ಯಾವಾಗಲು ಸದಾ ಚಿರಯುವಕನಂತೆ ಕಾಣುವ ಶಿವಣ್ಣ. ಸದಾ ಲವಲವಿಕೆಯಿಂದಲೇ ಇರುತ್ತಾರೆ. 59ನೇ ವಯಸ್ಸಿನಲ್ಲೂ ಚಿರ ಯುವಕನಂತೆ ಇದ್ದಾರೆ ಶಿವರಾಜ್ಕುಮಾರ್, ಅವರ ಎನರ್ಜಿಗೆ ಅವರೇ ಸಾಟಿ.ಈ ವಯಸ್ಸಿನಲ್ಲೂ ಹೀರೋ ಪಾತ್ರಗಳನ್ನೇ ಮಾಡುತ್ತಿದ್ದಾರೆ ಅಂದರೆ ಅವರ ತಾಕತ್ತಿನ ಬಗ್ಗೆ ನೀವೆ ಯೋಚನೆ ಮಾಡಿ.
ಇತ್ತೀಚೆಗೆ ಸಿಗ್ನಲ್ನಲ್ಲಿ ಜನ ಸಾಮನ್ಯರನ್ನು ಆಪ್ತರಂತೆ ಶಿವಣ್ಣ ಮಾತನಾಡಿಸಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಮಕ್ಕಳ ಜೊತೆ ಪುಟ್ಟ ಮಗುವಿನಂತೆ ತೊಟ್ಟಿಲಲ್ಲಿ ಮಲಗಿ ಪೋಸ್ ಕೊಟ್ಟಿದ್ದಾರೆ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್. ಅಪ್ಪನಂತೆ ಮಕ್ಕಳು ಎಂಬುವುದಕ್ಕೆ ಡಾ.ರಾಜ್ಕುಮಾರ್ ಕುಟುಂಬವೇ ನಿರ್ದಶನ. ಶಿವಣ್ಣ ಕೇವಲ ನಟನೆಯಲ್ಲಷ್ಟೇ ಎಲ್ಲರ ಗಮನ ಸೆಳೆದಿಲ್ಲ. ಅವರ ಗುಣಗಳಿಂದ ಎಲ್ಲರ ಮನ ಗೆದ್ದಿದ್ದಾರೆ. ಕಂದಾಮ್ಮನಂತೆ ತೊಟ್ಟಿನಲ್ಲಿ ಮಲಗಿ ಪೋಸ್ ಕೊಟ್ಟಿರುವ ಶಿವಣ್ಣ ಚಿಕ್ಕ ಮಗುವಿನಂತೆ ಕಾಣುತ್ತಿದ್ದರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada