ವಿಚಾರಣಾಧೀನ ಖೈದಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಗದಗ ತಾಲ್ಲೂಕಿನ ಅಡವಿ ಸೋಮಾಪುರ ತಾಂಡಾದ ನಿವಾಸಿ ರಾಜು ಪಾಂಡಪ್ಪ ಲಮಾಣಿ (19) ಆತ್ಮಹತ್ಯಗೆ ಶರಣಾದ ಯುವಕ. ಅಪ್ರಾಪ್ತ ಬಾಲಕಿಯ ಜೊತೆಗಿನ ಪ್ರೇಮ ಪ್ರಕರಣದಲ್ಲಿ ಯುವಕ ಜೈಲು ಸೇರಿದ್ದ. ಯುವಕನ ವಿರುದ್ದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಲಾಗಿತ್ತು. ಈ ಹಿನ್ನಲೆ ಯುವಕ 20 ದಿನಗಳಿಂದ ಜೈಲಿನಲ್ಲೇ ಇದ್ದ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಜೈಲು ಸೇರಿದ್ದ ರಾಜುನನ್ನು ಪ್ರೀತಿ ಮಾಡಿದ್ದ ಅಪ್ರಾಪ್ತ ಬಾಲಕಿ ಹಾಗೂ ಪೋಷಕರು ಭೇಟಿ ಮಾಡಿದ್ದರು. ಅವರು ಭೇಟಿ ಮಾಡಿದ ಬೆನ್ನಲ್ಲೇ ಯುವಕ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಗಿದೆ. ಮಗ ಆತ್ಮಹತ್ಯೆ ಮಾಡಿಕೊಂಡಿರೋ ಬಗ್ಗೆ ತಿಳಿಯುತ್ತಿದ್ದಂತೆ ಜೈಲಿನ ಎದುರು ಆಗಮಿಸಿದ್ದ ಪೋಷಕರು ಕಣ್ಣೀರಿಟ್ಟಿದ್ದು, ಹುಡುಗಿಯ ಮನೆಯವರು ರಾಜುನನ್ನು ಭೇಟಿ ನೀಡಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಜೈಲು ಸಿಬ್ಬಂದಿ ನಿರ್ಲಕ್ಷ್ಯವೇ ತಮ್ಮ ಮಗ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೆಂದು ಪೋಷಕರು ಆರೋಪ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada