ಹಸುಗೂಸು ಬಿಟ್ಟು ಪರೀಕ್ಷೆ ಬರೆದ ಬಾಣಂತಿ…!

ತಾಳಿಕೋಟೆ ತಾಲೂಕು ಕೊಡಗಾನೂರ ಗ್ರಾಮದ ತಸ್ಲೀಮಾ ಮಕಾಂದಾರ್ ಎಂಬ ಮಹಿಳೆ 4 ತಿಂಗಳ ಹಸುಗೂಸಿನೊಂದಿಗೆ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರವೊಂದಕ್ಕೆ ಆಗಮಿಸಿ ಪರೀಕ್ಷೆ ಬರೆದಿದ್ದಾರೆ. ತಸ್ಲೀಮಾ ಖಾಸಗಿಯಾಗಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಹಿಂದೆ ಜಿಲ್ಲಾ ಕೇಂದ್ರದಲ್ಲಿ ಎಸ್ಎಸ್ಎಲ್ಸಿ ಖಾಸಗಿ ಪರೀಕ್ಷೆಯನ್ನು ಆಯೋಜಿಸುತ್ತಿದ್ದರು. ಬಾರಿ ತಾಲೂಕು ಕೇಂದ್ರದಲ್ಲಿ ಪ್ರಾರಂಭಿಸಿದ್ದರಿಂದ ಮಹಿಳೆ ಅಂದಾಜು 30-35 ಕಿ.ಮೀ ದೂರದಲ್ಲಿರುವ ಕೊಡಗಾನೂರಿನಿಂದ ಇಲ್ಲಿನ ಅಭ್ಯೂದಯ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಪ್ರಾರಂಭಿಸಿರುವ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದಿದ್ದಾರೆ.

ಪರೀಕ್ಷಾ ನಿಯಮಗಳಂತೆ ಮಗುವನ್ನು ಕೇಂದ್ರದ ಹೊರಗೆ ಕರ್ತವ್ಯಕ್ಕೆ ನಿಯೋಜಿಸಿದ್ದ ಆಶಾ ಕಾರ್ಯಕರ್ತೆ ಉಮಾ ಶಾರದಳ್ಳಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕಿ ನದಾಫ ಅವರ ಆರೈಕೆಯಲ್ಲಿ ಬಿಟ್ಟು ಪರೀಕ್ಷೆ ಬರೆದಿದ್ದಾರೆ. ಆಗಾಗ ಪರೀಕ್ಷೆಯಿಂದ ಹೊರಗೆ ಬಂದು ಮಗುವಿಗೆ ಎದೆ ಹಾಲು, ನೀರು ಕುಡಿಸಿ ಸಮಾಧಾನ ಪಡಿಸಿ ಮತ್ತೆ ಕೊಠಡಿಯೊಳಕ್ಕೆ ಹೋಗಿ ಪರೀಕ್ಷೆ ಬರೆದಿದ್ದಾರೆ. ಆಶಾ ಮತ್ತು ಸ್ಕೌಟ್ಸ್ ಸಿಬ್ಬಂದಿ ಪರೀಕ್ಷೆ ಮುಗಿಯುವವರೆಗೂ ಮಗುವಿನ ಲಾಲನೆ, ಪಾಲನೆ ಮಾಡಿ ಮಾನವೀಯತೆ ಅನಾವರಣಗೊಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.nationaltv.kannada

Leave a Reply

Your email address will not be published. Required fields are marked *

Next Post

ರೆಸ್ಟೋರೆಂಟ್ ನಲ್ಲಿ ಮಹಿಳೆ ಯೊಬ್ಬರ ಮೇಲೆ ಹಲ್ಲೆ...!

Wed Mar 30 , 2022
ಯುವ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮೊಹಮ್ಮದ್ ನಲಪಾಡ್ ಅವರ ಒಡೆತನದ ರೆಸ್ಟೋರೆಂಟ್ ನಲ್ಲಿ ಮಹಿಳೆ ಯೊಬ್ಬರ ಮೇಲೆ ಹಲ್ಲೆ ಮತ್ತು ಕಿರುಕುಳ ನಡೆಸಿದ ಕುರಿತು ಪ್ರಕರಣ ದಾಖಲಾಗಿದ್ದು, ಘಟನೆಯ ಸಿಸಿಟಿವಿಯಲ್ಲಿ ದೃಶ್ಯಾವಳಿ ಸೆರೆಯಾಗಿದೆ.ನಲಪಾಡ್ ರೆಸ್ಟೋರೆಂಟ್ ಕಟ್ಟಡದಲ್ಲಿ  ಕೇಸರಿ ರೆಸ್ಟೋರೆಂಟ್ ನಡೆಸುತ್ತಿದ್ದ ಮಹಿಳೆ ಕೃತಿಕಾ ಗೌಡ ಎನ್ನುವವರನ್ನು ರೆಸ್ಟೋರೆಂಟ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಿಯಾಜ್ ಅಹಮದ್ ಹಲ್ಲೆ ಮತ್ತು ತಳ್ಳಾಟ ನಡೆಸಿದ್ದಾರೆ.ಮೊಹಮ್ಮದ್ ನಲಪಾಡ್ ಅವರ ಒಡೆತನಕ್ಕೆ ಸೇರಿರುವ ನಲಪಾಡ್ ರೆಸ್ಟೋರೆಂಟ್ ನಲ್ಲಿ ಕೃತಿಕಾ ಗೌಡ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: