SSLC ಪರೀಕ್ಷೆ ಬರೆಯಲು ಬಂದಿದ್ದ 6 ನಕಲಿ ವಿದ್ಯಾರ್ಥಿಗಳು…!

ಇಂದಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭಗೊಂಡಿದೆ. ಮೊದಲ ದಿನದಂದೇ ಪರೀಕ್ಷೆ ಬರೆಯಲು ಬಂದಂತ 6 ನಕಲಿ ವಿದ್ಯಾರ್ಥಿಗಳನ್ನು ಪೊಲೀಸರು ಚಿಕ್ಕೋಡಿಯಲ್ಲಿ ಬಂಧಿಸಿದ್ದಾರೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್ ಡಿ ಕಾಲೇಜಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಕ್ಕೇ, ಇಂದು ಅಸಲಿ ಅಭ್ಯರ್ಥಿಗಳ ಬದಲಾಗಿ, ನಕಲಿ 6 ಅಭ್ಯರ್ಥಿಗಳು ಪರೀಕ್ಷೆ ಬರೆಯೋದಕ್ಕಾಗಿ ತೆರಳಿದ್ದರು.ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳ ಪ್ರವೇಶ ಪತ್ರ ಪರೀಕ್ಷಿಸಿ, ಒಳ ಬಿಡುವಂತ ಸಂದರ್ಭದಲ್ಲಿ ನಕಲಿ ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು 6 ನಕಲಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ.ಪೊಲೀಸರು ವಶಕ್ಕೆ ಪಡೆದಿರುವಂತ ನಕಲಿ ವಿದ್ಯಾರ್ಥಿಗಳನ್ನು ರಾಹುಲ್, ಭೀಮಶಿ ಹುಲಕುಂದ, ಕಾರ್ತಿಕ್ ಲಚ್ಚಪ್ಪ ಕುಂಬಾರ್, ಸಿದ್ಧು ಮಾದೇವ್ ಜೋಗಿ, ಮಾಂತೇಶ್ ಸಂಗಪ್ಪ ಡೊಳ್ಳಿನವರ ಹಾಗೂ ಸವೀತಾ ಮಾದೇವ ಹೊಸೂರು ಎಂದು ಗುರ್ತಿಸಲಾಗಿದೆ. ಈ ಸಂಬಂಧ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.nationaltv.kannada

Leave a Reply

Your email address will not be published. Required fields are marked *

Next Post

ಇಂದು, ನಾಳೆ ಭಾರತ್ ಬಂದ್ ಗೆ ಕರೆ

Mon Mar 28 , 2022
ಕಾರ್ಮಿಕ, ರೈತ ವಿರೋಧಿ, ಜನವಿರೋಧಿ ಮತ್ತು ರಾಷ್ಟ್ರವಿರೋಧಿ ನೀತಿಗಳ ವಿರುದ್ಧ ಒಕ್ಕೂಟಗಳು ಎರಡು ದಿನಗಳ ಅಖಿಲ ಭಾರತ ಮುಷ್ಕರವನ್ನು ಘೋಷಿಸಿವೆ. ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಸೋಮವಾರ ಮತ್ತು ಮಂಗಳವಾರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಸಾರ್ವಜನಿಕ ವಲಯದ ಬ್ಯಾಂಕ್ ಗಳನ್ನು ಖಾಸಗೀಕರಣ ಗೊಳಿಸುವ ಸರ್ಕಾರದ ಯೋಜನೆ ಮತ್ತು ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆ 2021 ಅನ್ನು ವಿರೋಧಿಸಿ ಬ್ಯಾಂಕ್ ಒಕ್ಕೂಟಗಳು ಮುಷ್ಕರದಲ್ಲಿ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: