ಬೇಸಿಗೆಯಲ್ಲಿ ಚರ್ಮದ ಸಮಸ್ಯೆಗಳು ಹೆಚ್ಚಾಗುತ್ತೆ. ಬೆವರು ಗುಳ್ಳೆ, ತುರಿಕೆಯಂತಹ ಸಮಸ್ಯೆಗಳು ಹಲವರನ್ನು ಕಾಡುತ್ತೆ. ಬೇಸಿಗೆಯಲ್ಲಿ ಜೀವನಶೈಲಿಯನ್ನು ಕೊಂಚ ಬದಲಾವಣೆ ಮಾಡಿಕೊಳ್ಳುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಬೇಸಿಗೆ ಬಂತೆಂದರೆ ತ್ವಚೆಯನ್ನು ಕಾಪಾಡಿಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಬೆವರಿನಿಂದ ಉಂಟಾಗುವ ತೇವಾಂಶದಿಂದ ಚರ್ಮ ಸಮಸ್ಯೆಗಳು ಹೆಚ್ಚಾಗುತ್ತೆ.
ಬೇಸಿಗೆಯಲ್ಲಿ ಬ್ಲ್ಯಾಕ್ ಹೆಡ್ಸ್ ಮತ್ತು ಮೊಡವೆ, ತುರಿಕೆ, ಬೆವರು ಗುಳ್ಳೆಗಳಂತಹ ಸಮಸ್ಯೆಗಳು ಹೆಚ್ಚುತ್ತದೆ. ಬೇಸಿಗೆಯಲ್ಲಿ ಅಧಿಕ ತೂಕ ಹೊಂದಿದವರು ಹೆಚ್ಚು ಸಮಸ್ಯೆಗಳಿಗೆ ಒಳಗಾಗುತ್ತಾರೆ. ಬೆವರು, ಆಯಾಸ ಕಾಡುತ್ತೆ. ಬೇಸಿಗೆಯಲ್ಲಿ ಸಣ್ಣ ಬದಲಾವಣೆ ಮಾಡುವುದರಿಂದ ತ್ವಚೆಯನ್ನು ಸೂರ್ಯನ ಪ್ರಭಾವದಿಂದ ರಕ್ಷಿಸಿಕೊಳ್ಳಬಹುದು.
ಸಡಿಲವಾದ ಬಟ್ಟೆಗಳನ್ನು ಧರಿಸಿ: ಬಿಸಿಲಿಗೆ ಅತಿಯಾಗಿ ಬೆವರುತ್ತೀರಾ ಹಾಗಾದ್ರೆ ಹಗುರವಾದ ಕಾಟನ್ ಬಟ್ಟೆಗಳನ್ನು ಹಾಕಿಕೊಳ್ಳಿ. ಬಿಗಿಯಾದ ಬಟ್ಟೆಗಳನ್ನು ಧರಿಸುವುದನ್ನು ನಿಲ್ಲಿಸಿ. ಇದು ಚರ್ಮದ ತುರಿಕೆಗೆ ಕಾರಣವಾಗುತ್ತೆ.
ಆರೋಗ್ಯಕರ ಆಹಾರ ಪದ್ಧತಿ: ಬೇಸಿಗೆಯಲ್ಲಿ ಹಣ್ಣುಗಳು ಮತ್ತು ತರಕಾರಿಗಳಿಂದ ಸಮೃದ್ಧವಾಗಿರುವ ಆಹಾರವನ್ನು ತಿನ್ನಿ. ಸಂಸ್ಕರಿಸಿದ ಆಹಾರಗಳು, ಕರಿದ ಮತ್ತು ಮಸಾಲೆಯುಕ್ತ ಆಹಾರಗಳು, ಕೆಂಪು ಮಾಂಸದ ಆಹಾರತಳನ್ನು ತಿನ್ನಬೇಡಿ
ಚಹಾ, ಕಾಫಿ ಮತ್ತು ಮದ್ಯದಂತಹ ಪಾನೀಯಗಳ ಅತಿಯಾದ ಸೇವನೆಯು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಶುಚಿಯಾದ ಮತ್ತು ಆರೋಗ್ಯಕರವಾದ ಆಹಾರ ಸೇವನೆಯಿಂದ ದೇಹವನ್ನು ಒಳಗಷ್ಟೇ ಅಲ್ಲ ಹೊರಗೂ ಆರೋಗ್ಯವಾಗಿಡಬಹುದು.
ವೈದ್ಯರ ಸಲಹೆ ಪಡೆಯಿರಿ: ಚರ್ಮದ ತುರಿಕೆ ಹೆಚ್ಚಾಗಿದ್ದಲ್ಲಿ ವೈದ್ಯರ ಬಳಿ ತೆರಳಿ ಸೂಕ್ತ ಸಲಹೆ ಪಡೆದುಕೊಳ್ಳಿ. ತುರಿಕೆ ಮತ್ತು ಸೋರಿಯಾಸಿಸ್ ಸಮಸ್ಯೆಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದರೆ ಅವು ಬ್ಯಾಕ್ಟೀರಿಯಾ ಅಥವಾ ಫಂಗಲ್ ಸೋಂಕುಗಳಾಗಿ ಬೆಳೆಯಬಹುದು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada