ಬಾಲಿವುಡ್ ನಟಿ ಸೋನಂ ಕಪೂರ್ ತಾವು ತಾಯಿಯಾಗುತ್ತಿರುವ ಶುಭ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ತಮ್ಮ ಪತಿ ಆನಂದ್ ಅಹುಜಾ ಜೊತೆಯಲ್ಲಿ ನಟಿ ಸೋನಂ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಸೋನಂ ಕಪೂರ್ರ ಬೇಬಿ ಬಂಪ್ ಮುದ್ದಾಗಿ ಕಾಣುತ್ತಿದೆ.ಈ ಫೋಟೋಗಳನ್ನು ಶೇರ್ ಮಾಡಿರುವ ಸೋನಂ ಕಪೂರ್, ನಿನ್ನನ್ನು ಅತ್ಯಂತ ಉತ್ತಮವಾಗಿ ಬೆಳೆಸಲು ನಾಲ್ಕು ಕೈಗಳಿವೆ. ಪ್ರತಿ ಹೆಜ್ಜೆಗೂ ನಿನಗಾಗಿ ಮಿಡಿಯುವ ಎರಡು ಹೃದಯಗಳು, ನಿನಗೆ ಪ್ರೀತಿ ಹಾಗೂ ಬೆಂಬಲವನ್ನು ನೀಡಲು ಒಂದು ಕುಟುಂಬವಿದೆ. ನಿನ್ನನ್ನು ಸ್ವಾಗತಿಸಲು ನಾವು ಕಾತುರದಿಂದ ಕಾಯುತ್ತಿದ್ದೇವೆ ಎಂದು ಶೀರ್ಷಿಕೆ ನೀಡಿದ್ದಾರೆ.
Next Post
ಉಪೇಂದ್ರ ಅಭಿನಯದ 'ಹೋಮ್ ಮಿನಿಸ್ಟರ್' ಚಿತ್ರದ ಆಡಿಯೋ ಲಾಂಚ್..!
Tue Mar 22 , 2022
ಬೆಂಗಳೂರಿನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಹೋಮ್ ಮಿನಿಸ್ಟರ್’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ರಾಜಜಾಜೇಶ್ವರಿನಗರ ವಿಧಾನ ಸಭಾಕ್ಷೇತ್ರದ ಶಾಸಕ, ಹಾಗೂ ಸಚಿವ ಮುನಿರತ್ನ ಭಾಗಿಯಾಗಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಗೋಲ್ಡನ್ ಸ್ಟಾರ್ ಗಣೇಶ್, ಪ್ರಜ್ವಲ್ ದೇವರಾಜ್, ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕರಾದ ಶರವಣ, ಶ್ರೀಮತಿ ಪ್ರಿಯಾಂಕಾ ಉಪೇಂದ್ರ, ಯುವನಟ ನಿರಂಜನ್ ಸುಧೀಂದ್ರ ಮತ್ತು ಚಿತ್ರತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

You May Like
-
10 months ago
“ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಎಂದ ದಿಗಂತ್
-
10 months ago
ರಣ್ ವೀರ್ ಸಿಂಗ್ ಜೊತೆಗೆ ಹೆಜ್ಜೆ ಹಾಕಿದ ಅನುರಾಗ್ ಠಾಕೂರ್..!
-
10 months ago
ಟೀಚರ್ಗೆ ಫಿಕ್ಸ್ ಆದ್ರ ಶಶಿಕುಮಾರ್ ಪುತ್ರ
-
10 months ago
ಸಂಚಾರಿ ವಿಜಯ್ ಅಭಿನಯದ “ತಲೆದಂಡ” ಏಪ್ರಿಲ್ ಒಂದರಂದು ತೆರೆಗೆ.
-
10 months ago
ವಿದೇಶದಲ್ಲಿ ಜೋರಾಗಿದೆ ಕೆಜಿಎಫ್ 2 ಹವಾ