ಸೀಕ್ರೆಟ್ ಬಿಚ್ಚಿಟ್ಟ ನಟಿ ಖುಷ್ಬೂ; ಸ್ಲಿಮ್ ಹಿಂದಿನ ಸ್ಟೋರಿ ಏನು ಗೊತ್ತಾ..?

ಖುಷ್ಬೂ ಅವರಿಗೆ ಈಗ ವಯಸ್ಸು 51. ಈ ವಯಸ್ಸಿನಲ್ಲೂ ಅವರು ಯುವತಿಯರನ್ನೂ ನಾಚಿಸುವಂತಹ ಫಿಟ್​ನೆಸ್​ ಕಾಯ್ದುಕೊಂಡಿದ್ದಾರೆ. ಚಿತ್ರರಂಗದಲ್ಲಿ ಆಗೊಂದು, ಈಗೊಂದು ಸಿನಿಮಾ ಮಾಡುವ ಅವರು ರಾಜಕೀಯದಲ್ಲಿ ಬ್ಯುಸಿ ಆಗಿದ್ದಾರೆ. ಕೆಲ ವರ್ಷಗಳ ಕಾಲ ಅವರು ಫಿಟ್​ನೆಸ್ ​ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.

ಆದರೆ, ಇತ್ತೀಚಿನ ವರ್ಷಗಳಲ್ಲಿ ಅವರು ಫಿಟ್​ನೆಸ್​ಗೆ ಆದ್ಯತೆ ನೀಡುತ್ತಿದ್ದಾರೆ. ಸಖತ್​ ಸ್ಲಿಮ್ ಆಗಿರೋ ಫೋಟೋ ಹಂಚಿಕೊಂಡು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಖುಷ್ಬೂ ಅವರಿಗೆ ಈ ವಯಸ್ಸಿನಲ್ಲಿ ಫಿಟ್​ನೆಸ್​ ಬಗ್ಗೆ ಇಷ್ಟೊಂದು ಆಸಕ್ತಿ ಬಂದಿದ್ದು ಏಕೆ? ಈ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಕುಟುಂಬದಲ್ಲಿ ಅವರಿಗೆ ಮುಜುಗರ ಎದುರಾಗಿತ್ತು. ಈ ಕಾರಣಕ್ಕೆ ಫಿಟ್​ ಆಗಲು ಪಣತೊಟ್ಟರು.

‘ನನ್ನ ಪತಿ ಸುಂದರ್ ಅವರು ಮೂರು ಸಿನಿಮಾಗಳಲ್ಲಿ ಪೊಲೀಸ್ ಪಾತ್ರ ಮಾಡಿದ್ದಾರೆ. ಹೀಗಾಗಿ, ಅವರು ಜಿಮ್​ನಲ್ಲಿ ಕಸರತ್ತು ನಡೆಸಿದ್ದರು. ನನ್ನ ಮಕ್ಕಳು ಕೂಡ ಅಷ್ಟೇ, ಅವರು ಫಿಟ್​ನೆಸ್​ಗೆ ಆದ್ಯತೆ ನೀಡುತ್ತಾರೆ. ನನ್ನ ಪತಿ, ಮಕ್ಕಳು ಮೂವರು ಎತ್ತರವಿದ್ದಾರೆ. ಅವರಿಗೆ ಹೋಲಿಸಿದರೆ ನಾನು ದಪ್ಪ ಮತ್ತು ಎತ್ತರ ಕಡಿಮೆ. ಇದು ನನಗೆ ಕೊಂಚ ಮುಜುಗರ ತಂದಿತ್ತು. ಹೀಗಾಗಿ, ನನಗೂ ಸ್ಲಿಮ್​ ಆಗಬೇಕು ಎಂದು ಅನಿಸಿತು. ನಾನು ಯೋಗ ಹಾಗೂ ವ್ಯಾಯಾಮ ಮಾಡೋಕೆ ಪ್ರಾರಂಭಿಸಿದೆ’ ಎಂದು ಸ್ಲಿಮ್​ ಆದ ಹಿಂದಿನ ಕಥೆಯನ್ನು ಅವರು ಹೇಳಿದ್ದಾರೆ.

‘ನಾನು ತಿನ್ನುವುದಕ್ಕೆ ಬ್ರೇಕ್​ ಹಾಕಿಲ್ಲ. ಐಸ್‌ಕ್ರೀಂ ಸೇವನೆ ಕಡಿಮೆ ಮಾಡಿದ್ದೇನೆ. ಮಟನ್ ಬಿರಿಯಾನಿ ತಿನ್ನೋದನ್ನು ನಿಲ್ಲಿಸಿಲ್ಲ. ಆಗೊಮ್ಮೆ, ಈಗೊಮ್ಮೆ ಏನನ್ನಾದರೂ ತಿನ್ನುತ್ತಲೇ ಇರುತ್ತೇನೆ. ನನಗೆ ಚಾಕೋಲೆಟ್​ ಎಂದರೆ ಇಷ್ಟವಿಲ್ಲ. ಆದರೆ, ಚಾಕೊಲೇಟ್​ನಿಂದ ಮಾಡಿದ ತಿನಿಸುಗಳನ್ನು ಇಷ್ಟಪಡುತ್ತೇನೆ’ ಎಂದು ಆಹಾರ ಕ್ರಮದ ಬಗ್ಗೆ ಹೇಳಿಕೊಂಡಿದ್ದಾರೆ ಅವರು.2018ರಲ್ಲಿ ತೆರೆಗೆ ಬಂದ ‘ಅಜ್ಞಾತವಾಸಿ’ ಸಿನಿಮಾದಲ್ಲಿ ಖುಷ್ಬೂ ನಟಿಸಿದ್ದರು.

ಒಂದು ದೊಡ್ಡ ಬ್ರೇಕ್​ ಬಳಿಕ ಅವರು ಒಪ್ಪಿಕೊಂಡ ಸಿನಿಮಾ ಇದಾಗಿತ್ತು. ಆ ಬಳಿಕ ಅವರಿಗೆ ಸಾಕಷ್ಟು ಆಫರ್​ಗಳು ಬರೋಕೆ ಆರಂಭವಾದವು. ಒಂದು ಸಿನಿಮಾ ಬಿಟ್ಟು ಅವರು ಬೇರೆ ಯಾವುದನ್ನೂ ಒಪ್ಪಿಕೊಂಡಿಲ್ಲ. ‘ಅಜ್ಞಾತವಾಸಿ ಬಳಿಕ ಒಂದಷ್ಟು ಆಫರ್‌ಗಳು ಬಂದವು. ಕಂಬ್ಯಾಕ್​ ಮಾಡಿದ ನಂತರದಲ್ಲಿ ಆಸಕ್ತಿದಾಯಕ ಸಿನಿಮಾ ಮಾಡಬೇಕು ಎಂಬುದು ನನ್ನ ಉದ್ದೇಶ. ಕೊನೆಗೂ ‘ಆಡವಾಳ್ಳು ಮೀಕು ಜೋಹಾರ್ಲು’ ಸಿನಿಮಾ ಒಪ್ಪಿಕೊಂಡೆ. ನನ್ನ ಪಾತ್ರಕ್ಕೂ, ನನಗೂ ಕೆಲವು ಸಾಮ್ಯತೆ ಇದ್ದಿದ್ದರಿಂದ ಈ ಸಿನಿಮಾ ಇಷ್ಟಪಟ್ಟು ಮಾಡಿದೆ’ ಎಂದಿದ್ದಾರೆ ಖುಷ್ಬೂ.

Leave a Reply

Your email address will not be published. Required fields are marked *

Next Post

ಕಾಶ್ಮೀರ ಬಗ್ಗೆ ಪ್ರತಿಕ್ರಿಯಿಸಿದ ಚೀನಾಕ್ಕೆ ಎಚ್ಚರಿಸಿದ ಭಾರತ.

Thu Mar 24 , 2022
  ಜಮ್ಮು ಕಾಶ್ಮೀರ ಕುರಿತ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಅವರ ಹೇಳಿಕೆಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನಮ್ಮ ಆಂತರಿಕ ವಿಚಾರಗಳ ಬಗ್ಗೆ ಇತರೆ ದೇಶಗಳು ಪ್ರತಿಕ್ರಿಯಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಚೀನಾಕ್ಕೆ ಸ್ಪಷ್ಟಮಾತುಗಳಲ್ಲಿ ತಿರುಗೇಟು ನೀಡಿದೆ. ಪಾಕಿಸ್ತಾನದಲ್ಲಿ ಆಯೋಜಿಸಲಾದ ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋಆಪರೇಷನ್ (ಒಐಸಿ) ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ್ದ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ಕಾಶ್ಮೀರ ಸಮಸ್ಯೆಯ ಬಗ್ಗೆ ನಮ್ಮ ಇಸ್ಲಾಮಿಕ್ ಸ್ನೇಹಿತರ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: