ನಟಿ ಸೋನಂ ಕಪೂರ್ ಮತ್ತು ಆನಂದ್ ಅಹುಜಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಟಿ ಸೋನಂ ಕಪೂರ್ ಗರ್ಭಿಣಿಯಾಗಿದ್ದಾರೆ. ಈ ವಿಚಾರವನ್ನು ವಿಶೇಷ ಫೋಟೋದೊಂದಿಗೆ ನಟಿ ಸೋನಂ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇದೀಗ ಸೋನಮ್ ಕಪೂರ್ ಹೊಸ ಫೋಟೋಶೂಟ್ ಮಾಡಿಸಿದಿದ್ದಾರೆ. ಬಿಳಿ ಸೀರೆ ಉಟ್ಟು ಥೇಟ್ ಮಹರಾಣಿಯಂತೆ ಕಂಗೊಳಿಸಿದ್ದಾರೆ ಸೋನಂ ಕಪೂರ್ ತನ್ನ ಸ್ನೇಹಿತ ಮತ್ತು ಫ್ಯಾಷನ್ ಡಿಸೈನರ್ ಅಬು ಜಾನಿ ಅವರ ಹುಟ್ಟುಹಬ್ಬದಂದು ಈ ಫೋಟೋ ಹಂಚಿಕೊಂಡಿದ್ದಾರೆ.(ಕೃಪೆ-ಸೋನಮ್ ಕಪೂರ್ ಇನ್ಸ್ಟಾಗ್ರಾಂ)
ಕಳೆದ ರಾತ್ರಿ ಅಬು ಜಾನಿ ಹುಟ್ಟುಹಬ್ಬಕ್ಕೆ ಅಬು ಜಾನಿ ಡಿಸೈನ್ ಮಾಡಿರುವ ಉಡುಪು ಧರಿಸಿರುವೆ. ನನ್ನ ಸಹೋದರಿ ರಿಯಾ ಕಪೂರ್ ಸ್ಟೈಲ್ ಮಾಡಿಸಿರುವುದು ಎಂದು ಸೋನಂ ಬರೆದುಕೊಂಡಿದ್ದಾರೆ.
ಸೋನಮ್ ಕಪೂರ್ ಅವರ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಸೋನಮ್ ಕಪೂರ್ರ ಬೇಬಿ ಬಂಪ್ ಫೋಟೋಶೂಟ್ ಬಗ್ಗೆ ಚಿತ್ರ, ವಿಚಿತ್ರ ಕಮೆಂಟ್ ಮಾಡುತ್ತಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada