥಾನಗಳಲ್ಲಿರುವವರು ರಾಜಕೀಯ ಲಾಭಕ್ಕಾಗಿ ವಿವೇಚನಾರಹಿತ ಹೇಳಿಕೆಗಳನ್ನು ಕೊಟ್ಟು ಮತ್ತಷ್ಟು ತೊಂದರೆ ಸೃಷ್ಟಿಸುತ್ತಿದ್ದಾರೆ. ಈಗ ನಡೆಯುತ್ತಿರುವ ಈ ಭಿನ್ನಾಭಿಪ್ರಾಯಗಳ ಭಾಗವಾಗಿ ಈಗ ಮತ್ತೊಂದು ವಿವಾದ ಸೃಷ್ಟಿಸುವಂತಹ ಹೇಳಿಕೆಯೊಂದು ವೈರಲ್ ಆಗಿದೆ. ಸ್ವಾಮೀಜಿ ಒಬ್ಬರು ಮುಸ್ಲಿಂ ಮಹಿಳೆಯರ ಬಗ್ಗೆ ಬಹಿರಂಗವಾಗಿ ಕೊಟ್ಟಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada