ಚಲನಚಿತ್ರಗಳಲ್ಲಿ ಬರುತ್ತಿದ್ದ ಬ್ರಹ್ಮಾವರದಲ್ಲಿ ನೈಜವಾಗಿ ನಡೆದು ಹೋಗಿದೆ. ಭಾನುವಾರ ತಾಳಿ ಕಟ್ಟುವ ವೇಳೆ ವಧು ಮದುವೆ ಇಷ್ಟವಿಲ್ಲ ಎಂದ ಕಾರಣ ಮದುವೆ ಮುರಿದು ಬಿದ್ದಿದೆ. ಮೂಲತಃ ಇವರು ಬ್ರಹ್ಮಾವರದವರಾಗಿದ್ದು, ವರ ವಿದೇಶದಲ್ಲಿದ್ದು, ವಧು ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದರು. ೪ ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಬ್ಬರೂ ಸಹ ದೂರವಾಣಿ ಸಂಪರ್ಕದಲ್ಲಿದ್ದು ಮದುವೆ ಕಾರ್ಯಕ್ರಮಗಳೆಲ್ಲ ಮುಂದುವರೆದಿದ್ದು ತಾಳಿ ಕಟ್ಟುವ ಸಂದರ್ಭದಲ್ಲಿ ವಧು, ವರನನ್ನು ಅಲ್ಲಿಯೇ ಕೊಠಡಿಗೆ ಕರೆದುಕೊಂಡು ಹೋಗಿ ಈ ಮದುವೆ ಇಷ್ಟವಿಲ್ಲ. ಬೇರೆ ಪ್ರಪೋಸಲ್ ಒಪ್ಪಿರುವುದಾಗಿ ತಿಳಿಸಿದ್ದಾಳೆ ಎನ್ನಲಾಗಿದೆ.
ಸುಮಾರು ೧೦೦೦ ಮಂದಿಗೆ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಮದುವೆಗೆ ಆಗಮಿಸಿದ್ದ ಆಮಂತ್ರಿಕರು ಆಶ್ಚರ್ಯಪಟ್ಟರು. ಬ್ರಹ್ಮಾವರ ಪೋಲಿಸರ ಮಧ್ಯಸ್ಥಿಕೆಯಲ್ಲಿ ಎರಡೂ ಕಡೆಯವರು ಸಮಪಾಲು ಹಾಕಲು ಹೇಳಿ ಪ್ರಕರಣ ಮುಕ್ತಾಯಗೊಳಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada