ಬೇಸಿಗೆಯ ಕಾಲದಲ್ಲಿ ಚಳಿಗಾಲದಂತೆ ತ್ವಚೆ ಮತ್ತು ಚರ್ಮದ ಆರೈಕೆ ಮಾಡುವುದು ಬಹಳ ಮುಖ್ಯ. ಈ ಸಮಯದಲ್ಲಿ ಹೆಚ್ಚಾಗಿ ನೀರನ್ನು ಕುಡಿಯುವುದು, ಹೊರಗೆ ಹೋಗುವ ಸಮಯದಲ್ಲಿ ಒಳ್ಳೆಯ ಸನ್ಸ್ಕ್ರೀನ್ ಮುಖ್ಯವಾಗಿ SPF 15 ಹೊಂದಿರುವ ಸನ್ ಸ್ಕ್ರೀನ್ ಅನ್ನು ಬಳ ಸುವುದನ್ನು ಮರೆಯಬಾರದು.ಏಕೆಂದರೆ ಸೂರ್ಯನ ಬಿಸಿಲು ಚರ್ಮದ ಬಣ್ಣವನ್ನು ಕಡಿಮೆ ಮಾಡಿ, ಸನ್ ಟ್ಯಾನ್ಗೆ ಕಾರಣವಾಗುತ್ತದೆ. ಹಾಗಾಗಿ ಬೇಸಿಗೆ ಕಾಲದಲ್ಲಿ ಚರ್ಮದ ಆರೈಕೆ ಹೇಗೆ ಮಾಡಿಕೊಳ್ಳಬೇಕೆಂದರೆ. ತ್ವಚೆಯನ್ನು ದಿನಕ್ಕೆ 2 ಭಾರಿ ಶುದ್ಧೀಕರಿಸಿ.ಬೆವರಿನ ಕಾರಣ ಪ್ರತಿ ನಿತ್ಯ ಸ್ನಾನ ಮಾಡುವುದನ್ನು ತಪ್ಪಿಸದಿರಿ. ಟೋನರ್ ,ಮಾಯಿಶ್ಚರೈಸರ್ ಸನ್ಸ್ಕ್ರೀನ್ ಅನ್ನು ಪ್ರತಿ ನಿತ್ಯ ಬಳಸಿ,ಯಾವುದೇ ಪ್ರಕಾರದ ಚರ್ಮ ಹೊಂದಿದ್ದರೂ ಬೇಸಿಗೆ ಕಾಲದಲ್ಲಿ ಸನ್ಸ್ಕ್ರೀನ್ ಬಳಸುವುದನ್ನು ಮರೆಯದಿರಿ. ಇದು ಚರ್ಮವನ್ನು ತೇವಗೊಳಿಸಿ, ಸೂರ್ಯನ ಕಿರಣಗಳಿಂದ ರಕ್ಷಿಸುತ್ತದೆ. ಬೇಸಿಗೆ ಸಮಯದಲ್ಲಿ ಆದಷ್ಟು ಉದ್ದನೆಯ ತೋಳುಗಳು, ಕಾಟನ್ ಬಟ್ಟೆಗಳು, ಸನ್ ಗ್ಲಾಸ್, ಟೋಪಿಯನ್ನು ಧರಿಸಿ ಹೊರಗೆ ಹೋಗುವುದು ಒಳ್ಳೆಯದು. ಹಾಗೂ ವಾರಕ್ಕೆ 2 ಬಾರಿ ಸ್ಕ್ರಬ್ ಮಾಡುವುದನ್ನು ಮರೆಯದಿರಿ. ಸ್ಕ್ರಬ್ ಮಾಡುವುದರಿಂದ ತ್ವಚೆಯಲ್ಲಿನ ಹೆಚ್ಚುವರಿ ಕೊಳೆ, ಬ್ಲಾಕ್ ಹೆಡ್ಸ್ ಮಾಯವಾಗುತ್ತದೆ. ಚರ್ಮಕ್ಕೆ ಸ್ಕ್ರಬ್ ಮಾಡುವುದರಿಂದ ರಕ್ತ ಪರಿಚಲನೆ ಹೆಚ್ಚುತ್ತದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada