ಐಎಎಸ್ ಟಾಪರ್ ಟಿನಾ ಈಗ ಎರಡನೇ ಮದುವೆಗೆ ಸಿದ್ದರಾಗಿದ್ದರಾ, ಐಎಎಸ್ ಅಧಿಕಾರಿ ಪ್ರದೀಪ್ ಗವಾಂಡೆ ಅವರ ಜೊತೆಗೆ 2ನೇ ಮದುವೆಯಾಗುತ್ತಿದ್ದಾರೆ. ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ ತಮ್ಮ ನಿಶ್ಚಿತಾರ್ಥದ ಫೋಟೊಗಳನ್ನ ಶೇರ್ ಮಾಡಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಾವಿ ಪತಿ ಪ್ರದೀಪ್ ಗಾವಂಡೆ ಅವರಿಗೂ ಇದು ಎರಡನೇ ಮದುವೆ. ಐಎಎಸ್ ಆಗುವ ಮೊದಲು ಅವರು ವೈದ್ಯರಾಗಿದ್ದರು ಎನ್ನಲಾಗಿದೆ. 2015 ರಲ್ಲಿ, ಟಿನಾ ದಾಬಿ ದಲಿತ ಸಮುದಾಯದಿಂದ ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಮೊದಲ ವ್ಯಕ್ತಿಯಾದರು. ಟೀನಾ ದಾಬಿ ಮತ್ತು ಅಥರ್ ಖಾನ್ ಇಬ್ಬರೂ ತರಬೇತಿ ಸಮಯದಲ್ಲಿ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. 2018 ರಲ್ಲಿ ಅವರಿಬ್ಬರ ವಿವಾಹವು ಬಹಳಷ್ಟು ಸುದ್ದಿ ಮಾಡಿತ್ತು. ಟಿನಾ 2020ರ ನವೆಂಬರ್ನಲ್ಲಿ ಮೊದಲ ಪತಿ ಅಮೀರ್ ಉಲ್ಶಫಿ ಖಾನ್ ಅವರಿಂದ ವಿಚ್ಚೇದನ ಪಡೆದಿದ್ದಾರೆ. ಮದುವೆಯಾಗಿ ಎರಡೇ ವರ್ಷಕ್ಕೆ ಈ ದಂಪತಿ ಬೇರೆಯಾಗಿದ್ದರು. ಪ್ರೇಮಿಗಳಾಗಿದ್ದ ಇಬ್ಬರು 2018ರಲ್ಲಿ ಮದುವೆಯಾಗಿದ್ದರು ಪರಸ್ಪರ ಒಪ್ಪಿಗೆಯ ಮೇರೆಗೆ ಜೈಪುರ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿ. ಅವರು ಜಮ್ಮು ಮತ್ತು ಕಾಶ್ಮೀರ ಕೇಡರ್ನೊಂದಿಗೆ ತಮ್ಮ ರಾಜ್ಯಕ್ಕೆ ಹೋದರು. ಟೀನಾ ದಾಬಿ ಮೂಲತಃ ದೆಹಲಿಯವರು. ಕಳೆದ ವರ್ಷ ಅವರ ಸಹೋದರಿ ರಿಯಾ ದಾಬಿ ಕೂಡ ಯುಪಿಎಸ್ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದರು. ಐಎಎಸ್ ಅಧಿಕಾರಿ ಪ್ರದೀಪ್ ಗವಾಂಡೆ ಅವರ ಜೊತೆಗೆ 2ನೇ ಮದುವೆಯಾಗುತ್ತಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada