ತನ್ನ ನೆಚ್ಚಿನ ನಟನನ್ನುನೋಡಲು ಅಭಿಮಾನಿಗಳು ಏನು ಬೇಕಾದರೂ ಮಾಡುತ್ತಾರೆ. ಜೊತೆಗೆ ಅವರ ಹಿರೋ ಜೊತೆ ಒಂದು ಪೋಟೋ ಸಿಕ್ಕರೆ ಸಾಕು ಎಂದುಕೊಳ್ಳುತ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ.ಹೀಗೆ ಸುದೀಪ್ ಅವರನ್ನು ಭೇಟಿಯಾಗಬೇಕೆಂದು ಕೆಲ ಅಭಿಮಾನಿಗಳು ಕಲಬುರಗಿಯಿಂದ ನಡೆದುಕೊಂಡೇ ಬಂದಿದ್ದಾರೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಅವರಾದಿ ಗ್ರಾಮದ ನಿವಾಸಿಗಳಾದ ರೇಣುಕಾ, ಗೋಪಾಲ, ಮೇರಮ್ಮ ಅವರಿಗೆ ಕಿಚ್ಚ ಸುದೀಪ್ ಕಂಡರೆ ಪಂಚಪ್ರಾಣ. ಒಮ್ಮೆಯಾದರೂ ಅವರನ್ನು ಭೇಟಿಯಾಗಬೇಕೆಂಬ ಆಸೆ ಇಟ್ಟುಕೊಂಡಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಲೇಬೇಕೆಂಬ ಆಸೆಯಿಂದ ಊರಿನಿಂದ ಕಾಲ್ನಡಿಗೆಯಲ್ಲೇ ಹೊರಟು ಸತತ 14 ದಿನ ನಡೆದುಕೊಂಡು ಬಂದ ಅಭಿಮಾನಿಗಳು. ಸುದೀಪ್ ರನ್ನು ಬೆಂಗಳೂರಿನ ಪುಟ್ಟೇನಹಳ್ಳಿ ನಿವಾಸದಲ್ಲಿ ಭೇಟಿಯಾಗಿ ಸಂತೋಷಪಟ್ಟಿದ್ದಾರೆ. ಕಾಲ್ನಡಿಗೆಯಲ್ಲಿ ಬಂದ ಅಭಿಮಾನಿಗಳನ್ನು ತಮ್ಮ ನಿವಾಸದಲ್ಲಿ ಕುರ್ಚಿಯಲ್ಲಿ ಕುರಿಸಿ ಮಾತನಾಡಿದ್ದಾರೆ ಕಿಚ್ಚ ಸುದೀಪ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada