ಆತನಿಗೆ ಎಂಗೇಜ್ಮೆಂಟ್ ಆಗಿತ್ತು. ಆತ ಕೂಡ ಖುಷಿಯಿಂದಲೇ ಹೋಗಿ ಆ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಬಂದಿದ್ದ. ಮನೆಯಲ್ಲೂ ಮಗನ ಮದುವೆಯ ಸಂಭ್ರಮ ಮನೆಮಾಡಿತ್ತು. ಆದರೆ ಆತನಿಗೆ ಏನಾಗಿತ್ತೋ ಏನೋ.. ಸೂಸೈಡ್ ಮಾಡಿಕೊಂಡು ಬಿಟ್ಟ. ಮಗ ಯಾಕ್ ಹಿಂಗೆ ಮಾಡಿಕೊಂಡ ಅಂತ ತಲೆ ಕೆಡಿಸಿಕೊಂಡ ಮನೆಯವರು, ಅವನ ಮೊಬೈಲ್ ಜಾಲಾಡಿದರು. ಆಗ ಅಲ್ಲಿತ್ತು ಆ ವಿವಾಹಿತ ಮಹಿಳೆಯ ಬ್ಲ್ಯಾಕ್ ಮೇಲ್ ಸಾಕ್ಷ್ಯ!
ರಕ್ತದಲ್ಲೂ ಪತ್ರ ಬರೆದು ಸಾರಿ ಕೇಳಿದ್ದ ಆತ, ಕೊನೆಗೆ ಆಕೆ ಕಾಟ ತಾಳಲಾರದೇ ಸೂಸೈಡ್ ಮಾಡಿಕೊಂಡು ಬಿಟ್ಟಿ.ಶಿಡ್ಲಘಟ್ಟದಲ್ಲಿ ಸೂಸೈಡ್ ಮಾಡಿಕೊಂಡಿದ್ದ ಯುವಕ ಸೆಲ್ಫಿ ವಿಡಿಯೋ ಮಾಡಿಕೊಂಡು, ವಿಷ ಕುಡಿದ,ಮುನಿಕೃಷ್ಣ ಅಳುತ್ತಲೇ ಸೆಲ್ಫಿ ವಿಡಿಯೋ ಮಾಡಿದ್ದಾನೆ. ತನ್ನ ಕೆನ್ನೆ ಮೇಲೆಲ್ಲಾ ತಾನೇ ಪಟಪಟನೆ ಹೊಡೆದುಕೊಂಡು, ಅತ್ತಿದ್ದಾನೆ. ಬಳಿಕ ತಲೆ ತಲೆ ಚಚ್ಚಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಇದಾದ ಮೇಲೆ ಸೆಲ್ಫಿ ವಿಡಿಯೋದಲ್ಲಿ ವಿಷ ಕುಡಿದು, ಒದ್ದಾಡುತ್ತಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada