ನಟ ಶಿವರಾಜ್ಕುಮಾರ್ ಬೆಂಗಳೂರಿನ ಆರ್ ಟಿ ನಗರದ ಸಿಎಂ ಬಸವರಾಜ್ ಬೊಮ್ಮಾಯಿಯವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ನಟ ಶಿವರಾಜ್ ಕುಮಾರ್ ರೊಂದಿಗೆ ಪತ್ನಿ ಗೀತಾ ಅವರು ಸಹ ಆಗಮಿಸಿದ್ದಾರೆ. ಜೇಮ್ಸ್ ಸಿನಿಮಾ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಕೂಡ ಸಿಎಂ ನಿವಾಸಕ್ಕೆ ಬಂದಿದ್ದು, ಸಿಎಂ ಜೊತೆ ಜೇಮ್ಸ್ ಚಿತ್ರದ ತೆರವಿಗೆ ಒತ್ತಾಯದ ಕುರಿತು ಚರ್ಚೆ ನಡೆಸಿದ್ದಾರೆ. ಮೊನ್ನೆ ಥಿಯೇಟರ್ಗಳಿಂದ ಜೇಮ್ಸ್ ಚಿತ್ರ ತೆಗೆಯುವಂತೆ ಒತ್ತಡ ಹಿನ್ನೆಲೆಯಲ್ಲಿ ನಿರ್ಮಾಪಕ ಕಿಶೋರ್ ಪತ್ತಿಕೊಂಡ ವಿಪಕ್ಷನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada