ಇಂಧನ ಬೆಲೆಗಳು ದಿನೇ ದಿನೇ ಗಗನಕ್ಕೆ ಏರಿಕೆಯಾಗುತ್ತಿರುವ ಈ ಸಮಯದಲ್ಲಿ ಇಬ್ಬರು ಮಲಯಾಳಿ ಉದ್ಯಮಿಗಳು ಪೆಟ್ರೋಲ್, ಡಿಸೇಲ್ ರಹಿತ ವಾಹನವೊಂದನ್ನು ಅನ್ವೇಷಿಸಿದ್ದಾರೆ.
ಪದ್ಮಜಯನ್ ಮತ್ತು ಐವಿನ್ ಅವರ ‘ಎಟರ್ನಿಯಮ್ ಲೋಕೋಮೋಷನ್ & ನ್ಯಾವಿಗೇಷನ್ ಪ್ರೈವೇಟ್ ಲಿಮಿಟೆಡ್’ ಎಂಬ ಹೆಸರಿನ ಸ್ಟಾರ್ಟ್ ಅಪ್ ಕೇರಳದ ತಿರುವನಂತಪುರಂನಲ್ಲಿದೆ. ಇಲ್ಲಿ ಅವರು ಒಂದು ವಾರದ ಹಿಂದೆ ವಾಹನದ ಮಾದರಿಯನ್ನು ಪ್ರಾರಂಭಿಸಿದರು. ಇಬ್ಬರು ಅವರ ಕೆಲಸದ ಕ್ಷೇತ್ರದ ಬಗ್ಗೆ ಆಶಾವಾದಿಗಳಾಗಿದ್ದಾರೆ ಮತ್ತು ಸರ್ಕಾರದ ನೀತಿಗಳು ಹಾಗೂ ಹೆಚ್ಚುತ್ತಿರುವ ಇಂಧನ ಬೆಲೆಗಳಿಂದಾಗಿ ಸೌರಶಕ್ತಿಯಲ್ಲಿ ಚಲಿಸುವ ಇ-ಆಟೋವನ್ನು ತಯಾರಿಸಲು ಪ್ರೇರಣೆಯಾಯಿತು ಎನ್ನತ್ತಾರೆ. ಪರಿಸರ ಸ್ನೇಹಿಯಾಗಿರುವ ಇ-ರಿಕ್ಷಾವು ಹೆಚ್ಚು ಹೆಚ್ಚು ಪ್ರಯಾಣಿಕರನ್ನು ಬ್ಯಾಟರಿ ಚಾಲಿತ ವಾಹನಗಳಿಗೆ ಬದಲಾಯಿಸಲು ಪ್ರೋತ್ಸಾಹಿಸುತ್ತಿದೆ.
ಅರೋಮಲ್(33), ಕೋಯಿಕ್ಕೋಡ್ನ ಸ್ಥಳೀಯರಾಗಿದ್ದು, ಅವರ ಐಟಿ ಕಂಪನಿಯು ಇತ್ತೀಚೆಗೆ ಯುಕೆಯ ಕೇಂಬ್ರಿಡ್ಜ್ ಕ್ಲೀನ್ಟೆಕ್ಗಾಗಿ ಮೊದಲ ರೀತಿಯ ವರ್ಚುವಲ್ ಮ್ಯಾಚ್-ಅಪ್ ಕನ್ವೆನ್ಷನ್ ಪ್ಲಾಟ್ಫಾರ್ಮ್ ಅನ್ನು ಅಭಿವೃದ್ಧಿಪಡಿಸಿದೆ. ಕೊಲ್ಲಂನ ಐವಿನ್ ಗ್ಯಾನ್ಸಿಯಸ್ (41) ತನ್ನ ಉದ್ಯಮ ಹಾದಿಯಲ್ಲಿ ಯಶಸ್ಸು ಮತ್ತು ವೈಫಲ್ಯಗಳನ್ನು ಅನುಭವಿಸಿದ ಅನುಭವಿ ಉದ್ಯಮಿಯಾಗಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada