ಟಾಲಿವುಡ್, ಮಾಲಿವುಡ್ ಸಿನಿಮಾಗಳಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದ ಸಾಯಿ ಪಲ್ಲವಿ ತಮ್ಮ ಪ್ರೌಢ ಪ್ರತಿಮೆಯಿಂದ ಸಿನಿರಸಿಕರನ್ನು ರಂಜಿಸುತ್ತಾ ಬಂದಿದ್ದಾರೆ. ತಮ್ಮ ನಟನೆ ಜೊತೆಗೆ ಸೂಪರ್ ಡ್ಯಾನ್ಸರ್ ಆಗಿರುವ ಈ ನಟಿ ವಿಭಿನ್ನ ನಟನಾ ಕೌಶಲ್ಯದಿಂದ ತಮ್ಮದೇ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಈ ಸಿಂಪಲ್ ಬ್ಯೂಟಿಗೆ ಚಂದನವನದಲ್ಲಿಯೂ ಅಭಿಮಾನಿಗಳಿದ್ದಾರೆ. ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಈ ನಟಿ ಸಿನಿಜರ್ನಿ ಮುಗಿಸುತ್ತಾರೆ ಎಂಬ ಗಾಸಿಪ್ ಸಿನಿಅಂಗಳದಲ್ಲಿ ಕೇಳಿಬರುತ್ತಿದೆ.
ನಟರನ್ನು ಮೀರಿಸುವಂತಹ ಪ್ರತಿಭೆ ಇರುವ ಪಲ್ಲವಿ ‘ಪ್ರೇಮಂ’ ಸಿನಿಮಾ ಮೂಲಕ ಬಣ್ಣದಲೋಕಕ್ಕೆ ಕಾಲಿಟ್ಟರು. ಪಾತ್ರಗಳ ಆಯ್ಕೆಯಲ್ಲಿ ಹೆಚ್ಚು ಯೋಚನೆ ಮಾಡುವ ಈ ನಟಿ, ತಮ್ಮ ಪಾತ್ರಕ್ಕೆ ಇರುವ ಮಹತ್ವದ ಬಗ್ಗೆ ಚರ್ಚೆ ಮಾಡಿ ನಂತರ ಸಿನಿಮಾವನ್ನು ಮಾಡುತ್ತಾರೆ. ಅಲ್ಲದೇ ರಶ್ಮಿಕಾ ಮಂದಣ್ಣ ಮತ್ತು ಶರ್ವಾನಂದ್ ಅಭಿನಯದ ‘ಆಡವಾಳ್ಳು ಮೀಕು ಜೋಹಾರ್ಲು’ ಚಿತ್ರದ ಕಾರ್ಯಕ್ರಮದಲ್ಲಿ ಈ ನಟಿ ಕಾಣಿಸಿಕೊಂಡಿದ್ದರು. ಈ ಇವೆಂಟ್ನಲ್ಲಿ ಪಲ್ಲವಿಗೆ ಎಷ್ಟೂ ಅಭಿಮಾನಿಗಳು ಇದ್ದಾರೆ ಎಂಬುದನ್ನು ಅವರು ಕಿರುಚುವ ಶಬ್ದದಲ್ಲಿ ತಿಳಿದುಕೊಳ್ಳಬಹುದಿತ್ತು. ಅವಕಾಶಗಳಿದ್ದು ಏಕೆ ಈ ನಟಿ ಸಿನಿಜರ್ನಿ ಮುಗಿಸುತ್ತಿದ್ದಾರೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ.
ಕೊನೆದಾಗಿ ಸಾಯಿ ಪಲ್ಲವಿ ‘ಶ್ಯಾಮ್ ಸಿಂಗ ರಾಯ್’ ಸಿನಿಮಾ ಮೂಲಕ ಸಿನಿರಸಿಕರನ್ನು ರಂಜಿಸಿದ್ದರು. ಈ ಸಿನಿಮಾದಲ್ಲಿಯೂ ಡ್ಯಾನ್ಸ್ಗೆ ಹೆಚ್ಚು ಪ್ರಾಮುಖ್ಯತೆ ಇರುವಂತಹ ಪಾತ್ರದಲ್ಲಿ ನಟಿಸಿದ್ದು, ದೇವದಾಸಿಯರ ಕಷ್ಟಗಳ ಬಗ್ಗೆ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಈ ಸಿನಿಮಾ ಯಶಸ್ವಿನ ನಂತರವು ಈ ನಟಿ ಯಾವುದೇ ಮಲಯಾಳಂ ಮತ್ತು ತೆಲುಗು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬ ಸುದ್ದಿ ಚಿತ್ರರಂಗದ ತುಂಬಾ ಹಬ್ಬುತ್ತಿದೆ.ಪಲ್ಲವಿ ‘ಶ್ಯಾಮ್ ಸಿಂಗ ರಾಯ್’ ನಂತರ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳದೆ ಇರುವುದು ಎಲ್ಲರ ಅನುಮಾನಕ್ಕೆ ಸಾಕ್ಷಿಯಾಗುತ್ತಿದೆ.
ಒಂದು ವೇಳೆ ಅವರು ಸಿನಿರಂಗದಿಂದ ಹೋಗಲು ಯೋಚನೆ ಮಾಡುತ್ತಿದ್ದರಾ ಎಂದು ಎಲ್ಲಕಡೆ ಗಾಸಿಪ್ ಆಗುತ್ತಿದೆ. ಆದರೆ ಈ ಕುರಿತು ಪಲ್ಲವಿ ಮಾತ್ರ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಕೊಟ್ಟಿಲ್ಲ. ಒಂದು ವೇಳೆ ಇದು ನಿಜವಾದರೆ ಅಭಿಮಾನಿಗಳಿಗೆ ಬೇಸರವಾ ಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಈ ನಟಿ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳು ತ್ತಿಲ್ಲ. ಬಂದ ಪ್ರಾಜೆಕ್ಟ್ ಗಳನ್ನು ತಿರಸ್ಕರಿಸುತ್ತಾ ಹೋಗುತ್ತಿದ್ದಾರೆ. ಅದಕ್ಕೆ ಅವರು ಸಿನಿಮಾಲೋಕವನ್ನೆ ಬಿಡುತ್ತಾರೆಂಬ ಪಿಸು ಪಿಸು ಕೇಳಿಬರುತ್ತಿದೆ.