ಗಾರ್ಡನ್ ಸಿಟಿಯ ಮರಗಳನ್ನೆಲ್ಲಾ ನೇಣು ಹಾಕಿದ ಕೇಬಲ್‌ ಮಾಫಿಯಾ!

ಇದು ಬೆಂಗಳೂರಿಗರು ಸೀರಿಯಸ್ಸಾಗಿ ಯೋಚಿಸಬೇಕಾದ ವಿಷ್ಯಾ. ಪರಿಸರ ಪ್ರೇಮಿಗಳು ತಲೆ ಕೆಡಿಸಿಕೊಳ್ಳಬೇಕಾದ ವಿಷ್ಯಾ. ಅರಣ್ಯ ಇಲಾಖೆಯವರು ಎಚ್ಚೆತ್ತುಕೊಳ್ಳಬೇಕಾದ ವಿಷ್ಯಾ, ಬಿಬಿಎಂಪಿ ಅಧಿಕಾರಿಗಳ ಜಾಣ ಕುರುಡು ಪ್ರದರ್ಶನ ನಿಲ್ಲಿಸಬೇಕಾದ ವಿಷ್ಯಾ. ಮನುಷ್ಯರ ಜೊತೆ ಮರಗಳ ಆಯಸ್ಸು ಕಮ್ಮಿ ಆಗ್ತಿದೆ. ಊರ ತುಂಬಾ ಹರಡಿಕೊಂಡಿರೋ ಕೇಬಲ್ ಹಾವಳಿಗೆ ಕಡಿವಾಣ ಹಾಕಬೇಕಿದೆ.

ಬೆಂಗಳೂರನ್ನು ಗಾರ್ಡನ್ ಸಿಟಿ ಅಂತ ಕರೆಯೋ ಬದಲು ಕೇಬಲ್ ಸಿಟಿ ಅಂತ ಕರೆಯೋದೇ ಸೂಕ್ತವೇನೋ? ಕಣ್ಣು ಹಾಯಿಸಿದಲ್ಲೆಲ್ಲಾ ಕೇಬಲ್‌ಗಳದ್ದೇ ಹಾವಳಿ. ಊರ ತುಂಬಾ ನೇತಾಡುವ, ತೇಲಾಡುವ, ಬಿದ್ದು ಹೊರಳಾಡುವ ಕೇಬಲ್ ಆವಾಂತರಗಳದ್ದೇ ಕಾರುಬಾರು.

ಎಲ್ಲಾ ಕಂಪನಿಗಳ ಓ.ಎಫ್.ಸಿ ಕೇಬಲ್ ಗಳು ಮರಗಳಿಗೆ ಹೇಗೆ ಸುತ್ತಿ ಬಿಟ್ಟಿದ್ದಾರೆ. ಜಿಯೋ, ಎಸಿಟಿ, ಏರ್ ಟೆಲ್, ಹಾಥ್ ವೇ, ಹೀಗೆ ಎಲ್ಲಾ ಕಂಪನಿಗಳ ಕೇಬಲ್ ಗಳು ನಡು ಬೀದಿಯಲ್ಲಿ ಹರಿದಾಡುತ್ತಿವೆ. ಹಿಂಗೇ ಕೇಬಲ್ ಸುತ್ತಿ ನೇಣು ಹಾಕಿ ಮರಗಳ ಆಯಸ್ಸನ್ನೇ ನುಂಗಿ ಬಿಟ್ಟಿದ್ದಾರೆ. ಇನ್ನು ಇಲ್ಲಿ ವಾಸವಿದ್ದ ಹಕ್ಕಿಗಳ ಸಂತತಿಯೂ ರೇಡಿಯೇಷನ್ನಿಗೆ ಬಲಿಯಾಗಿ ಬಿಟ್ಟಿವೆ. ಇದರ ಬಗ್ಗೆ ಗಮನ ಹರಿಸಬೇಕಾದ ಬಿಬಿಎಂಪಿ ಅರಣ್ಯ ವಿಭಾಗ ಕಣ್ಣಿಗೆ ಅದೇನು ಇಟ್ಕೊಂಡು ಕೂತಿದ್ಯೋ ಆ ಅಣ್ಣಮ್ಮ ತಾಯಿಯೇ ಹೇಳ್ಬೇಕು.

ತಲೆ ಮೇಲೆ ನೇತಾಡುವ ಕೇಬಲ್ ಕಥೆ ಒಂದು ಕಡೆಯಾದ್ರೆ, ಕಂಬಗಳಲ್ಲಿ ನೇತಾಡುವ ಕೇಬಲ್ಗಳದ್ದು ಇನ್ನೊಂದು ಕಥೆ. ಅಸಲಿ ವಿಷ್ಯಾ ಏನಂದ್ರೆ ಹೀಗೇ ಕೇಬಲ್ ಎಳೆಯೋದು ಮತ್ತು ಕಂಬಗಳನ್ನು ನೆಡೋದು ಎರಡೂ ಅನಧೀಕೃತ. ಆದ್ರೆ ಈ ರೂಲ್ಸ್ ಗಳಲ್ಲಾ ಕೇವಲ ಕಡತಕ್ಕೆ ಸೀಮಿತ ಅಷ್ಟೇ. ಓ.ಎಫ್.ಸಿ ಕೇಬಲ್‌ಗಳನ್ನು ಎಲ್ಲೆಂದರೆ ಅಲ್ಲಿ, ಹೇಗೆಂದರೆ ಹಾಗೆ ಎಳೆದು ಬಿಸಾಕಿರುತ್ತಾರೆ. ಇದೊಂದು ದೊಡ್ಡ ಜಾಲ. ಯಾರ ಕಂಟ್ರೋಲಿಗೂ ಸಿಗ್ತಿಲ್ಲ. ಸಿಕ್ಕ ಸಿಕ್ಕ ಕಡೆ ಹಳ್ಳ ತೋಡ್ತಾರೆ. ರಸ್ತೆ ಕಿತ್ತಾಕ್ತಾರೆ, ಇವರಿಗೆ ಯಾವುದೇ ಅಂಕೆ ಅಂಕುಶಗಳಿಲ್ಲ. ಯಾಕಂದ್ರೆ ಈ ಕೇಬಲ್ ನೆಟ್ ವರ್ಕ್ ಕಂಪನಿಗಳು ಸರ್ಕಾರಗಳನ್ನೇ ನಿಯಂತ್ರಿಸುತ್ತಿರೋದು ದುರಂತ. ಯಾವ ಸರ್ಕಾರ ಬಂದ್ರು, ಯಾವ ಅಧಿಕಾರಿ ಬಂದ್ರು ತೀರ್ಥ ಪ್ರಸಾದ ಹಂಚಿಕೆ ನಿರಂತರ. ಹಾಗಿರುವಾಗ ನಿಯಂತ್ರಣ ಇನ್ನೆಲ್ಲಿಂದ ಆಗುತ್ತೆ.

ಸ್ಮಾರ್ಟ್ ಸಿಟಿ ಯೋಜನೆಡಿಯಲ್ಲಿ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡ್ತಾ ಇದ್ದಾರೆ. ಈ ಓ.ಎಫ್.ಸಿ ಕೇಬಲ್ ಸಂಪರ್ಕಗಳನ್ನು ಭೂಮಿ ಒಳಗಡೆ ಅಳವಡಿಸಲು ನಿಯಮಗಳನ್ನು ರೂಪಿಸಿದ್ದಾರೆ. ಯಾವದೇ ಕಾರಣಕ್ಕೂ ಹೀಗೇ ಬೀದಿ ಬೀದಿಲ್ಲಿ ಕೇಬಲ್ ವೈರ್ ಗಳು ನೇತಾಡಬಾರದು ಅಂತ ಬಿಬಿಎಂಪಿ ನಿಯಮಗಳಿವೆ. ಆದ್ರೆ ಈ ಯಾವ ನಿಯಮಗಳಿಗೂ ಕಿಮ್ಮತ್ತಿಲ್ಲ. ಈ ಕೇಬಲ್ ಗಳಳನನನಬರೀ ಮರಗಳಿಗೆ ಮಾತ್ರವಲ್ಲ ಬೆಸ್ಕಾಂ ವಿದ್ಯುತ್ ಕಂಬಗಳ ಮೇಲೂ ಎಳೆದು ಬಿಟ್ಟಿದ್ದಾರೆ ನೋಡಿ. ಸ್ವಲ್ಪ ಯಾಮಾರಿದ್ರೆ ಮನೆಗಳಿಗೆ ನೆಟ್ ಜೊತೆ ಕರೆಂಟೂ ಹೋಗುತ್ತೆ. ಮುಟ್ಟಿದ್ರೆ ಪ್ರಾಣವೂ ಹಾರಿ ಹೋಗುತ್ತೆ. ಇದರ ಜವಾಬ್ದಾರಿ ಹೋರೋರು ಯಾರು.

ಇಂಥ ಅನಧೀಕೃತ ಓ.ಎಫ್.ಸಿ ಕೇಬಲ್ ಹಾವಳಿಯನ್ನು ನಿಯಂತ್ರಿಸಲು ಬಿಬಿಎಂಪಿಯಲ್ಲಿ ಒಂದು ಪ್ರತ್ಯೇಕ ಓ.ಎಫ್,ಸಿ ಸೆಲ್ ಇದೆ. ಆದ್ರೆ ಇವ್ರು ಕಂಪನಿಗಳ ಜೊತೆ, ಗುತ್ತಿಗೆದಾರರ ಜೊತೆ ಬೈಟೂ ಕಾಫಿ ಶೇರ್ ಮಾಡ್ಕೊಂಡು ಅರಾಮಾಗಿ ಇದ್ದು ಬಿಟ್ಟಿದ್ದಾರೆ. ಬೆಂಗಳೂರಿನ ಪ್ರತಿ ರಸ್ತೆ, ಪ್ರತಿ ಗಲಿಯಲ್ಲಿ ಬೇತಾಳಗಳ ಕರುಳಿನಂತೆ ನೇತಾಡ್ತಿರೋ ಈ ಕೇಬಲ್‌ಗಳು ಮಾತ್ರ ಇವರ ಕಣ್ಣಿಗೆ ಬೀಳೋದಿಲ್ಲ. ಕಣ್ಣ ಮುಂದೆ ಕಾಣೋ ಈ ಹಾವಳಿಗೆ ಇನ್ನೆಂಥಾ ಸಾಕ್ಷö್ಯ ಬೇಕು ಇವರಿಗೆ. ನಾವೇ ಹೋಗ ಇದರ ಬಗ್ಗೆ ಕ್ರಮ ಜರುಗಿಸ್ರಪ್ಪ ಅಂದ್ರೆ, ಅದೇ ದಿವ್ಯ ಮೌನ. ಇಂಥ ಸಂತೋಷಕ್ಕೆ ಅದಕ್ಕೆ ಅಂತ ಒಂದು ಸೆಲ್ ಯಾಕೆ ಬೇಕು? ಸುಮ್ಮನೆ ಇಲ್ಲಿರೋ ನಿರುಪಯುಕ್ತ ಆಕೃತಿಗಳಿಗೆಲ್ಲಾ ನಮ್ಮ ತೆರಿಗೆ ಹಣ ಯಾಕೆ ವ್ಯರ್ಥ ಮಾಡಬೇಕು ಅನ್ನೋದು ಸಾರ್ವಜನಿಕರ ಪ್ರಶ್ನೆ.

ಇನ್ನು ಬಿಬಿಎಂಪಿ ವಾರ್ಡ್ಗಳಲ್ಲಿರೋ ಇಇ, ಎಇಇ, ಎಇ ಗಳಿಗೆ ಇಂಥ ಅಧ್ವಾನಗಳಿಗೆ ಮುಕ್ತಿ ಕೊಡಿ ಅಂತ ಯಾರಾದ್ರು ದೂರು ಕೊಟ್ರೆ, ಫುಲ್ ಖುಷಿ. ಹಾಗಂತ ಕ್ರಮ ಜರುಗಿಸಿ ಬಿಡ್ತಾರೆ ಅಂದ್ಕೋಬೇಡಿ. ಇದೇ ದೂರನ್ನು ಬಂಡವಾಳ ಮಾಡ್ಕೊಂಡು, ಗುತ್ತಿಗೆದಾರರಿಂದ ವಸೂಲಿಗೆ ಇಳಿದುಬಿಡ್ತಾರೆ. ಫುಲ್ ಊಟವಾದ ಮೇಲೆ ದೂರುದಾರರ ದೂರುಗಳಿಗೆ ತಿಪ್ಪೆ ಸಾರಿಸಿಬಿಡ್ತಾರೆ. ಯಾರಾದ್ರೂ ಹುಚ್ಚು ಹೋರಾಟಗಾರರು, ಬೆನ್ನು ಬಿದ್ದು ಕ್ರಮ ಜರುಗಿಲೇ ಬೇಕೆಂದು ಪಟ್ಟು ಹಿಡಿದ್ರೆ, ಅಲ್ಲಿ ಇಲ್ಲಿ ಅಂತ ಓಡಾಡಿಸಿ ಸುಸ್ತೆಬ್ಬಿಸಿ ಬಿಡ್ತಾರೆ. ಸಮಾಜ ಸರಿ ಮಾಡಬೇಕು ಅನ್ನೋ ಕನಸಿರೋನಿಗೂ ಸಾಕಪ್ಪಾ ಈ ಸಮಾಜ ತಿದ್ದೋ ಕೆಲಸ ಅನ್ನಿಸಿ ಬಿಡ್ತಾರೆ.

ಈ ಅಧಿಕಾರಿಗಳಿಗೆ ಸರಿಯಾಗಿ ಬುದ್ದಿ ಕಲಿಸಲೇ ಬೇಕಾದ ಅನಿವಾರ್ಯತೆ ಇದೆ. ಇಂಥ ಅಧ್ವಾನಗಳು ಛೀಫ್ ಇಂಜಿನಿರ‍್ರೋ, ಇಲ್ಲಾ ಜಾಯಿಂಟ್ ಕಮಿಷನರ್ ಗಮನಕ್ಕೆ ರ‍್ತಾ ಇಲ್ವಾ ಅನ್ನ  ಅನುಮಾನ. ಬಂದಿಲ್ಲ ಅಂದ್ರೆ ನಂಬೋದು ತುಂಬಾ ಕಷ್ಟ. ಇದು ತುಂಬಾ ಗಂಭೀರ ವಿಷಯ ಅನ್ನೋದು ಬಿಬಿಎಂಪಿ ಕಮಿಷನರ್ ಸಾಹೇಬ್ರೀಗೂ ಅರ್ಥವಾಗ್ತಿಲ್ವಾ ಅನ್ನೋದೇ ದುರಂತ. ಈ ಓ.ಎಫ್.ಸಿ ಕೇಬಲ್ ವಿಚಾರದಲ್ಲಿ ಅಧಿಕಾರಿಗಳು ಉಢಾಫೆ ಮಾಡಿದ್ರೆ, ಬೇಜವಾಬ್ದಾರಿಯಂದ ಕೆಲಸ ಮಾಡಿದ್ರೆ ತಕ್ಷಣ ಕ್ರಮ ಜರುಗಿಸದಿದ್ರೆ, ಈ ಅಧ್ವಾನಗಳ ಸಂಪೂರ್ಣ ಹೊಣೆ ಕಮಿಷನರ್ ಸಾಹೇಬ್ರ ಹೆಗಲಿಗೆ ಹೊರೆಯಾಗೋದು ಗ್ಯಾರಂಟಿ.

ಇದು ನಿಜಕ್ಕೂ ತೀರಾ ಗಂಭೀರವಾದ ಇಷ್ಯೂ. ಈ ಓ.ಎಫ್.ಸಿ ಕೇಬಲ್ ಹಾವಳಿಗೆ ಬ್ರೇಕ್ ಹಾಕದೇ ಇದ್ರೆ ಬೆಂಗಳೂರು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈ ಕೇಬಲ ಮಾಫಿಯಾವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲೇ ಬೇಕಾದ ಅನಿವಾರ್ಯತೆ ಇದೆ.

 

 

 

Leave a Reply

Your email address will not be published. Required fields are marked *

Next Post

ವೈಕುಂಠ ಏಕಾದಶಿ ವಿಷ್ಣುವನ್ನು ಪೂಜಿಸುವ ಮಹತ್ವದ ದಿನ

Mon Jan 2 , 2023
ವೈಕುಂಠ ಏಕಾದಶಿ  ಹಿಂದೂಗಳಿಗೆ, ವಿಷ್ಣುವಿನ ಭಕ್ತರಿಗೆ ದೊಡ್ಡ ಹಬ್ಬವಾಗಿದೆ. ಇಂದು 2023ರ 2ನೇ ದಿನ ವೈಕುಂಠ ಏಕಾದಶಿ ಹೊಸ ವರ್ಷದ ಶುಭ ಆರಂಭ ಎನ್ನುವಂತಿದೆ. ಇಡೀ ದೇಶದಾದ್ಯಂತ ವಿಷ್ಣುವಿನ ಆರಾಧಕರು ಉಪವಾಸ, ವ್ರತಗಳೊಂದಿಗೆ ವಿಷ್ಣುವನ್ನು ಶ್ರದ್ಧಾಭಕ್ತಿಯಿಂದ ಆರಾಧಿಸುತ್ತಾರೆ.   ಪ್ರತಿ ವರ್ಷವೂ ವೈಕುಂಠ ಏಕಾದಶಿ  ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಬರುತ್ತದೆ ಮತ್ತು ಇದನ್ನು ಮುಕ್ಕೋಟಿ ಏಕಾದಶಿ ಎಂದೂ ಕರೆಯುತ್ತಾರೆ. ಏಕಾದಶಿ ಅಂದರೆ ಹನ್ನೊಂದು ಎಂಬ ಅರ್ಥವಿದೆ. ಪ್ರತಿ ತಿಂಗಳಲ್ಲಿ 2 […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: