ಕೆ.ಆರ್.ಪುರ: ಬಡ ಜನತೆಗೆ ವಾಸಿಸಲು ನೆತ್ತಿಗೊಂದು ಸೂರು ಕಲ್ಪಿಸುವಲ್ಲಿ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಕರ್ನಾಟಕ ರಿಪಬ್ಲಿಕ್ ಸೇನಾ ಕಾರ್ಯಕರ್ತರು ಇಲ್ಲಿನ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.ಮಹದೇವಪುರ ಕ್ಷೇತ್ರದ ಕಾಟಂನಲ್ಲೂರಿನಿಂದ ಕೆ.ಆರ್.ಪುರ ತಾಲ್ಲೂಕು ಕಛೇರಿಯವರಿಗೆ ಸುಮಾರು ಹನ್ನೊಂದು ಕಿಮೀ ದೂರ ನೂರಾರು ಬಡ ಜನರು ನಿವೇಶನ ಬೇಕು ಎಂದು ಆಗ್ರಹಿಸಿ ಪಾದಯಾತ್ರೆ ಮಾಡಿದರು.ಬಡಜನರಿಗೆ ನಿವೇಶನಕ್ಕೆ ನಿಗದಿ ಮಾಡಿರುವ ಜಾಗವನ್ನ ಅಧಿಕಾರಿಗಳು ರಾತ್ರೋರಾತ್ರಿ ಖಾಸಗಿ ಮತ್ತು ಬಂಡವಾಳಶಾಹಿ ಗಳಿಗೆ ಕಾತೆ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಮಹದೇವಪುರ ಹತ್ತಾರು ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಾ ಸರ್ಕಾರಿ ನಿವೇಶನಕ್ಕೆ ಸಾಕಷ್ಟು ಬಾರಿ ಅರ್ಜಿಗಳನ್ನ ಹಾಕಿದರೂ ಅಧಿಕಾರಿಗಳಿ ಬಡವರ ಬಗ್ಗೆ ಕಾಳಜಿ ವಹಿಸುತ್ತಿಲ್ಲ.ಸರ್ಕಾರಿ ಆಸ್ತಿಗಳನ್ನ ಉಳ್ಳವರು ಕಬ್ಜ ಮಾಡುತ್ತಿದ್ದಾರೆ ಅಧಿಕಾರಿಗಳು ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಸಂಘದ ರಾಜ್ಯಾದ್ಯಕ್ಷ ಜಿಗಣಿ ಶಂಕರ್ ನೆತ್ತಿಗೊಂದು ಸೂರಿಗಾಗಿ ಒತ್ತಾಯಿಸಿ ಕಾಟಂನಲ್ಲೂರು ಗೇಟ್ ನಿಂದ ತಾಲ್ಲೂಕು ಕಛೇರಿ ವರೆಗೆ 18ಕಿ.ಮೀಟರ್ ಕಾಲ್ನಡಿಗೆ ಜಾಥದ ನಡೆಸಿದ್ದೆವೆ, ಬಡವರಿಗೆ ಸೂರು ಒದಗಿಸುವ ಮೂಲಕ ಆಸರೆಯಾಗುವಂತೆ ಆಗ್ರಹಿಸಿದರು.
ಗ್ರಾಮ ನಿವಾಸಿಗಳು ಕಾಪಾಡಿ ಕೊಂಡು ಬಂದಿದ್ದ ಎಲ್ಲಾ ಸರ್ಕಾರಿ ಭೂಮಿಗಳನ್ನು ಸರ್ಕಾರಗಳು ಹಾಗೂ ಕಂದಾಯ ಅಧಿಕಾರಿಗಳು ಹೊರ ರಾಜ್ಯಗಳ ಜನತೆಗೆ ಮಾರಾಟ ಮಾಡಿ ಸ್ಥಳೀಯ ರೈತರನ್ನು , ಬಡವರನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಿದ್ದಾರೆಂದು ದೂರಿದರು.