ಪದ್ಮನಾಭನ್ ಪುತ್ರ ಥರಗನ್ ದಯಾಳ್ ಸ್ಟ್ರೀಟ್ ಲೈಟ್ ಪ್ರೊಡಕ್ಷನ್ಸ್

 

 

ಪದ್ಮನಾಭನ್ ಪುತ್ರ ಥರಗನ್ ದಯಾಳ್ ಸ್ಟ್ರೀಟ್ ಲೈಟ್ ಪ್ರೊಡಕ್ಷನ್ಸ್

 

ಸ್ಯಾಂಡಲ್ ವುಡ್ ನ ನಿರ್ದೇಶಕ ದಯಾಳ್ ಪದ್ಮನಾಭನ್ ಈಗಾಗಲೇ ಡಿ ಪಿಕ್ಚರ್ಸ್ ಹೆಸರಿನ ಚಿತ್ರ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. 2008ರಲ್ಲಿ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರಿಂದ ಆ ಸಂಸ್ಥೆ ಲೋಕಾರ್ಪಣೆಗೊಂಡಿತ್ತು. ಸರ್ಕಸ್ ಆ ಸಂಸ್ಥೆಯ ಮೊದಲ ಚಿತ್ರವಾಗಿ ಹೊರಹೊಮ್ಮಿತ್ತು. ಅದಾದ ಮೇಲೆ ಒಟ್ಟು 9 ಸಿನಿಮಾಗಳನ್ನು ಈ ಸಂಸ್ಥೆಯಡಿ ದಯಾಳ್ ನಿರ್ಮಿಸಿದ್ದಾರೆ.  ಹಗ್ಗದ ಕೊನೆ ಚಿತ್ರಕ್ಕೆ 2014ರಲ್ಲಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. 2018ರಲ್ಲಿ ಆ ಕರಾಳ ರಾತ್ರಿ ಚಿತ್ರಕ್ಕೂ ರಾಜ್ಯ ಪ್ರಶಸ್ತಿ ಸಂದಿದೆ.

ಹೀಗಿರುವಾಗಲೇ ಇದೇ ದಯಾಳ್ ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ದಯಾಳ್ ಅವರ ಮಗ ಥರಗನ್ ದಯಾಳ್ ಸ್ಟ್ರೀಟ್ ಲೈಟ್ ಪ್ರೊಡಕ್ಷನ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಶುರುಮಾಡಿದ್ದಾರೆ.  ಆ ಹೆಸರಿಡುವುದಕ್ಕೂ ಬಲವಾದ ಕಾರಣವೊಂದಿದೆ. ಬಡತನದ ಕುಟುಂಬದಿಂದ ಬಂದ ಅವರಿಗೆ ಬಾಲ್ಯದಲ್ಲಿ ಬೀದಿ ಬದಿಯ ದೀಪ ಗಾಢವಾದ ಪ್ರಭಾವ ಬೀರಿತ್ತು. ಅದನ್ನು ಗಮನದಲ್ಲಿಟ್ಟುಕೊಂಡೇ ಅದೇ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಶುರುಮಾಡಿದ್ದಾರೆ. ಈ ಸಂಸ್ಥೆಯಿಂದ ಅತ್ಯುತ್ತಮ ಗುಣಮಟ್ಟದ ಸಿನಿಮಾಗಳನ್ನು ಕೊಡುವ ಮಹದಾಸೆ ಮತ್ತು ಉದ್ದೇಶ ದಯಾಳ್ ಮತ್ತವರ ಕುಟುಂಬದವರದ್ದಾಗಿದೆ. ಅದಕ್ಕೆ ಎಲ್ಲರ ಸಹಕಾರವನ್ನು ಅವರು ಬೇಡುತ್ತಿದ್ದಾರೆ.

Leave a Reply

Your email address will not be published. Required fields are marked *

Next Post

ಗುಜರಾತ್​ನಲ್ಲಿ 108 ಫೀಟ್ ಎತ್ತರದ ಹನುಮಾನ್ ಮೂರ್ತಿ

Sat Apr 16 , 2022
  ಮೋರ್ಬಿಯಲ್ಲಿರುವ ಬಾಪು ಕೇಶವಾನಂದ ಜಿ ಅವರ ಆಶ್ರಮದಲ್ಲಿ ಪಶ್ಚಿಮದಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎಂದು PMO ಹೇಳಿಕೆಯಲ್ಲಿ ತಿಳಿಸಿದೆ. ಹೊಸದಿಲ್ಲ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಏಪ್ರಿಲ್ 16, 2022) ಗುಜರಾತ್‌ನ ಮೊರ್ಬಿಯಲ್ಲಿ ಹನುಮಾನ್ ಜಯಂತಿಯ ಸಂದರ್ಭದಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ 108 ಅಡಿ ಹನುಮಾನ್ ಪ್ರತಿಮೆಯನ್ನುಅನಾವರಣಗೊಳಿಸಲಿದ್ದಾರೆ. ಪ್ರಧಾನಮಂತ್ರಿಗಳ ಕಚೇರಿ ಬಿಡುಗಡೆ ಮಾಡಿದ ಬಿಡುಗಡೆಯ ಪ್ರಕಾರ, `ಹನುಮಾನ್ಜಿ ಚಾರ್ ಧಾಮ್~ ಯೋಜನೆಯ ಭಾಗವಾಗಿ ದೇಶಾದ್ಯಂತ ನಾಲ್ಕು ದಿಕ್ಕುಗಳಲ್ಲಿ ನಿರ್ಮಿಸಲಾಗುತ್ತಿರುವ ನಾಲ್ಕು […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: