ಐಪಿಎಲ್ ಟೂರ್ನಿಯ ಆರಂಭಕ್ಕೆ ಇನ್ನು ಕೆಲವೇ ಗಂಟೆಗಳು ಮಾತ್ರವೇ ಬಾಕಿಯಿದೆ. ಹೊಸ ಸ್ವರೂಪದೊಂದಿಗೆ ಕಣಕ್ಕಿಳಿಯಲು ಎಲ್ಲಾ ತಂಡಗಳು ಕೂಡ ಸಜ್ಜಾಗಿದ್ದು ಎರಡು ಹೊಸ ತಮಡಗಳು ಟೂರ್ನಿಗೆ ಸೇರ್ಪಡೆಯಾಗಿರುವ ಕಾರಣ ಟೂರ್ನಿಯ ಕಳೆ ಮತ್ತಷ್ಟು ಹೆಚ್ಚಿದೆ. ಸದ್ಯ ಕಾಗದದಲ್ಲಿ ತಂಡಗಳ ಬಲಾಬಲವನ್ನು ವಿಮರ್ಶೆ ಮಾಡಲಾಗುತ್ತಿದ್ದ ತಂಡಗಳ ಬಲಾಬಲಗಳ ಬಗ್ಗೆ ವಿಮರ್ಶಕರು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಈ ಹಂತದಲ್ಲಿ ದಿಗ್ಗಜ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಸುನಿಲ್ ಗವಾಸ್ಕರ್ ಕುತೂಹಲಕಾರಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ತಂಡ ಯಾವುದು ಎಂಬುದನ್ನು ಸುನಿಲ್ ಗವಾಸ್ಕರ್ ಹೆಸರಿಸಿದ್ದಾರೆ. ಐಪಿಎಲ್ ಇರಿಹಾಸದಲ್ಲಿ ಈವರೆಗೆ ಟ್ರೋಫಿ ಗೆಲ್ಲಲು ಸಾಧ್ಯವಾಗದ ತಂಡ ಈ ಬಾರಿಯ ಟ್ರೋಫಿಯನ್ನು ಎತ್ತಿ ಹಿಡಿಯಲಿದೆ ಎಂಬ ಭವಿಷ್ಯ ನುಡಿಯುವ ಮೂಲಕ ಸುನಿಲ್ ಗವಾಸ್ಕರ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ಹಾಗಾದರೆ ಸುನಿಲ್ ಗವಾಸ್ಕರ್ ಹೆಸರಿಸಿದ ಆ ಐಪಿಎಲ್ ತಂಡ ಯಾವುದು? ಯಾವ ಕಾರಣಕ್ಕಾಗಿ ಗವಾಸ್ಕರ್ ಈ ತಂಡದ ಮೇಲೆ ಈ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ?
10 ತಂಡಗಳ ಮುಖಾಮುಖಿ
ಈ ಬಾರಿಯ ಐಪಿಎಲ್ ಟೂರ್ನಿಗೂ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆದಿದ್ದು ತಂಡಗಳು ಹೊಸ ಸ್ವರೂಪವನ್ನು ಪಡೆದುಕೊಂಡಿದೆ. ಕೆಲ ತಂಡಗಳು ಹಿಂದಿನ ಆವೃತ್ತಿಯಲ್ಲಿದ್ದ ಕೆಲ ಪ್ರಮುಖ ಆಟಗಾರರನ್ನಜು ತಂಡಕ್ಕೆ ಮತ್ತೆ ಸೇರ್ಪಡೆಗೊಳಿಸಲು ಯಶಸ್ವಿಯಾಗಿದ್ದರೆ ಕೆಲ ತಂಡಗಳು ಬಹುತೇಕ ಹೊಸತನದೊಂದಿಗೆ ಕಣಕ್ಕಿಳಿಯುತ್ತಿದೆ. ಈ ಮಧ್ಯೆ ಈ ಬಾರಿ ಎರಡು ಹೊಸ ತಂಡಗಳು ಕೂಡ ಐಪಿಎಲ್ಗೆ ಸೇರ್ಪಡೆಯಾಗಿರುವ ಕಾರಣ ಟೂರ್ನಿಯ ಕುತೂಹಲ ಹೆಚ್ಚಾಗಿದೆ.
ಆ ಓರ್ವ ಆಟಗಾರನ ಬಗ್ಗೆ ಗವಾಸ್ಕರ್ಗೆ ವಿಶೇಷ ಭರವಸೆ
ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಸುನಿಲ್ ಗವಾಸ್ಕರ್ ಸ್ಪೋರ್ಟ್ಸ್ ತಕ್ ಜೊತೆಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ್ದು ತಮ್ಮ ಅಭಿಪ್ರಾಯವನ್ನು ವ್ಯಕ್ತೊಡಿಸಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ತಂಡದ ಯುವ ಆಟಗಾರನ ಬಗ್ಗೆ ಸುನಿಲ್ ಗವಾಸ್ಕರ್ ವಿಶೇಷ ಮಾತುಗಳನ್ನಾಡಿದ್ದು ಆತನ ಮೇಲೆ ವಿಶೇಷ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಆ ಯುವ ಆಟಗಾರ ಯಾರೂ ಅಲ್ಲ ರಿಷಭ್ ಪಂತ್. “ಕಳೆದ ಆವೃತ್ತಿಯಲ್ಲಿ ನಾಯಕನಾಗಿ ಪಡೆದುಕೊಂಡ ಅನುಭವ ರಿಷಭ್ ಪಂತ್ಗೆ ಈ ಬಾರಿ ಸಹಕಾರಿಯಾಗಲಿದೆ. ಈ ಮೂಲಕ ಅವರು ಹೆಚ್ಚಿನ ಆತ್ಮವಿಶ್ವಾಸವನ್ನು ಪಡೆದುಕೊಳ್ಳಲಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಭಾರತ ತಂಡದ ಪರವಾಗಿ ಆ ನೀಡಿದ ಪ್ರದರ್ಶನ ಹಾಗೂ ಆತನ ಫಾರ್ಮ್ ಅದ್ಭುತವಾಗಿದೆ. ಆದು ಆತನಿಗೆ ಖಂಡಿತವಾಗಿಯೂ ಹೆಚ್ಚಿನ ಬಲ ನೀಡಲಿದೆ” ಎಂದಿದ್ದಾರೆ ಸುನಿಲ್ ಗವಾಸ್ಕರ್
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada